ಮತ್ತೆ ಕನ್ನಡಕ್ಕೆ ಬಂದರು 'ಕರಿಯ' ಚಿತ್ರದ ದರ್ಶನ್ ಜೋಡಿ
Recommended Video

ನಟ ದರ್ಶನ್ ಅವರ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖವಾಗಿ 'ಕರಿಯ'. ಈ ಸಿನಿಮಾ ದರ್ಶನ್ ಸಿನಿಜರ್ನಿಯ ಮೈಲಿಗಲ್ಲು. ಇಂತಹ ಚಿತ್ರದಲ್ಲಿ ದರ್ಶನ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು ನಟಿ ಅಭಿನಯಶ್ರೀ.
ನಟಿ ಅಭಿನಯಶ್ರೀ ಈಗ ಮತ್ತೆ ಕನ್ನಡಕ್ಕೆ ಬರಲಿದ್ದಾರೆ. 'ಕರಿಯ' ಮೂಲಕ ಕನ್ನಡದಲ್ಲಿ ಖಾತೆ ತೆರೆದಿದ್ದ ಅವರು ಈಗ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಕಳೆದ ವರ್ಷ ಕನ್ನಡದ 'ಸೌಂದರ್ಯ ನಿಲಯ' ಎಂಬ ಹಾರರ್ ಸಿನಿಮಾದಲ್ಲಿ ಅಭಿನಯಶ್ರೀ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ದೊಡ್ಡ ಮಟ್ಟದ ಚಿತ್ರ ಆಗಿರಲಿಲ್ಲ. ಆದರೆ ಈಗ ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಅವರು ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಮುಂದೆ ಓದಿ...

'ಯೋಗಿ ಲವ್ಸ್ ಸುಪ್ರಿಯಾ' ಚಿತ್ರದಲ್ಲಿ ನಟನೆ
ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸಿನಿಮಾಗಳಲ್ಲಿ ಸಾಕಷ್ಟು ವರ್ಷದಿಂದ ನಟಿಸುತ್ತಿರುವ ಅಭಿನಯಶ್ರೀ ಈಗ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. 'ಯೋಗಿ ಲವ್ಸ್ ಸುಪ್ರಿಯಾ' ಚಿತ್ರದ ವಿಶೇಷ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಅತಿಥಿ ಪಾತ್ರ
'ಯೋಗಿ ಲವ್ಸ್ ಸುಪ್ರಿಯಾ' ಸಿನಿಮಾದ ಅತಿಥಿ ಪಾತ್ರದಲ್ಲಿ ಅಭಿನಯಶ್ರೀ ನಟಿಸಲಿದ್ದಾರೆ. ಚಿತ್ರದ ಕಥೆಯ ಬರುವ ನಾಯಕಿಯ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಅಭಿನಯಶ್ರೀ ಹೋಗುತ್ತಾರೆ. ರಿಯಲ್ ಆಗಿ ನಟಿ ಆಗಿರುವ ಅವರು ಈ ಸಿನಿಮಾದಲ್ಲಿಯೂ ಹಿರೋಯಿನ್ ಪಾತ್ರವನ್ನೆ ಮಾಡುತ್ತಿದ್ದಾರೆ

ಹಾಡಿನ ಕೊರಿಯೋಗ್ರಫಿ ಸಹ ಮಾಡ್ತಾರೆ
ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುವುದರ ಜೊತೆಗೆ ಅಭಿನಯಶ್ರೀ ಒಂದು ಹಾಡಿನ ಕೊರಿಯೋಗ್ರಫಿ ಸಹ ಮಾಡಲಿದ್ದಾರಂತೆ. ಬೆಸಿಕಲಿ ಅಭಿನಯಶ್ರೀ ಒಬ್ಬ ಕೊರಿಯೋಗ್ರಫರ್ ಆಗಿದ್ದು, ಅವರಿಂದ ಒಂದು ಹಾಡನ್ನು ನಿರ್ದೇಶನ ಮಾಡಿಸುವ ಪ್ಲಾನ್ ಚಿತ್ರತಂಡದಾಗಿದೆ. ಬೆಂಗಳೂರಿನಲ್ಲಿಯೇ ಹಾಡಿನ ಶೂಟಿಂಗ್ ನಡೆಯಲಿದೆ.

ಯೋಗಿ ನಿರ್ದೇಶನ
ಯೋಗಿ ಲವ್ಸ್ ಸುಪ್ರಿಯಾ' ಸಿನಿಮಾಗೆ ಯೋಗಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಎಂಟು ವರ್ಷಗಳಿಂದ ತೊಡಗಿಸಿಕೊಂಡಿರುವ ಯೋಗಿ ಅವರ ಮೊದಲ ಸಿನಿಮಾ ಇದಾಗಿದೆ. ಈಗಾಗಲೇ ಅಭಿನಯಶ್ರೀ ಜೊತೆಗೆ ಮಾತುಕತೆ ನಡೆಸಿರುವ ಯೋಗಿ ಸದ್ಯದಲ್ಲಿಯೇ ಎರಡನೇ ಶೆಡ್ಯೂಲ್ ಶೂಟಿಂಗ್ ಶುರು ಮಾಡಲಿದ್ದಾರಂತೆ


Click it and Unblock the Notifications











