»   » 'ಉಪ್ಪಿ' ಚಿತ್ರಕ್ಕೆ ಎಂಟ್ರಿ ಕೊಟ್ಟ ಖಡಕ್ ವಿಲನ್

'ಉಪ್ಪಿ' ಚಿತ್ರಕ್ಕೆ ಎಂಟ್ರಿ ಕೊಟ್ಟ ಖಡಕ್ ವಿಲನ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಚಿತ್ರಕ್ಕೆ ಟಾಲಿವುಡ್ ನಿಂದ ಖಡಕ್ ವಿಲನ್ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಅಭಿಮನ್ಯು ಸಿಂಗ್ ಉಪೇಂದ್ರ ಎದುರು ಖಳನಾಯಕನಾಗಿ ಅಬ್ಬರಿಸಿಲಿದ್ದಾರೆ.

ಇತ್ತೀಚೆಗಷ್ಟೆ ಸೆಟ್ಟೇರಿದ್ದ 'ಹೋಮ್ ಮಿನಿಸ್ಟರ್' ಚಿತ್ರದಲ್ಲಿ ಉಪ್ಪಿಗೆ ಅಭಿಮನ್ಯು ಸಿಂಗ್ ಸಾಥ್ ಕೊಡಲಿದ್ದಾರೆ. ಈ ಚಿತ್ರಕ್ಕೆ ಆಯ್ಕೆಯಾಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಅಭಿಮನ್ಯು ಸಿಂಗ್ ''ಎರಡು ಕಾರಣಗಳಿಂದ ಚಿತ್ರವನ್ನ ಒಪ್ಪಿಕೊಂಡಿದ್ದಾರಂತೆ. ಮೊದಲನೇಯದು ''ಇದೊಂದು ಫ್ಯಾಮಿಲಿ ಮನರಂಜನಾತ್ಮಕ ಚಿತ್ರವಾಗಿದ್ದು, ಉಪೇಂದ್ರ ನಾಯಕನಾಗಿರುವುದು. ಎರಡನೇಯದು ಚಿತ್ರದಲ್ಲಿ ಅಭಿಮನ್ಯು ಸಿಂಗ್ ಅವರದ್ದು ಸೈಕೋ ಮಾದರಿ ಪಾತ್ರ. ಇದುವರೆಗೂ ಈ ರೀತಿಯ ಪಾತ್ರ ಮಾಡಿಲ್ಲ. ಹಾಗಾಗಿ, ಇಷ್ಟವಾಯಿತು'' ಎಂದಿದ್ದಾರೆ.

ಸ್ಟಾರ್ ಡೈರೆಕ್ಟರ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

Abhimanyu Singh is villain in Upendra’s Home Minister

ಅಂದ್ಹಾಗೆ, ಈ ಹಿಂದೆ ಉಪ್ಪಿ ಜೊತೆ 'ನಾಗಾರ್ಜುನ' ಎಂಬ ಚಿತ್ರವನ್ನ ಶುರು ಮಾಡಿದ್ದ ನಿರ್ಮಾಪಕರೇ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ನಿರ್ದೇಶಕರು ಹೆಸರು ಬಹಿಂಗವಾಗಿಲ್ಲ. 'ಹೋಮ್ ಮಿನಿಸ್ಟರ್' ಅಂದಾಕ್ಷಣ ರಾಜಕೀಯ ಕುರಿತ ಚಿತ್ರವಾಗಿರಬಹುದು ಎಂಬ ಕಲ್ಪನೆ ಬರುವುದು ಸಹಜ. ಆದ್ರೆ, ಇದೊಂದು ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಚಿತ್ರಕಥೆಯಾಗಿದ್ದು, ನಾಯಕ ಮತ್ತು ನಾಯಕಿ ಮಧ್ಯೆ ನಡೆಯುವ ಕಥೆ.

'ಹೋಮ್ ಮಿನಿಸ್ಟರ್' ಟೈಟಲ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

ಈ ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನು ಅಂತಿಮವಾಗಿಲ್ಲ. ವಿಶೇಷ ಅಂದ್ರೆ ಕನ್ನಡ ಮತ್ತು ತೆಲುಗಿನಲ್ಲಿ ಉಪ್ಪಿಯ 'ಹೋಮ್ ಮಿನಿಸ್ಟರ್' ಮೂಡಿಬರಲಿದೆ

English summary
A popular name in Tamil and Telugu films, Abhimanyu Singh will be seen in a negative role in Upendra's Home Minister.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada