'ಅಮರ್' ಅಡ್ಡಾದಿಂದ ಬಂತು ಎರಡನೇ ಹಾಡು

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ ಬಹುನಿರೀಕ್ಷೆಯ 'ಅಮರ್' ಚಿತ್ರದಿಂದ ಎರಡನೇ ಹಾಡು ರಿಲೀಸ್ ಆಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಮೊದಲ ಹಾಡು ರಿಲೀಸ್ ಮಾಡಿದ್ದ ಚಿತ್ರತಂಡಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಎರಡನೇ ಹಾಡು ಬಿಡುಗಡೆಯಾಗಿದೆ.

"ಸುಮ್ಮನೆ ಹೀಗೆ ನಿನ್ನನೇ..ನೋಡುತಾ ಪ್ರೇಮಿಯಾದನೆ.." ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಮೆಲೋಡಿ ಹಾಡು ಗಾನಪ್ರಿಯರ ಮನ ಸೆಳೆಯುತ್ತಿದೆ. ನಾಯಕ ಅಭಿಷೇಕ್ ಮತ್ತು ನಟಿ ತಾನ್ಯ ಹೋಪ್ ನಡುವಿನ ರೋಮ್ಯಾಂಟಿಕ್ ಹಾಡು ಇದಾಗಿದೆ. ವಿಶೇಷ ಅಂದ್ರೆ ಈ ಹಾಡು ಖ್ಯಾತ ಗಾಯಕ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಕಂಠಸಿರಿಯಲ್ಲಿ ಮೂಡಿ ಬಂದಿದೆ.

abhishek ambareesh amar movie second song released

ಕವಿರಾಜ್ ಅವರ ಸುಂದರ ಸಾಹಿತ್ಯ ಇರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸೇರಿ ಮತ್ತಷ್ಟು ಇಂಪಾಗಿ ಕೇಳಿಸುತ್ತಿದೆ. ಈ ಮೊದಲು ರಿಲೀಸ್ ಆಗಿರುವ ಹಾಡಿನ ಸಾಲುಗಳನ್ನು ಸಹ ಕವಿರಾಜ್ ಬರೆದಿದ್ದರು. ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಕೇಳಲು ಎಷ್ಟು ಇಂಪಾಗಿದೆಯೂ, ಲೊಕೇಶನ್ ಕೂಡ ನೋಡಲು ಅಷ್ಟೇ ತಂಪಾಗಿದೆ. ಸಂಪೂರ್ಣ ಹಾಡು ಮಳೆಯಲ್ಲಿ ಚಿತ್ರೀಕರಣವಾಗಿದೆ. ಪ್ರಕೃತಿಯ ಸುಂದರ ತಾಣಗಳಲ್ಲಿ ಈ ಹಾಡನ್ನು ಸೆರೆಹಿಡಿದಿದ್ದು ಅಭಿ ಮತ್ತು ತಾನ್ಯಾ ಮುದ್ದಾಗಿ ಕಾಣಿಸುತ್ತಿದ್ದಾರೆ.

ಅಂದ್ಹಾಗೆ 'ಅಮರ್' ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಸಂದೇಶ್ ನಗರಾಜ್ ನಿರ್ಮಾಣದ ಹೊಣೆ ಹೊತ್ತು ಕೊಂಡಿದ್ದಾರೆ. ಸದ್ಯ ಟ್ರೈಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ 'ಅಮರ್' ಮುಂದಿನ ತಿಂಗಳು 31ಕ್ಕೆ ತೆರೆಗೆ ಬರುತ್ತಿದೆ.

More from Filmibeat

English summary
Bbhishek Ambareesh starrer 'Amar' movie second song released. This movie is directed by Nag Shekhar, Music by Arjun Janya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X