ಅಭಿಷೇಕ್ ಅಂಬರೀಶ್ ಮತ್ತು ತಮಿಳು ಹುಡುಗಿಯ ಲವ್ ಸ್ಟೋರಿ ಕೇಳಿದ್ರ?

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಆಗಿದೆ. ಈಗಾಗಲೇ ‌ಮೊದಲ ಸಿನಿಮಾದ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದಾರೆ. 'ಅಮರ್' ಸಿನಿಮಾದೊಂದಿಗೆ ಅಭಿಷೇಕ್ ಒಂದು ಮಟ್ಟಿಗೆ ಅಭಿನಯದ ಮೂಲಕ ಜನ ಮನ ಗೆದ್ದಿದ್ದಾರೆ.

'ಅಮರ್' ಸಿನಿಮಾ ಅಂದುಕೊಂಡ ಮಟ್ಟಿಗೆ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿಲ್ಲ. ಆದರೆ ಅಭಿಷೇಕ್ ಅಂಬರೀಶ್ ಅವರು ಹೀರೋ ಆಗಿ ಲಾಂಚ್ ಆಗಿದ್ದಾರೆ‌. ಇವರ ಮುಂದಿನ ಸಿನಿಮಾ ಹೇಗೆ ಇರಲಿದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿ ಅವರ ಎರಡನೇ ಸಿನಿಮಾದ ಟೈಟಲ್ 'ಬ್ಯಾಡ್ ಮ್ಯಾನರ್ಸ್'.

ಈ ನಡುವೆ ಅಭಿಶೇಕ್ ಲವ್ ಸ್ಟೋರಿ ಮೂಲಕ ಸುದ್ದಿ ಆಗ್ತಿದ್ದಾರೆ. ಅಭಿಷೇಕ್ ಅಂಬರೀಶ್ ಲವ್‌ ಸ್ಟೋರಿ ಜೊತೆಗೆ ಆ ಹುಡುಗಿಯ ಬಗ್ಗೆಯೂ ವಿಚಾರಗಳು ಹೊರ ಬಂದಿವೆ. ಯಾರು ಆಕೆ, ಲವ್ ಆಗಿದ್ದು ಯಾವಾಗ, ಇದರ ಸುತ್ರಧಾರಿ ಯಾರು ಎನ್ನುವುದನ್ನು ಮುಂದೆ ಓದಿ...

ತಮಿಳು ಹುಡುಗಿಯ ಜೊತೆಗೆ ಅಭಿಷೇಕ್ ಪ್ರೇಮ್ ಕಹಾನಿ!

ತಮಿಳು ಹುಡುಗಿಯ ಜೊತೆಗೆ ಅಭಿಷೇಕ್ ಪ್ರೇಮ್ ಕಹಾನಿ!

ಅದು 1991ರ ಸಮಯ, ಕರ್ನಾಟಕ ಮತ್ತು ತಮಿಳು ನಾಡಿನ ನಡವೆ ಕಾವೇರಿ ವಿಚಾರವಾಗಿ ಸಮರ ನಡೆಯುತ್ತಿದ್ದ ಸಮಯ. ಆಗ ಕನ್ನಡದ ಈ ಹುಡುಗನಿಗೆ, ತಮಿಳಿನ ಹುಡಿಯ ಜೊತೆಗೆ ಪ್ರೀತಿ ಆಗುತ್ತದೆ. ಆದರೆ ಕಾವೇರಿ ವಿವಾದದ ಬಿಸಿ ಈ ಪ್ರೀತಿಗೆ ಮುಟ್ಟುತ್ತದೆ. ಮುಂದೇನು ಆಗುತ್ತದೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇದೇನಿದು ಅಭಿಶೇಕ್ ಲವ್ ಸ್ಟೋರಿ ಅಂತ ಹೇಳಿ, ಸಿನಿಮಾ ಅಂತಿದ್ದಾರಲ್ಲ ಎಂದು ಕೊಂಡಿರಾ. ಇದು ಲವ್ ಸ್ಟೋರಿ ಹೌದು, ಆದರೆ ಅಭಿಶೇಕ್ ಮುಂದಿನ ಸಿನಿಮಾದ ಲವ್ ಸ್ಟೋರಿ.

ಕಾಳಿ ಚಿತ್ರದಲ್ಲಿ ಲವ್ವರ್ ಬಾಯ್ ಆದ ಅಭಿಶೇಕ್!

ಕಾಳಿ ಚಿತ್ರದಲ್ಲಿ ಲವ್ವರ್ ಬಾಯ್ ಆದ ಅಭಿಶೇಕ್!

ಅಭಿಶೇಕ್ ಅಂಬರೀಶ್ ಮುಂದಿನ ಸಿನಿಮಾ 'ಕಾಳಿ'. ಈ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಅಭಿಶೇಕ್ ಕಾಣಿಸಿಕೊಳ್ಳುತ್ತಾ ಇದ್ದಾರೆ. ಇದು ಅಪ್ಪಟ್ಟ ದೇಸಿ ಪ್ರೇಮ ಕಥೆ. ಹಾಗಂತ ಈ ಚಿತ್ರ ಕೇವಲ ಲವ್ ಸ್ಟೋರಿ ಅಲ್ಲ, ಪಕ್ಕಾ ಕಮರ್ಶಿಯಲ್ ಸಿನಿಮಾ ಅಂತೆ. ಚಿತ್ರಕ್ಕೆ 'ಕಾಳಿ' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ನಿರ್ದೇಶಕ ಹೆಬ್ಬುಲಿ ಕೃಷ್ಣ ನಿರ್ದೇಶನವಿದೆ. ಈದು ಅಭೀಶೇಕ್ 3ನೇ ಸಿನಿಮಾ.

ಕಿಟ್ಟಪ್ಪ ನೋಡಿದ ನೈಜ ಪ್ರೇಮ ಕಥೆ ಕಾಳಿ!

ಕಿಟ್ಟಪ್ಪ ನೋಡಿದ ನೈಜ ಪ್ರೇಮ ಕಥೆ ಕಾಳಿ!

ಈ ಸಿನಿಮಾ ನಿಜವಾಗಿಯೂ ನಡೆದ ಕಥೆಯಂತೆ. "1991ರ ಸಮಯದಲ್ಲಿ ಕಾವೇರಿ ಗಲಾಟೆ ಬಹಳ ಜೋರಾಗಿ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಕೊಳ್ಳೇಗಾಲ, ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ನಡೆದ ಪ್ರೇಮಕಥೆ ಇದು. ಕಾವೇರಿ ಗಲಾಟೆಗೂ ನಾಯಕನಿಗೂ.. ನಾಯಕಿಗೂ ಸಂಬಂಧ ಇರುವುದಿಲ್ಲ. ಆದರೂ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅವರು ಆ ತೊಂದರೆಗೆ ಸಿಕ್ಕಿದ್ದು ಹೇಗೆ ಅನ್ನೋದನ್ನೇ ಸಿನಿಮಾದಲ್ಲಿ ತೋರಿಸುತ್ತೇವೆ." ಎಂದಿದ್ದಾರೆ ನಿರ್ದೇಶಕ ಕೃಷ್ಣ.

ಅಭಿಷೇಕ್ ಹುಟ್ಟು ಹಬ್ಬದಂದು 'ಕಾಳಿ' ಲಾಂಚ್!

ಅಭಿಷೇಕ್ ಹುಟ್ಟು ಹಬ್ಬದಂದು 'ಕಾಳಿ' ಲಾಂಚ್!

'ಬ್ಯಾಡ್ ಮ್ಯಾನರ್ಸ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಫಸ್ಟ್ ಲುಕ್ ನಲ್ಲಿ ಅಭಿಷೇಕ್ ಸಿಕ್ಕಾ ಪಟ್ಟೆ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿ, ಎರಡನೇ ಚಿತ್ರದಲ್ಲಿ ಸಂಪೂರ್ಣ ಬದಲಾಗಿದ್ದಾರೆ. 'ಅಮರ್' ಚಿತ್ರದಲ್ಲಿ ಅಭಿನಯದ ಮೂಲಕ ಅಷ್ಟಾಗಿ ಗಮನ ಸೆಳೆಯದ ಅಭಿಗೆ, 'ಬ್ಯಾಡ್ ಮ್ಯಾನರ್ಸ್' ಅದೃಷ್ಟ ಕೊಡುತ್ತಾ, ಅಥವಾ ಮುಂದಿನ ಎರಡು ಚಿತ್ರಗಳಲ್ಲಿ ಅವರು ಅಭಿನಯಿಸುವವರೆಗು ಕಾಯಬೇಕ ಎನ್ನುವುದನ್ನು ನೋಡ ಬೇಕಿದೆ. ಕಾಳಿ ಅಭಿಶೇಕ್ ಹುಟ್ಟು ಹಬ್ಬದಂದು ಲಾಂಚ್ ಆಗಲಿದೆ.

More from Filmibeat

English summary
Sumalatha Ambareesh Son Abhishek Ambareesh Is In Love With Tamil Girl, Know About The Love Story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X