ಹೊಸ ಅತಿಥಿ ಸ್ವಾಗತಕ್ಕೆ ಅಂಬಿ ಕುಟುಂಬ ಸಿದ್ಧ; ಗರ್ಭಿಣಿ ಅವಿವಾ ಸೀಮಂತಕ್ಕೆ ತಯಾರಿ ಶುರು

ರೆಬಲ್ ಸ್ಟಾರ್ ಅಂಬರೀಶ್ ಕುಟುಂಬ ಸಂಭ್ರಮದಲ್ಲಿದೆ. ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸುವ ಸಮಯ ಹತ್ತಿರವಾಗುತ್ತಿದೆ. ಕಳೆದ ವರ್ಷ ಅದ್ಧೂರಿಯಾಗಿ ಹಸೆಮಣೆ ಏರಿದ್ದ ಅಭಿಷೇಕ್ ಅಂಬರೀಶ್ ಶೀಘ್ರದಲ್ಲೇ ತಂದೆ ಆಗುತ್ತಿದ್ದಾರೆ. ಅಭಿ ಪತ್ನಿ ಅವಿವಾ ಸೀಮಂತ ಶಾಸ್ತ್ರಕ್ಕೆ ಸಿದ್ಧತೆ ನಡೀತಿದೆ.

ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿ ಆಗಿದ್ದು ಕುಟುಂಬದಲ್ಲಿ ಸಂತಸ ತಂದಿದೆ. ಕಳೆದ ವರ್ಷ ಜೂನ್ 5ಕ್ಕೆ ಅಭಿ ಹಾಗೂ ಅವಿವಾ ಮದುವೆ ನಡೆದಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಸಮಾರಂಭ ನೆರವೇರಿತ್ತು. ಬಳಿಕ ರಿಸೆಪ್ಷನ್ ಪಾರ್ಟಿ, ಸಂಗೀತ್ ಪಾರ್ಟಿ ಅಂತೆಲ್ಲಾ ಭಾರೀ ಸಂಭ್ರಮಾಚರಣೆ ನಡೆದಿತ್ತು. ಹಿರಿಯ ನಟಿ ಸುಮಲತಾ ಮಗನ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು.

Abhishek ambareesh And His Wife aviva To Welcome Their first Child Soon

ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಜೊತೆ ಅಭಿಷೇಕ್ ಅಂಬರೀಶ್ ಮದುವೆ ನಡೆದಿತ್ತು. ಅವಿವಾ ಫ್ಯಾಷನ್ ಮ್ಯಾನೇಜ್ ಮೆಂಟ್ ಕಂಪನಿಯೊಂದರ ನಿರ್ದೇಶಕಿಯೂ ಆಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಶುರುವಾದ ಅಭಿ-ಅವಿ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿ ಮದುವೆ ಆಗಿದ್ದರು. ಮದುವೆ ಬಳಿಕ ಮಂಡ್ಯದಲ್ಲಿ ಭರ್ಜರಿ ಬೀಗರೂಟ ಕೂಡ ಆಯೋಜಿಸಲಾಗಿತ್ತು.

ಸದ್ಯ ಅಭಿಷೇಕ್ ಅಂಬರೀಶ್ ಕಿಕ್ ಬಾಕ್ಸಿಂಗ್ ಕಲಿಯಲು ವಿದೇಶಕ್ಕೆ ಹೋಗಿದ್ದಾರೆ. ತಮ್ಮ ಮುಂದಿನ ಚಿತ್ರದ ಪಾತ್ರಕ್ಕಾಗಿ ಅವರು ಕಿಕ್ ಬಾಕ್ಸಿಂಗ್ ಕಲಿಯುತ್ತಿದ್ದಾರೆ. ನಾಳೆ(ಆಗಸ್ಟ್ 9) ಅಭಿ ಬೆಂಗಳೂರಿಗೆ ವಾಪಸ್ ಬರಲಿದ್ದು ಶೀಘ್ರದಲ್ಲೇ ಅವಿವಾ ಸೀಮಂತ ಶಾಸ್ತ್ರ ನಡೆಯಲಿದೆ. ಅಂಬಿ ನಿವಾಸದಲ್ಲಿ ಸೀಮಂತ ಕಾರ್ಯ ನಡೆಯಲಿದ್ದು ಆಪ್ತರು, ಸ್ನೇಹಿತರು ಭಾಗಿ ಆಗಲಿದ್ದಾರೆ.

ತಂದೆ-ತಾಯಿ ಹಾದಿಯಲ್ಲೇ ಅಭಿಷೇಕ್ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. 'ಅಮರ್' ಚಿತ್ರದ ಮೂಲಕ ಅಭಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ನಾಗಶೇಖರ್ ನಿರ್ದೇಶನದ ಚಿತ್ರದಲ್ಲಿ ತಾನ್ಯಾ ಹೋಪ್ ನಾಯಕಿಯಾಗಿ ಮಿಂಚಿದ್ದರು. ಬಳಿಕ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾದಲ್ಲಿ ಅಭಿ ನಟಿಸಿದ್ದರು.

ಕಳೆದ ವರ್ಷ ಬಂದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಕೂಡ ಯಂಗ್ ರೆಬಲ್ ಸ್ಟಾರ್ ಕೈಹಿಡಿಯಲಿಲ್ಲ. ಇದು 'ಕಾಳಿ' ಎನ್ನುವ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಹೆಬ್ಬುಲಿ' ಸಿನಿಮಾ ಖ್ಯಾತಿಯ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ಅಭಿಗೆ ಸಾತ್ ಕೊಡುತ್ತಿದ್ದಾರೆ. ಮತ್ತಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಮುಂದಿನ ಚಿತ್ರದಲ್ಲಿ ಬಾಕ್ಸರ್ ಅವತಾರದಲ್ಲಿ ಅಬ್ಬರಿಸೋಕೆ ಕರಸತ್ತು ನಡೆಸುತ್ತಿದ್ದಾರೆ.

More from Filmibeat

English summary
Actor Abhishek ambareesh all set to become a father;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X