ಕನ್ನಡ ಚಿತ್ರರಂಗಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಮಗನ ಗ್ರ್ಯಾಂಡ್ ಎಂಟ್ರಿ ; ಡೈರೆಕ್ಟರ್ ಯಾರು ಗೊತ್ತಾ ?

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ ಪ್ರಯತ್ನ ಮಾಡುತ್ತಾರೆ.

ಕನ್ನಡ ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಹಲವಾರು ಜನ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಬಂದಿದ್ಧಾರೆ. ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಗೆದ್ದಿದ್ದಾರೆ. ಇನ್ನು ಕೆಲವರು ಸೋತಿದ್ದಾರೆ. ಈ ಸಾಲಿಗೀಗ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಅವರ ಮುದ್ದಿನ ಮಗ ಆಯುಷ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

Aayush son of Upendra begins his acting debut with a script pooja ceremony

ಹೌದು, ಆಯುಷ್ ರಂಗಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಮೊನ್ನೆ ಆಯುಷ್ ಬರ್ತ್‌ಡೇಯಂದು ಚಿತ್ರದ ಸ್ಕ್ರಿಪ್ಟ್ ಪೂಜೆ ಕೂಡ ಮಂತ್ರಾಲಯದಲ್ಲಿ ನೆರವೇರಿದೆ. ಇನ್ನು, ಉಪೇಂದ್ರ ಹೇಳಿ ಕೇಳಿ ಭಾರತದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಸಾಮಾನ್ಯವಾಗಿ ತಂದೆ ಡೈರೆಕ್ಟರ್ ಆಗಿದ್ದರೆ ತಮ್ಮ ಮಕ್ಕಳನ್ನು ಬೇರೆಯವರ ಕೈಗೆ ಕೊಡುವ ಬದಲು ತಾವೇ ತಮ್ಮ ಮಕ್ಕಳ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಹಿಂದೊಮ್ಮೆ ಆಯುಷ್ ತಮ್ಮ ಮೊದಲ ಚಿತ್ರದ ಕುರಿತು ತಮಗಿರುವ ಕನಸು ಹಂಚಿಕೊಂಡಿದ್ದರು. ನಾನು ಚಿತ್ರರಂಗಕ್ಕೆ ಬರುವುದಾದರೆ, ಅಪ್ಪನೇ ನನ್ನ ಮೊದಲ ಚಿತ್ರವನ್ನು ನಿರ್ದೇಶನ ಮಾಡಬೇಕೆಂದುಕೊಂಡಿದ್ದರು. ಹೀಗಾಗಿ ಉಪೇಂದ್ರ ಅವರೇ ತಮ್ಮ ಮಗನನ್ನು ಲಾಂಚ್ ಮಾಡಬಹುದು ಎಂದು ಅನೇಕರು ಅಂದುಕೊಂಡಿದ್ದರು.

ಆದರೆ. ಮಗನಿಗೆ ತಂದೆ ಆಕ್ಷನ್ ಕಟ್ ಹೇಳುವ ಕಾಲ ಇನ್ನೂ ದೂರದಲ್ಲಿದೆ. ಆಯುಷ್ ಮೊದಲ ಚಿತ್ರದ ಸಾರಥ್ಯವನ್ನು ಬೇರೆ ನಿರ್ದೇಶಕರಿಗೆ ವಹಿಸಲಾಗಿದೆ. ಆ ನಿರ್ದೇಶಕ ಯಾರು ಎನ್ನುವ ಕುತೂಹಲ ಎಲ್ಲರಲ್ಲಿ ಇದೆಯಾದರೂ ಸದ್ಯ ಆಯುಷ್ ಅವರ ಚೊಚ್ಚಲ ಚಿತ್ರವನ್ನು ಪುರುಷೋತ್ತಮ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಉಪೇಂದ್ರ ಮನೆಯ ಸುತ್ತ ಮುತ್ತ ಕೇಳಿ ಬರುತ್ತಿದೆ.

ಅಂದ್ಹಾಗೇ ಈ ಪುರುಷೋತ್ತಮ್ ಬೇರೆ ಯಾರು ಅಲ್ಲ ಬದಲಿಗೆ ಇಂದಿನ ನ್ಯಾಷನಲ್ ಸ್ಟಾರ್ ಯಶ್‌ಗೆ ಆ ಕಾಲದಲ್ಲಿಯೇ ನಿರ್ದೇಶನ ಮಾಡಿದ ಹೆಗ್ಗಳಿಕೆ ಇವರದ್ದು. ಆ ಚಿತ್ರದ ಹೆಸರು ಮೊದಲ ಸಲ. ಯೋಗೀಶ್ ನಾರಾಯಣ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ಯಶ್ ಗೆ ಭಾಮಾ ಜೋಡಿಯಾಗಿದ್ದರು. ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಯಶಸ್ಸನ್ನು ಕೂಡ ಕಂಡಿತ್ತು.

ಆದರೂ ಅದ್ಯಾಕೋ ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಂಡಿದ್ದ ಪುರುಷೋತ್ತಮ್ ಈಗ ಆಯುಷ್ ಚಿತ್ರದ ಮೂಲಕ ತಮ್ಮ ಸೆಕೆಂಡ್ ಇನಿಂಗ್ಸ್ ಶುರು ಮಾಡಲಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ.

ಇನ್ನು ಹಿರಿಯ ನಟಿ ತಾರಾ ಅವರ ಪತಿ ವೇಣು ಆಯುಷ್ ಮೊದಲ ಚಿತ್ರವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಜವಾಬ್ಧಾರಿಯನ್ನು ವಹಿಸಿಕೊಂಡಿದ್ಧಾರೆ. ಇದಕ್ಕೆ ಪುಷ್ಠಿ ನೀಡುವಂತೆ ಮಂತ್ರಾಲಯದಲ್ಲಿ ನಡೆದ ಸ್ಕ್ರಿಪ್ಟ್ ಪೂಜೆಯಲ್ಲಿ ತಾರಾ ಮತ್ತು ವೇಣು ಕೂಡ ಭಾಗಿಯಾಗಿದ್ದಾರೆ.

ಇನ್ನುಳಿದಂತೆ ಚಿತ್ರದ ನಿರ್ಮಾಪಕರು ಯಾರು, ? ಉಳಿದ ತಾರಾಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ? ತಾಂತ್ರಿಕ ವರ್ಗದ ಕಥೆಯೇನು ? ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನು ಸಿಗಬೇಕಿದೆ. ಆಯುಷ್ ಜೊತೆ ಯುವ ನಟಿ ಚಿತ್ರರಂಗಕ್ಕೆ ಬರುವ ಸಾಧ್ಯತೆ ಇದೆ. ಶೀಘ್ರದಲ್ಲಿಯೇ ಆಯುಷ್ ಚಿತ್ರದ ಮೊದಲ ಚಿತ್ರದ ಮುಹೂರ್ತ ಸಮಾರಂಭ ಕೂಡ ನಡೆಯಲಿದೆ. ಅವತ್ತೇ ಚಿತ್ರದ ಕುರಿತು ಹೆಚ್ಚಿನ ವಿವರಗಳು ಬಹಿರಂಗವಾಲಿವೆ.

More from Filmibeat

English summary
Aayush, the son of Kannada film industry stars Upendra and Priyanka, has officially launched his acting career with a traditional script pooja ceremony for his debut film. The event marks the beginning of a new chapter for the star kid, drawing attention and blessings from fans and industry insiders alike.
Read more about: upendra nepotism filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X