Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಸೆಂಬರ್ 11ಕ್ಕೆ ಯಂಗ್ ರೆಬೆಲ್ ಸ್ಟಾರ್ ನಿಶ್ಚಿತಾರ್ಥ? ಅಭಿ ಕೈ ಹಿಡಿಯಲಿರೋ ಹುಡುಗಿ ಹಿನ್ನೆಲೆಯೇನು?
ಕಳೆದ ಕೆಲವು ದಿನಗಳಿಂದ ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಜೋರಾಗಿ ಸುದ್ದಿಯಾಗುತ್ತಿದೆ. ಯಂಗ್ ರೆಬೆಲ್ ಸ್ಟಾರ್ ಹುಟ್ಟುಹಬ್ಬದಂದೇ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿರೋ ಬಗ್ಗೆ ಸುದ್ದಿ ಹರಿದಾಡಿತ್ತು.
ಮದುವೆ, ನಿಶ್ಚಿತಾರ್ಥದ ಸುದ್ದಿ ಹರಿದಾಡುತ್ತಿದ್ದಂತೆ ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅವರಿಗೆ ಈ ಪ್ರಶ್ನೆಯನ್ನು ಮುಂದಿಡಲಾಗಿತ್ತು. ಆದರೆ, ಅಮ್ಮ ಮತ್ತು ಮಗ ಇಬ್ಬರೂ ನಿಶ್ಚಿತಾರ್ಥ ಹಾಗೂ ಮದುವೆ ಮ್ಯಾಟರ್ ಅನ್ನು ಅಲ್ಲಗೆಳಿದಿದ್ದರು.
1991ರ
ಕಾವೇರಿ
ಗಲಾಟೆಯಲ್ಲೇ
ಚಿಗುರಿತ್ತು
ಪ್ರೀತಿ:
ಮಂಡ್ಯ
ಹುಡುಗ,
ತಮಿಳು
ಹುಡುಗಿ
ಕಹಾನಿಯೇ
'ಕಾಳಿ'!
ಈಗ ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬಗ್ಗೆ ಸುದ್ದಿ ಓಡಾಡುತ್ತಿದೆ. ವಿಶ್ವದ ಜನಪ್ರಿಯ ಫ್ಯಾಷನ್ ಡಿಸೈನರ್ಗಳಲ್ಲಿ ಒಬ್ಬರಾಗಿರೋ ಪ್ರಸಾದ್ ಬಿದ್ದಪ್ಪ ಪುತ್ರಿಯೊಂದಿಗೆ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ಓಡಾಡುತ್ತಿದೆ.

ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ನಿಶ್ಚಿತಾರ್ಥ
ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಇಬ್ಬರೂ ನಿಶ್ಚಿತಾರ್ಥದ ಸುದ್ದಿಯನ್ನು ತಳ್ಳಿ ಹಾಕಿದ್ದರು. ಆದರೂ, ಮತ್ತೆ ಅಭಿಷೇಕ್ ನಿಶ್ಚಿತಾರ್ಥದ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಸುದ್ದಿ ಓಡಾಡುತ್ತಿದೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ಎಂಗೇಜ್ ಆಗಲಿದ್ದಾರೆ. ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಷ್ ಬಹಳ ದಿನಗಳಿಂದ ಸ್ನೇಹಿತರು. ಹೀಗಾಗಿ ಅವರನ್ನೇ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆನ್ನಲಾಗಿದೆ.

ಅವಿವಾ ಬಿದ್ದಪ್ಪ ಹಿನ್ನೆಲೆ ಏನು?
ಅಭಿಷೇಕ್ ಅಂಬರೀಶ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಅವಿವಾ ಬಿದ್ದಪ್ಪ ಉದ್ಯಮಿ. ತಂದೆಯೊಂದಿಗೆ ಸೇರಿ ಫ್ಯಾಷನ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. 2014ರಲ್ಲಿ ಅವಿವಾ ಬಿದ್ದಪ್ಪ ಲಂಡನ್ ಅಕಾಡೆಮಿ ಆಫ್ ಮ್ಯೂಸಿಕ್ ಮತ್ತು ಡ್ರಮಾಟಿಕ್ ಆಟ್ನಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಹಾಗೇ ಮಲ್ಯ ಅದಿತಿ ಅಂತರಾಷ್ಟ್ರೀಯ ಸ್ಕೂಲ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿದ್ದಾರೆ.

ಅವಿವಾ ಬಿದ್ದಪ್ಪ ಯಶಸ್ವಿ ಉದ್ಯಮಿ
ಅವಿವಾ ಬಿದ್ದಪ್ಪ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ. 2016ರಿಂದ ಪ್ರಸಾದ್ ಬಿದ್ದಪ್ಪ ಮಾಡಲ್ ಮ್ಯಾನೇಜ್ಮೆಂಟ್ ಕಂಪನಿಯ ನಿರ್ದೇಶಕರಾಗಿದ್ದಾರೆ. 2009ರಿಂದ ಪ್ರಸಾದ್ ಬಿದ್ದಪ್ಪ ಅಸೋಸಿಯೇಟ್ಸ್ಗೂ ನಿರ್ದೇಶಕಿಯಾಗಿದ್ದಾರೆ. ಅವಿವಾ ಬಿದ್ದಪ್ಪ ಅವರಿಗೆ ಅಮ್ಮನೇ ರೋಲ್ ಮಾಡಲ್. ಯಾರ ಹಂಗಲ್ಲೂ ಇರದೆ ತನ್ನದೇ ಸ್ವಂತ ಗುರುತು ಸಂಪಾಧಿಸಿರುವ ಮಾಡರ್ನ್ ಹುಡುಗಿ.

ಯಂಗ್ ಡೈರೆಕ್ಟರ್ ಫುಲ್ ಬ್ಯುಸಿ
ಅಭಿಷೇಕ್ ಅಂಬರೀಶ್ ಕೂಡ ಸ್ಯಾಂಡಲ್ವುಡ್ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ದುನಿಯಾ ಸೂರಿ ನಿರ್ದೇಶಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೇ 'ಪೈಲ್ವಾನ್' ನಿರ್ದೇಶಕ ಕೃಷ್ಣ ಆಕ್ಷನ್ ಕಟ್ ಹೇಳುತ್ತಿರುವ 'ಕಾಳಿ', ಮಹೇಶ್ ಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಶೀಘ್ರದಲ್ಲಿಯೇ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಿಡುಗಡೆಯಾಗಲಿದೆ. ಇದೇ ವೇಳೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬಗ್ಗೆ ಸುದ್ದಿ ಓಡಾಡುತ್ತಿದೆ. ಆದರೆ, ಅಭಿಷೇಕ್ ಆಗಲಿ, ಸುಮಲತಾ ಆಗಲಿ ಇನ್ನೂ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ.