For Quick Alerts
  ALLOW NOTIFICATIONS  
  For Daily Alerts

  ಅಯ್ಯೋ! ಈ ಸಿನಿಮಾದ ರೀತಿಯೇ ಇದೆ ಅಭಿನಂದನ್ ಕಥೆ

  |

  ನೈಜ ಘಟನೆಯನ್ನು ಇಟ್ಟುಕೊಂಡು ಭಾರತ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಆದರೆ, ಇಲ್ಲಿ ಸಿನಿಮಾದ ಕಥೆಯೇ ನಿಜವಾಗಿ ನಡೆದು ಹೋಗಿದೆ.

  ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಪಿ ಪಾಕಿಸ್ತಾನದ ಸೈನ್ಯಕ್ಕೆ ಸೆರೆ ಸಿಕ್ಕಿದ್ದಾರೆ. ಇಡೀ ಭಾರತವೇ 'ನಮ್ಮ ಹೀರೋ ವಾಪಸ್ ಬರಬೇಕು' ಎಂದು ಪ್ರಾರ್ಥನೆ ಮಾಡಿದೆ. ಇದರ ನಡುವೆಯೇ ಅಭಿನಂದನ್ ಅವರ ಕಥೆ 'ಕಾಟ್ರು ವೆಲೆಯಾಡು' ಸಿನಿಮಾಗೆ ಹೊಂದುತ್ತಿದೆ.

  ತಾನೇ ಕೆಲಸ ಮಾಡಿದ ಸಿನಿಮಾದ ಕತೆಯಂತೆ ಆಗಿದೆ ಮಗನ ಬದುಕು

  'ಕಾಟ್ರು ವೆಲೆಯಾಡು' ಮಣಿರತ್ನಂ ನಿರ್ದೇಶನದಲ್ಲಿ 2017ರಲ್ಲಿ ಬಂದ ಸಿನಿಮಾ. ಈ ಸಿನಿಮಾದಲ್ಲಿಯೂ ನಾಯಕ ಪಾಕಿಸ್ತಾನದ ಸೈನ್ಯಕ್ಕೆ ಸೆರೆಯಾಗುತ್ತಾನೆ. ಅಚ್ಚರಿ ವಿಷಯ ಏನೆಂದರೆ, ಈ ಸಿನಿಮಾದ ಕಥೆಗೆ ಕೆಲಸ ಮಾಡಿದ್ದು, ಅಭಿನಂದನ್ ಅವರ ತಂದೆ ವಾರ್ತಮನ್.

  ವಾರ್ತಮನ್ ಏರ್ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದರು. ಈ ಕಾರಣ 'ಕಾಟ್ರು ವೆಲೆಯಾಡು' ಸಿನಿಮಾದ ಕಥೆಗೆ ಅವರು ಸಹಾಯ ಮಾಡಿದ್ದರು. ವಿಪರ್ಯಾಸ ಅಂದರೆ, ಚಿತ್ರದ ಕಥೆಯ ರೀತಿಯೇ ಅವರ ಪುತ್ರ ಅಭಿನಂದನ್ ಪಾಕ್ ಸೆರೆಯಲ್ಲಿ ಇದ್ದಾರೆ.

  ಅಭಿನಂದನ್ ಅವರ ತಂದೆ ವಾರ್ತಮನ್ ಅವರು ಭಾರತೀಯ ವಾಯು ಸೇನೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿದವರು. ಏರ್ ಮಾರ್ಷಲ್ ಅಂತಹ ಉನ್ನತ ಹುದ್ದೆಗಳನ್ನು ನಿಭಾಯಿಸಿ ನಿವೃತ್ತರಾಗಿದ್ದಾರೆ. ಇನ್ನು, ಪಾಕ್ ಕಪಿಮುಷ್ಟಿಯಿಂದ ಭಾರತಾಂಬೆಯ ಈ ಹೆಮ್ಮೆಯ ಪುತ್ರ ಅದಷ್ಟು ಬೇಗ ತಾಯ್ನಾಡಿಗೆ ವಾಪನ್ ಬರಲಿ ಎಂದು ಪ್ರಾರ್ಥಿಸೊಣ.

  English summary
  Wing commander Abhinandan's father Varthaman is former Air marshal for Indian Air Force. He helped in the story of film 'Katru Vileyadi' tamil film in which hero caught by Pakistan army. Now His own son is in Pakistan army's hand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X