ನಿಖಿಲ್ ಕುಮಾರ್ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಷೇಕ್
Recommended Video
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆದ್ದು ನೂತನ ಎಂಪಿಯಾಗಿ ಆಯ್ಕೆಯಾಗಿದ್ದಾರೆ. ಸುಮಲತಾ ವಿರುದ್ಧ ಸೋತ ನಿಖಿಲ್ ಕುಮಾರ ಸ್ವಾಮಿ ಇದುವರೆಗೂ ಮಂಡ್ಯ ಜನತೆ ಮುಂದೆ ಪ್ರತ್ಯಕ್ಷರಾಗಲಿಲ್ಲ. ಆದ್ರಿವತ್ತು ಗೆಳೆಯ ಅಭಿಷೇಕ್ ಅಂಬರೀಶ್ ಗೆ ಶುಭ ಕೋರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಅಭಿಷೇಕ್ ಮೊದಲ ಸಿನಿಮಾಗೆ ಶುಭಕೋರುವ ಜೊತೆಗೆ ಮಂಡ್ಯ ಚುನಾವಣೆಯ ಬಗ್ಗೆಯು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ನಿನ್ನ ಅಂಬರೀಶ್ ಹುಟ್ಟುಹಬ್ಬಕ್ಕು ಶುಭಾಷಯ ತಿಳಿಸಿದ್ದಾರೆ. ಅಭಿಷೇಕ್ ಮತ್ತು ನಿಖಿಲ್ ಇಬ್ಬರು ಉತ್ತಮ ಗೆಳೆಯರು. ಚುನಾವಣೆಯ ಪ್ರಯುಕ್ತ ಇಬ್ಬರು ಮುಖಾಮುಖಿ ಆಗುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇಬ್ಬರ ಗೆಳೆತನಕ್ಕೆ ಚುನಾವಣೆ ಮುಳುವಾಯಿತು ಅಂತ ಹೇಳಲಾಗುತ್ತಿತ್ತು. ಆದ್ರೀಗ ಗೆಳೆಯರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ನಡೆಸುವ ಮೂಲಕ ಹಳೆಯದೆಲ್ಲವನ್ನು ಮರೆತು ಒಟ್ಟಿಗೆ ಸಾಗೋಣ ಎಂದು ಹೇಳುತ್ತಿದ್ದಾರೆ. ಗೆಳೆಯ ನಿಖಿಲ್ ಶುಭಾಶಯದಿಂದ ಸಂತಸಗೊಂಡ ಅಭಿಷೇಕ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

ತುಂಬಾ ಧನ್ಯವಾದಗಳು ಸಹೋದರ
"ನಿನ್ನ ಈ ಬೆಂಬಲಕ್ಕೆ ತುಂಬಾ ಧನ್ಯವಾದಗಳು ಸಹೋದರ. ನನಗೆ ಗೊತ್ತು ಮೊದಲ ಚಿತ್ರ ರಿಲೀಸ್ ಗೂ ಮೊದಲು ಎಷ್ಟು ಒತ್ತಡ ಇರುತ್ತೆ ಎನ್ನುವುದು. ನಿನ್ನ ಈ ಮಾತುಗಳು ಚಿತ್ರರಂಗದಲ್ಲಿ ಒಗ್ಗಟ್ಟಿನಿಂದ ಮತ್ತು ಪ್ರೀತಿಯಿಂದ ಮತ್ತದೆ ಹುಮ್ಮಸ್ಸಿನ ಜೊತೆಗೆ ಮುಂದುವರೆಯಲು ಸಹಾಯಕವಾಗಲಿದೆ. ಈ ಮಾತುಗಳನ್ನು ಹೇಳಿದ್ದಕ್ಕೆ ಧನ್ಯವಾದಗಳು" ಎಂದು ಗೆಳೆಯನ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯ ಅಭಿವೃದ್ದಿಗೆ ಒಟ್ಟಿಗೆ ಶ್ರಮಿಸೋಣ
"ಒಬ್ಬ ಸ್ನೇಹಿತನಾಗಿ ಯಾವಾಗಲು ನಿನ್ನ ಯಶಸ್ಸನ್ನು ಬಯಸುತ್ತೇನೆ. ಇದು ನಿನ್ನ ಹಿನ್ನಡೆ ಎಂದು ತಿಳಿದುಕೊಳ್ಳಬೇಡ. ನಿನಗೂ ಗೊತ್ತು ಈ ಇದೆಲ್ಲ ಜೀವನದ ಒಂದು ಭಾಗ ಅಷ್ಟೆ ಎಂದು. ಮಂಡ್ಯದ ಜಿಲ್ಲೆಗೆ ನಿನ್ನ ಈ ಮಾತುಗಳು ಪ್ರೋತ್ಸಾಹದಾಯಕವಾಗಿರಲಿದೆ. ಮತ್ತು ಮಂಡ್ಯ ಜಿಲ್ಲೆಯ ಉತ್ತಮ ಅಭಿವೃದ್ಧಿಗೆ ಒಟ್ಟಿಗೆ ಕೆಲಸ ಮಾಡೋಣ"

ನೀನು ಯಾವಾಗಲು ನನ್ನ ಸ್ನೇಹಿತ
"ನಿನ್ನ ಈ ಮಾತುಗಳಿಂದ ಕೇವಲ ಮಂಡ್ಯ ಮಾತ್ರವಲ್ಲ, ಇಡೀ ಕರ್ನಾಟಕ ನಿನ್ನ ಈ ಒಳ್ಳೆತನವನ್ನು ಪ್ರಶಂಶಿಸುತ್ತದೆ. ಒಳ್ಳೆಯದಾಗಲಿ ನಿನಗೆ. ನೀನು ಯಾವಾಗಲು ನನ್ನ ಸ್ನೇಹಿತ" ಎಂದು ನಿಖಿಲ್ ಮಾತಿಗೆ ಗೆಳೆಯ ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಉತ್ತಮ ಬೆಳವಣಿಗೆ
ಅಭಿಷೇಕ್ ಮತ್ತು ನಿಖಿಲ್ ಮಾತುಗಳನ್ನು ಕೇಳಿ ಸುಮಲತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿಗೆ ಮುಂದಕ್ಕೆ ಹೋಗೋಣ. ಹೀಗೆ ಒಂದಾಗಿ ಸಾಗುವುದು ಉತ್ತಮ ಎಂದು ಹೇಳುವ ಮೂಲಕ ಇದು ಉತ್ತಮ ಬೆಳವಣಿಗೆ ಎನ್ನು ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











