ಪುನೀತ್‌ ನಟಿಸಬೇಕಿದ್ದ ಸಿನಿಮಾ ಕಥೆನೇ ಅಭಿಷೇಕ್ ಅಂಬರೀಶ್ 'ಕಾಳಿ'ನಾ?

ನಟ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಅಗಲಿದ್ದಾರೆ. ಆದರೆ ಅಪ್ಪು ಪ್ರೀತಿಸುವವರ ಮನದಲ್ಲಿ ಸದಾ ಜೀವಂತ. ಪುನೀತ್ ರಾಜ್‌ಕುಮಾರ್ ಕೇವಲ ಒಬ್ಬ ನಟನಾಗಿ ಇರಲಿಲ್ಲ. ಸಿನಿಮಾರಂಗದಲ್ಲಿ ಹಲವು ನಿರ್ದೇಶಕ, ನಿರ್ಮಾಪಕರಿಗೆ ಬಾಕ್ಸಾಫೀಸ್‌ ಗಣಿಯಾಗಿದ್ದರು.

ನಟ ಪುನೀತ್ ರಾಜ್‌ಕುಮಾರ್ ಸದಾ ಬ್ಯೂಸಿಯಾಗಿ ಇರುತ್ತಿದ್ದರು. ಕೊರೊನಾ ಸಮಯದಲ್ಲಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದು ಬಿಟ್ಟರೆ, ಅಪ್ಪುಗಾಗಿ ಸಾಲು ಸಾಲು ಸಿನಿಮಾಗಳು ಇದ್ದೇ ಇರುತ್ತಿದ್ದವು. ಹಾಗಾಗಿ ಪುನೀತ್ ರಾಜ್‌ಕುಮಾರ್ ಅವರನ್ನು ತಮ್ಮ ನಿರ್ದೇಶನದಲ್ಲಿ, ತಮ್ಮ ಕಥೆಯಲ್ಲಿ ನೋಡಬೇಕು ಎನ್ನುವ ಆಸೆ ಹಲವು ನಿರ್ದೇಶಕರಲ್ಲಿದ್ದರು.

ಹೀಗೆ ಪುನೀತ್‌ ರಾಜ್‌ಕುಮಾರ್‌ಗಾಗಿ ಸಿನಿಮಾ ಮಾಡಬೇಕು ಎಂದು ಕೊಂಡು, ಸೂಪರ್ ಕಥೆಯನ್ನು ಸಿದ್ಧತೆ ಮಾಡಿಕೊಂಡು, ಕಾಯುತ್ತಿದ್ದವರನ್ನು ನಿರ್ದೇಶಕ ಕೃಷ್ಣ ಕೂಡ ಒಬ್ಬರು. ಈ ಚಿತ್ರವನ್ನು ಸ್ವಪ್ನ ಕೃಷ್ಣ ನಿರ್ದೇಶನ ಮಾಡಬೇಕಿತ್ತು. ಈ ಬಗ್ಗೆ ಸ್ವಪ್ನ ಕೃಷ್ಣ ಏನು ಹೇಳುತ್ತಾರೆ ಎನ್ನುವುದನ್ನು ಮುಂದೆ ಓದಿ..

ಅಪ್ಪು ಇದ್ದಿದ್ದರೆ, ಸಿನಿಮಾ ಶುರು ಆಗ್ಬೇಕಿತ್ತು!

ಅಪ್ಪು ಇದ್ದಿದ್ದರೆ, ಸಿನಿಮಾ ಶುರು ಆಗ್ಬೇಕಿತ್ತು!

ನಿರ್ದೇಶಕ ಕೃಷ್ಣಗೆ ನಟ ಪುನೀತ್ ರಾಜ್‌ಕುಮಾರ್ ಡೇಟ್ ಕೊಟ್ಟಿದ್ದರು. ಅಷ್ಟೇ ಯಾಕೆ ಅಪ್ಪು ಈ ಕಥೆಯನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದರಂತೆ. ಹಾಗಾಗಿ ಈ ವರ್ಷ ಸಿನಿಮಾ ಶುರು ಮಾಡಬೇಕು ಎಂದು ಕೊಂಡಿದ್ದರು. ಈ ಬಗ್ಗೆ ಫಿಲ್ಮೀ ಬೀಟ್ ಜೊತೆಗೆ ಮಾತನಾಡಿದ ನಿರ್ಮಾಪಕಿ ಸ್ವಪ್ನ ಕೃಷ್ಣ "ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ಈ ವರ್ಷ ಮೇ ತಿಂಗಳಲ್ಲಿ ಸೆಟ್ಟೆರಬೇಕಿತ್ತು. ಈ ಚಿತ್ರದ ಅಪ್ಪು ಸರ್ ಪಾತ್ರಕ್ಕಾಗಿ ತುಂಬಾನೇ ತಯಾರಿ ಮಾಡಿಕೊಂಡಿದ್ದೆವು." ಎಂದಿದ್ದಾರೆ.

ಅಪ್ಪು ಪಾತ್ರ 'ರಾ ಏಜೆಂಟ್'!

ಅಪ್ಪು ಪಾತ್ರ 'ರಾ ಏಜೆಂಟ್'!

ಸಿನಿಮಾದ ಕಥೆ ಮತ್ತು ಪಾತ್ರದ ಬಗ್ಗೆ ಸ್ವಪ್ನ ಕೃಷ್ಣ ಮಾತಾಡಿದ್ದಾರೆ. "ಈ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್ 'ರಾ ಏಜೆಂಟ್' ಪಾತ್ರದಲ್ಲಿ ನಟಿಸಬೇಕಿತ್ತು. ಅವರ ಪಾತ್ರಕ್ಕಾಗಿ ತುಂಬಾನೆ ಸಂಶೋಧನೆ ಮಾಡಿ, ಸಾಕಷ್ಟು ಸಮಯ ತೆಗೆದುಕೊಂಡು ಪ್ರೀ-ಪ್ಲಾನ್ ಮಾಡಿಕೊಂಡಿದ್ದೆವು. ಈ ಕಥೆಯನ್ನು ಪುನೀತ್ ಸರ್‌ಗಾಗಿಯೇ ಮಾಡಿಕೊಂಡಿದ್ದೆವು. ಹಾಗಾಗಿ ಕಥೆಯ ಜೊತೆಗೆ ಒಂದು ಭಾವನಾತ್ಮಕ ಬಾಂಧವ್ಯ ಹಾಗೇ ಇದೆ." ಎಂದು ಅಪ್ಪು ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

'ಕಾಳಿ' ಅಪ್ಪುಗೆ ಮಾಡಿದ್ದ ಕಥೆಯಲ್ಲ!

'ಕಾಳಿ' ಅಪ್ಪುಗೆ ಮಾಡಿದ್ದ ಕಥೆಯಲ್ಲ!

ಸದ್ಯ ಕೃಷ್ಣ ಅವರು ಅಭಿಷೇಕ್ ಅಂಬರೀಶ್ ಜೊತೆಗೆ 'ಕಾಳಿ' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಲಾಂಚ್ ಆಗಿದ್ದು, ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ. ಇದು ಅಪ್ಪು ಕಥೆಯಲ್ಲ ಎಂಬುದನ್ನು ಕೃಷ್ಣ ಸ್ವಪ್ನ ಸ್ಪಷ್ಟ ಪಡಿಸಿದ್ದಾರೆ. "ಈಗ ಮಾಡುತ್ತಿರುವ 'ಕಾಳಿ' ಸಿನಿಮಾದ ಕಥೆ, ಪುನೀತ್‌ ರಾಜ್‌ಕುಮಾರ್‌ಗಾಗಿ ಮಾಡುತ್ತಿರುವ ಕಥೆಯಲ್ಲ. ಅಪ್ಪು ಸರ್ ನಂತರ ಆ ಕಥೆಯನ್ನು ಹಾಗೆ ಇಟ್ಟಿದ್ದೇವೆ. ಆ ಕಥೆಯ ಬಗ್ಗೆ ಇನ್ನೂ ಏನು ಯೋಚನೆ ಮಾಡಿಲ್ಲ. 'ಕಾಳಿ' ಒಂದು ಲವ್ ಸ್ಟೋರಿ. ಇದೇ ಬೇರೆ ಕಥೆ, ಅದೇ ಬೇರೆ ಕಥೆ." ಎಂದಿದ್ದಾರೆ.

ಅಪ್ಪುಗಾಗಿ ಮಾಡಬೇಕಿದ್ದ ಸಿನಿಮಾಗಳು ಸ್ಥಗಿತ!

ಅಪ್ಪುಗಾಗಿ ಮಾಡಬೇಕಿದ್ದ ಸಿನಿಮಾಗಳು ಸ್ಥಗಿತ!

ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣದಿಂದ, ಅವರ ಸಾಕಷ್ಟು ಸಿನಿಮಾಗಳು ನಿಂತು ಹೋಗಿವೆ. ಪುನೀತ್‌ ರಾಜ್‌ಕುಮಾರ್‌ ಅವರಿಗಾಗಿ ಮಾಡಿದ್ದ ಎಷ್ಟೋ ಕಥೆಗಳು ಹಾಗೆ ಉಳಿದು ಬಿಟ್ಟಿವೆ. ಸಂತೋಷ್ ಆನಂದ್ ರಾಮ್, ದಿನಕರ್ ತೂಗುದೀಪ, ಕೃಷ್ಣ ಮಾತ್ರ ಅಲ್ಲದೇ, ಇನ್ನಷ್ಟು ವೈವಿಧ್ಯಮಯವಾದ ಕಥೆಗಳು ಅಪ್ಪುಗಾಗಿ ಸಿದ್ಧಗೊಂಡಿದ್ದವು.

More from Filmibeat

English summary
Abhishek Ambareesh New Movie 'Kaali' Story Is Written For Puneeth Rajkumar, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X