For Quick Alerts
  ALLOW NOTIFICATIONS  
  For Daily Alerts

  'ಅನ್ಯಾಯ, ಅಕ್ರಮದ ವಿರುದ್ಧ ಹೋರಾಡುವ ನನ್ನ ತಾಯಿ ನಟೋರಿಯಸ್': ಅಭಿ‍ಷೇಕ್

  |

  ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ತೆಗೆದುಕೊಂಡು ಹೋಗಬಾರದು ಎಂದು ಸುಮಲತಾ ಅಡ್ಡಿ ಪಡಿಸಿದರು ಎನ್ನುವ ಆರೋಪಕ್ಕೆ ಅಂಬಿ ಪುತ್ರ ಅಭಿಷೇಕ್ ಪ್ರತಿಕ್ರಿಯಿಸಿದ್ದಾರೆ.

  Rockline Venkatesh : ಅಂಬರೀಶ್ ಬಗ್ಗೆ ಮಾತನಾಡೋದಕ್ಕೆ ಅವರು ಯಾರು? | Filmibeat Kannada

  ''ನಮ್ಮ ತಾಯಿ ಗಂಡನನ್ನು ಕಳೆದುಕೊಂಡ ನೋವಿನಲ್ಲಿದ್ದರು. ಆ ಸಂದರ್ಭದಲ್ಲಿ ಯಾರಾದರೂ ಮಾತನಾಡುವ ಪರಿಸ್ಥಿತಿಯಲ್ಲಿ ಇರ್ತಾರಾ, ಈ ವಿಷಯದ ಬಗ್ಗೆ ಏನೂ ಮಾತಾಡಿಲ್ಲ'' ಎಂದು ಅಭಿಷೇಕ್ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.

  'ಅಂಬಿ ಸ್ಮಾರಕ ಮನವಿ ಪತ್ರ ಮುಖಕ್ಕೆ ಎಸೆದ್ರು': ಎಚ್‌ಡಿಕೆ ಮಾಡಿದ ಅವಮಾನ ಬಿಚ್ಚಿಟ್ಟ ಸುಮಲತಾ'ಅಂಬಿ ಸ್ಮಾರಕ ಮನವಿ ಪತ್ರ ಮುಖಕ್ಕೆ ಎಸೆದ್ರು': ಎಚ್‌ಡಿಕೆ ಮಾಡಿದ ಅವಮಾನ ಬಿಚ್ಚಿಟ್ಟ ಸುಮಲತಾ

  ''ನಮ್ಮ ತಂದೆ ನಿಧನರಾದ ಕೆಲವು ಗಂಟೆಗಳ ಬಳಿಕ ಎಚ್‌ಡಿ ಕುಮಾರಸ್ವಾಮಿ ಅವರೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನಮ್ಮ ಮಾತು ನಂಬುವುದಿಲ್ಲ ಎನ್ನುವುದಾದರೇ, ನಿಮ್ಮ ಮಾತು ನೀವೇ ನೋಡಿ. ಆ ವಿಡಿಯೋ ಬೈಟ್ ತೆಗೆದು ನೋಡಲು ಹೇಳಿ'' ಎಂದು ಅಭಿಷೇಕ್ ತಿರುಗೇಟು ಕೊಟ್ಟಿದ್ದಾರೆ.

  ಇನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ನಟೋರಿಯಸ್ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅಭಿಷೇಕ್, ''ಅಕ್ರಮ ಗಣಿಗಾರಿಕೆ ವಿರುದ್ಧ ಕೆಲಸ ಮಾಡಿದ್ರೆ ನಟೋರಿಯಸ್? ಅನ್ಯಾಯದ ವಿರುದ್ಧ, ಅಸತ್ಯದ ವಿರುದ್ಧ, ಅಕ್ರಮದ ವಿರುದ್ಧ ಹೋರಾಡುವುದು ನಟೋರಿಯಸ್ ಎನ್ನುವುದಾದರೇ ನನ್ನ ತಾಯಿ ನಟೋರಿಯಸ್'' ಎಂದು ಉತ್ತರಿಸಿದ್ದಾರೆ.

  ಇದಕ್ಕೂ ಮುಂಚೆ ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅಂಬರೀಶ್ ''ಸ್ಮಾರಕ ನಿರ್ಮಾಣ ಕೆಲಸದಲ್ಲಿ ಕುಮಾರಸ್ವಾಮಿಯ ಯಾವ ಪಾತ್ರವೂ ಇಲ್ಲ. ಯಡಿಯೂರಪ್ಪ ಸಹಿ ಹಾಕಿದರು. ಮಂಡ್ಯಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಬೇಕು ಎಂದು ಹಠ ಮಾಡಿದ್ದು ಅಭಿಷೇಕ್, ಕುಮಾರಸ್ವಾಮಿ ಅಲ್ಲ'' ಎಂದು ಹೇಳಿದರು.

  English summary
  Mandya MP Sumalatha and Late actor Ambarish son Abhishek react about HD Kumaraswamy allegations.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X