ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಗೆ ಟೈಮೇ ವಿಲನ್!
ರೆಬಲ್ ಸ್ಟಾರ್ ಅಂಬರೀಶ್ ಸುಪುತ್ರ ಅಭಿಷೇಕ್ ಇಂದು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಮೊದಲ ಸಿನಿಮಾ 'ಅಮರ್' ಚಿತ್ರದ ಮುಹೂರ್ತ ಇಂದು ನೆರವೇರಿದೆ. ಆದರೆ, ಅಂಬಿ ಪುತ್ರನಿಗೆ ಟೈಮ್ ವಿಲನ್ ಆಗಿದೆಯಂತೆ.
ಹೌದು, 'ಅಮರ್' ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗಶೇಖರ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಭಿಷೇಕ್ ಈ ಚಿತ್ರದಲ್ಲಿ ಒಬ್ಬ ಬೈಕ್ ರೇಸರ್ ಪಾತ್ರ ಮಾಡುತ್ತಿದ್ದು, ಚಿತ್ರದಲ್ಲಿ ಹೀರೋ ಹೀರೋಯಿನ್ ಇಬ್ಬರು ಸಹ ಬೈಕ್ ರೇಸರ್ ಆಗಿರುತ್ತಾರಂತೆ. ಇವರ ಜರ್ನಿಯೇ ಈ ಚಿತ್ರದ ಕಥೆ ಆಗಿದೆ.
'ಅಮರ್' ಸಿನಿಮಾದಲ್ಲಿ ವಿಲನ್ ಇಲ್ಲ. ಯಾಕೆಂದರೆ, ಇಲ್ಲಿ 'ಟೈಂ ಇಸ್ ದಿ ವಿಲನ್' ಅಂತ್ತಾರೆ ನಾಗಶೇಖರ್. ಒಬ್ಬ ಹುಡುಗ ಮತ್ತು ಹುಡುಗಿಯ ಜೀವನದಲ್ಲಿ ಸಮಯ ಹೇಗೆ ವಿಲನ್ ಆಗುತ್ತದೆ ಎನ್ನುವುದು ಚಿತ್ರದಲ್ಲಿ ತೋರಿಸಲಾಗಿದೆಯಂತೆ. ವಿಶೇಷ ಅಂದರೆ, 90ರ ದಶಕದಲ್ಲಿ ನಡೆದ ಒಬ್ಬ ನಟಿಯ ಜೀವನದ ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಲಾಗಿದೆಯಂತೆ.

ಒಂದು ಕಡೆ ಟೈಂ ವಿಲನ್ ಆದರೆ, ಅದರ ಜೊತೆಗೆ ಅಭಿಷೇಕ್ ಅವರ ಪಾತ್ರ ಕೂಡ ವಿಲನ್ ಶೇಡ್ ಹೊಂದಿದೆಯಂತೆ. ಹೆಚ್ಚು ಜರ್ನಿಯಲ್ಲಿಯೇ ಸಿನಿಮಾದ ಕಥೆ ನಡೆಯಲಿದೆ. ಎರಡ್ಮೂರು ವರ್ಷ ಆಕ್ಟಿಂಗ್, ಡ್ಯಾನ್ಸ್, ಫೈಟ್ ಎಲ್ಲ ಕಲಿತಿರುವ ಅಭಿಷೇಕ್ ಈ ಮೂಲಕ ಬೆಳ್ಳಿ ಪರದೆ ಮೇಲೆ ಕಂಗೊಳಿಸಲಿದ್ದಾರೆ.


Click it and Unblock the Notifications











