'ಅಮರ್' ಸಿನಿಮಾಗಾಗಿ ಅಂಬಿ ಮಗ ಇಳಿಸಿದ್ದು ಬರೋಬ್ಬರಿ 48 ಕೆಜಿ !
Recommended Video

ಇಂದು ನಟ ಅಂಬರೀಶ್ ಹುಟ್ಟಿದ ದಿನ. ಆದರೆ ನಿನ್ನೆ ಅವರ ಮಗ ಅಭಿಷೇಕ್ ಸಿನಿಮಾ ಬದುಕು ಶುರುವಾದ ದಿನ. ನಿನ್ನೆ ಅಭಿಷೇಕ್ ಅವರ ಮೊದಲ ಸಿನಿಮಾ 'ಅಮರ್' ಲಾಂಚ್ ಆಗಿದೆ. ಸ್ಯಾಂಡಲ್ ವುಡ್ ಗೆ ಬಂದ ಯಂಗ್ ರೆಬೆಲ್ ಸ್ಟಾರ್ ಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಇಂಡಸ್ಟ್ರಿಗೆ ಬರುವ ಮುನ್ನ ಅಭಿಷೇಕ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಶ್ಚರ್ಯ ಎಂದರೆ, ಅಭಿಷೇಕ್ 'ಅಮರ್' ಸಿನಿಮಾಗಾಗಿ ಬರೋಬ್ಬರಿ 48 ಕೆಜಿ ತೂಕ ಇಳಿಸಿದ್ದಾರೆ. ಮೊದಲು 158 ಕೆಜಿ ತೂಕ ಇದ್ದ ಅವರು ಸದ್ಯ 110 ಕೆಜಿ ಇದ್ದಾರೆ. ಸಿನಿಮಾ ಮುಹೂರ್ತದ ದಿನ ಮಾತನಾಡಿದ ಚಿತ್ರದ ನಿರ್ದೇಶಕ ನಾಗಶೇಖರ್ ಅಭಿಷೇಕ್ ಅವರ ತಯಾರಿಗಳ ಬಗ್ಗೆ ಮಾತನಾಡಿದರು.

ಮೂರ್ನಾಲ್ಕು ವರ್ಷ ಸಿನಿಮಾಗಾಗಿ ತಯಾರಿ ನಡೆಸಿರುವ ಅಭಿಷೇಕ್ ಡ್ಯಾನ್ಸ್, ಫೈಟ್, ಆಕ್ಟಿಂಗ್, ಮಾರ್ಷಲ್ ಆರ್ಟ್ ಎಲ್ಲವನ್ನು ಕರಗತ ಮಾಡಿಕೊಂಡಿದ್ದಾರಂತೆ. ಮತ್ತೊಂದು ವಿಶೇಷ ಅಂದರೆ ಅಭಿಷೇಕ್ 6.4 ಅಡಿ ಎತ್ತರ ಇದ್ದಾರೆ. ಈ ಮೂಲಕ ಅಭಿ ಕನ್ನಡ ನಟ ಪೈಕಿ ಅತಿ ಹೆಚ್ಚು ಎತ್ತರ ಇದ್ದಾರೆ.
ಇಷ್ಟು ದಿನ ಆರಡಿ ನಟರು ಎಂದ ತಕ್ಷಣ ದರ್ಶನ್ ಮತ್ತು ಸುದೀಪ್ ನೆನಪಾಗುತ್ತಿದ್ದರು. ಆದರೆ ಈಗ ಅಂಬಿ ಪುತ್ರ ಅಭಿಷೇಕ್ ಸಹ ಆ ಸಾಲಿಗೆ ಸೇರಿಕೊಂಡಿದ್ದಾರೆ.


Click it and Unblock the Notifications











