For Quick Alerts
  ALLOW NOTIFICATIONS  
  For Daily Alerts

  ದುನಿಯಾ ಸೂರಿ ಜತೆ 'ಬ್ಯಾಡ್ ಮ್ಯಾನರ್ಸ್': ಅಭಿಷೇಕ್ ಅಂಬರೀಷ್ ಹೇಳಿದ್ದೇನು?

  |

  ಲಾಕ್ ಡೌನ್ ಅವಧಿಯಲ್ಲಿ ಹೆಚ್ಚೂ ಕಡಿಮೆ ಸ್ಥಗಿತಗೊಂಡಿದ್ದ ಕನ್ನಡ ಚಿತ್ರರಂಗ ನಿಯಮಗಳು ಸಡಿಲಗೊಳ್ಳುತ್ತಿರುವಂತೆ ಮತ್ತೆ ನಿಧಾನವಾಗಿ ಚಟುವಟಿಕೆ ಆರಂಭಿಸಿದೆ. ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯಗಳು ಶುರುವಾಗಿವೆ. ಈ ನಡುವೆ ಹೊಸ ಸಿನಿಮಾಗಳ ಘೋಷಣೆ ಕೂಡ ನಡೆಯುತ್ತಿವೆ. ಈ ಮಧ್ಯೆ ಸೂರಿ-ಅಭಿಷೇಕ್ ಅಂಬರೀಷ್ ಕಾಂಬಿನೇಷನ್ ಸಿನಿಮಾ ಘೋಷಣೆ ಕುತೂಹಲ ಮೂಡಿಸಿದೆ.

  ಅಂಬಿ ಹುಟ್ಟು ಹಬ್ಬದ ಆಚರಣೆಗೆ ಅಂಬಿ ಸ್ಮಾರಕದ ಬಳಿ ಯಾರೆಲ್ಲಾ ಬಂದಿದ್ದಾರೆ ನೋಡಿ| Ambareesh

  ಲಾಕ್ ಡೌನ್ ಅವಧಿ ಸಡಿಲಗೊಂಡ ಬಳಿಕ ನಿರ್ದೇಶಕ ದುನಿಯಾ ಸೂರಿ, ಅಭಿಷೇಕ್ ಮನೆಗೆ ತೆರಳಿ ಕಥೆಯೊಂದರ ಬಗ್ಗೆ ಚರ್ಚೆ ನಡೆಸಿದ್ದರು. ಅದು ಸಿನಿಮಾ ರೂಪ ಪಡೆಯುವುದು ಖಾತರಿಯಾಗಿದ್ದು, ಈ ಚಿತ್ರದ ಪೋಸ್ಟರ್ ಬುಧವಾರ ಬಿಡುಗಡೆಯಾಗಿತ್ತು. ಗನ್ ಹಿಡಿದ ಅಭಿಷೇಕ್ ಖಡಕ್ ಲುಕ್ ಗಮನ ಸೆಳೆಯುತ್ತಿದೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ ಎಂಬ ಸುಳಿವನ್ನು ಪೋಸ್ಟರ್ ನೀಡಿದೆ. ಮುಂದೆ ಓದಿ...

  ಅಭಿಷೇಕ್ ಅಂಬರೀಶ್ ಗೆ ದುನಿಯಾ ಸೂರಿ ನಿರ್ದೇಶನ: ಫಸ್ಟ್ ಲುಕ್ ಮತ್ತು ಟೈಟಲ್ ರಿವೀಲ್ಅಭಿಷೇಕ್ ಅಂಬರೀಶ್ ಗೆ ದುನಿಯಾ ಸೂರಿ ನಿರ್ದೇಶನ: ಫಸ್ಟ್ ಲುಕ್ ಮತ್ತು ಟೈಟಲ್ ರಿವೀಲ್

  ಹೆಮ್ಮೆಯ ಸಂಗತಿ ಎಂದ ಅಭಿಷೇಕ್

  ಹೆಮ್ಮೆಯ ಸಂಗತಿ ಎಂದ ಅಭಿಷೇಕ್

  ನಿರ್ದೇಶಕ ಸುಕ್ಕಾ ಸೂರಿ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ತಮಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ. ನಿರ್ಮಾಪಕ ಕೆಎಂ ಸುಧೀರ್ ಮತ್ತು ಇಡೀ ಚಿತ್ರತಂಡದೊಂದಿಗೆ ಕೆಲಸ ಮಾಡಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

  ಅಭಿಮಾನ, ಬೆಂಬಲ ಇರಲಿ

  ಅಭಿಮಾನ, ಬೆಂಬಲ ಇರಲಿ

  ಈ ಚಿತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ. ಹಾಗೆಯೇ ನಿಮ್ಮೆಲ್ಲರ ಸಹಕಾರ ಬೆಂಬಲ, ಪ್ರೋತ್ಸಾಹ, ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ ಎಂದು ಅಭಿಷೇಕ್ ಅಂಬರೀಷ್ ಸಿನಿಮಾ ಪ್ರಿಯರಲ್ಲಿ ಮನವಿ ಮಾಡಿದ್ದಾರೆ.

  ಮಾಸ್ ಲುಕ್‌ನಲ್ಲಿ ಅಭಿಷೇಕ್

  ಮಾಸ್ ಲುಕ್‌ನಲ್ಲಿ ಅಭಿಷೇಕ್

  ದುನಿಯಾ ಸೂರಿ ಮತ್ತು ಅಭಿಷೇಕ್ ಜೋಡಿಯ 'ಬ್ಯಾಡ್ ಮ್ಯಾನರ್ಸ್' ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿರಲಿದ್ದು, ತಮ್ಮ ಮೊದಲ ಚಿತ್ರ 'ಅಮರ್‌'ದಲ್ಲಿ ಕ್ಲಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಅಭಿಷೇಕ್, ಈ ಚಿತ್ರದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

  ಮೋಷನ್ ಪೋಸ್ಟರ್ ಬಿಡುಗಡೆ

  ಮೋಷನ್ ಪೋಸ್ಟರ್ ಬಿಡುಗಡೆ

  ಮೇ 29ರಂದು ಅಂಬರೀಷ್ ಜನ್ಮದಿನ. ಈ ಸಂದರ್ಭದಲ್ಲಿ ಅಂಬರೀಷ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಲು ಚಿತ್ರತಂಡ ಮುಂದಾಗಿದೆ. ಅಂಬರೀಷ್ ಹುಟ್ಟುಹಬ್ಬದಂದು 'ಬ್ಯಾಡ್ ಮ್ಯಾನರ್ಸ್' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.

  ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್?ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್?

  ಪಾಪ್ ಕಾರ್ನ್ ತಂಡ

  ಪಾಪ್ ಕಾರ್ನ್ ತಂಡ

  ಸೂರಿ ಅವರ ಹಿಂದಿನ ಚಿತ್ರ 'ಪಾಪ್ ಕಾರ್ನ್ ಮಂಕಿ ಟೈಗರ್‌'ನಲ್ಲಿ ಕೆಲಸ ಮಾಡಿದ್ದ ತಂಡವೇ ಇಲ್ಲಿ ಇರಲಿದೆ. ಸ್ಟುಡಿಯೋ 18 ಬ್ಯಾನರ್ ಅಡಿ ಸುಧೀರ್ ಕೆಎಂ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಇರಲಿದೆ. ದುನಿಯಾ ಸೂರಿ ಜತೆಗೂಡಿ ಅಮೃತ್ ಭಾರ್ಗವ್ ಕಥೆ ಹಾಗೂ ಚಿತ್ರಕಥೆ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಚಿತ್ರದ ನಾಯಕಿ, ವಿಲನ್ ಹಾಗೂ ಇತರ ಕಲಾವಿದರ ಆಯ್ಕೆ ಬಹಿರಂಗವಾಗಿಲ್ಲ.

  English summary
  Abhishek Amabreesh has shared his happiness about his next movie Bad Manners with Duniya Suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X