ಅಭಿಷೇಕ್ - ಅವಿವಾ ವಿವಾಹ: ಬೀಗರ ಔತಣಕ್ಕೆ ಒಟ್ಟಿಗೆ ಮಂಡ್ಯಕ್ಕೆ ಬಂದ ನವಜೋಡಿ
ಜೂನ್ 5ರಂದು ನಡೆದ ಅದ್ದೂರಿ ವಿವಾಹದ ಮೂಲಕ ಚಲನಚಿತ್ರ ನಟ ಯಂಗ್ ರೆಬೆಲ್ ಸ್ಟಾರ್ ಹಾಗೂ ಅವಿವಾ ಬಿದ್ದಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹುಕಾಲದಿಂದ ಅಭಿಷೇಕ್ ಅಂಬರೀಶ್ ಅವರನ್ನು ಪ್ರೀತಿಸುತ್ತಿದ್ದ ಅವಿವಾ ಬಿದ್ದಪ್ಪ ಇದೀಗ ಸೊಸೆಯಾಗಿ ಅಂಬರೀಶ್ ಮನೆ ಪ್ರವೇಶಿಸಿದ್ದಾರೆ.
ಮದುವೆ ಸಮಾರಂಭ ಮುಕ್ತಾಯವಾದ ಬಳಿಕ ಭರ್ಜರಿಯಾಗಿ ಅರಮನೆ ಮೈದಾನದಲ್ಲಿ ಜೋಡಿಯ ಆರತಕ್ಷತೆ ಕಾರ್ಯಕ್ರಮವನ್ನೂ ಸಹ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನವ ಜೋಡಿ ಹಾಗೂ ಚಂದನವನ ಹಾಗೂ ಸೌತ್ ಸ್ಟಾರ್‌ಗಳು ವಿವಿಧ ಬಗೆಯ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದರು.

ಬೆಂಗಳೂರಿನಲ್ಲಿ ಈ ಸಂಭ್ರಮಾಚರಣೆಯ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ಇದೀಗ ಅಂಬರೀಶ್ ಕುಟುಂಬ ಮಂಡ್ಯದತ್ತ ಮುಖ ಮಾಡಿದೆ. ಸುಮಲತಾ ಅಂಬರೀಶ್ ಮುಂಚಿನಿಂದಲೂ ತಮ್ಮನ್ನು ಬೆಂಬಲಿಸುತ್ತಾ ಬಂದಿರುವ ಮಂಡ್ಯ ಜನತೆಗೆ ಮಗನ ಮದುವೆಯ ಔತಣಕೂಟವನ್ನು ಏರ್ಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪದ ಸುಮಾರು 15 ಎಕರೆ ಜಾಗದಲ್ಲಿ ಭರ್ಜರಿ ಬಾಡೂಟವನ್ನು ಏರ್ಪಡಿಸಲಾಗಿದೆ. ಸುಮಾರೂ ಐವತ್ತು ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕಷೆ ಇದೆ.
ಇನ್ನು ಈ ಕಾರ್ಯಕ್ರಮಕ್ಕೆ ನವಜೋಡಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಒಟ್ಟಿಗೆ ಬೆಂಗಳೂರಿನಿಂದ ಆಗಮಿಸಿದ್ದಾರೆ. ಈ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.


Click it and Unblock the Notifications











