ಅಭಿಷೇಕ್ ಅಂಬರೀಶ್ ಈಗ ಸೂಪರ್ ಹೀರೋ!

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಒಂದೊಂದೇ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ಮೊದಲ ಸಿನಿಮಾ ಅಮರ್ ಬಳಿಕ ಅಭಿಷೇಕ್ ಎರಡನೇ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ಆಫರ್‌ಗಳು ಅಭಿಯನ್ನು ಹುಡುಕಿಕೊಂಡು ಬರುತ್ತಿವೆ.

ಸದ್ಯ ದುನಿಯಾ ಸೂರಿ ನಿರ್ದೇಶನದಲ್ಲಿ 'ಬ್ಯಾಡ್ ಮ್ಯಾನರ್ಸ್' ನಿರ್ಮಾಣ ಆಗುತ್ತಿದೆ. ಈಗಾಗಲೇ ಬಹುತೇಕ ಸಿನಿಮಾ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಶ್ರೀಮುರಳಿಗಾಗಿ 'ಮದಗಜ' ನಿರ್ದೇಶನ ಮಾಡಿದ್ದ ಮಹೇಶ್ ಕುಮಾರ್ ಮೂರನೇ ಸಿನಿಮಾಗೆ ರೆಡಿಯಾಗಿದ್ದಾರೆ. ರೆಬೆಲ್ ಸ್ಟಾರ್ ಪುತ್ರನ ನಾಲ್ಕನೇ ಸಿನಿಮಾಗೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಸಿನಿಮಾ ಲಾಂಚ್ ಆಗಿದ್ದು, ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಸೂಪರ್ ಹೀರೋ ಆದ ಅಭಿ!

ಸೂಪರ್ ಹೀರೋ ಆದ ಅಭಿ!

ನಟ ಅಭಿಶೇಕ್ ಅಂಬರೀಶ್ 4ನೇ ಚಿತ್ರದ ಲಾಂಚ್ ಆಗಿದೆ. ಇದೇ ಪ್ರಯುಕ್ತ ಸಿನಿಮಾದ ಮೊಷನ್ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ. ಅಭಿಶೇಕ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಒಬ್ಬ ಸೂಪರ್ ಹೀರೋ ರೀತಿ ಮಿಂಚಿದ್ದಾರೆ, ನಟ ಅಭಿಶೇಕ್. ಹಾಲಿವುಡ್ ಸಿನಿಮಾಗಳಲ್ಲಿ ಬರುವ ವಾರಿಯರ್‌ನಂತೆ ಈ ಪೋಸ್ಟರ್‌ನಲ್ಲಿ ಮಿಂಚಿದ್ದು, ಕುತೂಹಲ ಹೆಚ್ಚಿಸಿದ್ದಾರೆ.

ವಾರಿಯರ್ ಪಾತ್ರದಲ್ಲಿ ಅಭಿಷೇಕ್?

ವಾರಿಯರ್ ಪಾತ್ರದಲ್ಲಿ ಅಭಿಷೇಕ್?

ಅಭಿಷೇಕ್ ಅಂಬರೀಶ್ ಹಿಂದಿನ ಸಿನಿಮಾಗಳಿಗಿಂತ ಇದು ವಿಭಿನ್ನವಾಗಿದೆ. ಸ್ಯಾಂಡಲ್‌ವುಡ್‌ನ ಯಂಗ್ ರೆಬೆಲ್‌ಸ್ಟಾರ್ ಸಿಕ್ಕಾಪಟ್ಟೆ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಫಸ್ಟ್ ಲುಕ್ ನೋಡಿದವರು ಇದೊಂದು ಐತಿಹಾಸಿಕ ಸಿನಿಮಾ ಫೀಲ್ ಕೊಡುತ್ತಿದೆ ಎನ್ನುವ ಅಭೀಪ್ರಾಯ ಬಿಚ್ಚಿಟ್ಟಿದ್ದಾರೆ. ಇದು ಅಭಿಯ ನಾಲ್ಕನೇ ಸಿನಿಮಾ ಆಗಿದ್ದು, ಕನ್ನಡ ಟಾಪ್ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ.

ಅಭಿಶೇಕ್ ಪ್ಯಾನ್ ಇಂಡಿಯಾ ಸಿನಿಮಾ!

ಅಭಿಶೇಕ್ ಪ್ಯಾನ್ ಇಂಡಿಯಾ ಸಿನಿಮಾ!

ಅಭಿಷೇಕ್ ಅಂಬರೀಶ್ ನಾಲ್ಕನೇ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ 3ನೇ ಸಿನಿಮಾದ ಬಗ್ಗೆನೂ ಸುದ್ದಿ ಓಡಾಡುತ್ತಿದೆ. ಅಭಿಯ ಮೂರನೇ ಸಿನಿಮಾವನ್ನು 'ಪೈಲ್ವಾನ್' ಸಿನಿಮಾದ ನಿರ್ದೇಶಕ ಕೃಷ್ಣ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾ ಬಳಿಕ ನಾಲ್ಕನೇ ಸಿನಿಮಾ ಸೆಟ್ಟೇರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಆಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ.

ಅಮ್ಮನ ಬರ್ತ್ ಡೇಗೆ ಮೋಷನ್ ಪೋಸ್ಟರ್!

ಅಮ್ಮನ ಬರ್ತ್ ಡೇಗೆ ಮೋಷನ್ ಪೋಸ್ಟರ್!

ಯಂಗ್ ರೆಬಲ್ ಸ್ಟಾರ್ ನಾಲ್ಕನೇ ಸಿನಿಮಾ ಸೆಟ್ಟೇರುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇನ್ನು ಈ ಚಿತ್ರದ ಮೋಷನ್ ಪೋಸ್ಟರ್ ಇಂದೇ (ಆಗಸ್ಟ್ 27) ರಂದು ರಿಲೀಸ್ ಆಗಲು ಕಾರಣ, ಸುಮಲತಾ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೆಲದಕ್ಕಿಂತಲೂ ಹೆಚ್ಚಾಗಿ ಸಿನಿಮಾದ ಟೈಟಲ್ ಏನಿರಬಹುದು ಎನ್ನುವ ಕುತೂಹಲಗಳು ಹುಟ್ಟಿಕೊಂಡಿವೆ.

More from Filmibeat

English summary
Abhishek Ambareesh 4th Movie Launch, Motion Poster Out, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X