ಡಿ ಬಾಸ್ ದರ್ಶನ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ವಿಲನ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಅದ್ದೂರಿಯಾಗಿ ಆಚರಿಸಿದೆ. ಶಿವರಾತ್ರಿಯ ದಿನ, ಬೆಂಗಳೂರಿನ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಸಿ ಎಂ ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.
Recommended Video
ಇನ್ನು ಸಚಿವ ಬೈರತಿ ಬಸವರಾಜ್ ಮತ್ತು ಅಭಿಷೇಕ್ ಅಂಬರೀಶ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಸಮಯದಲ್ಲಿ ಮಾತನಾಡಿದ ಅಭಿಷೇಕ್ ಅಂಬರೀಶ್, ಅಪ್ಪನ ಪರವಾಗಿ ನಾನು ಇಲ್ಲಿ ಬಂದಿದ್ದೀನಿ ಎಂದರು. ಇನ್ನು ಮುನಿರತ್ನ ಬಗ್ಗೆ ಮಾತನಾಡಿದ ಅಭಿ "ನಿಮ್ಮ ಸಿನಿಮಾದಲ್ಲಿ ನಮ್ಮ ಇಡಿ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ, ಕುರುಕ್ಷೇತ್ರದಲ್ಲಿ ಅಪ್ಪ ಮತ್ತು ದರ್ಶನ್ ಅವರಿಗೆ ಅವಕಾಶ ನೀಡಿದ್ರೆ, ಮುಂದಿನ ಸಿನಿಮಾ ಮದಕರಿನಾಯಕ ಚಿತ್ರದಲ್ಲಿ ಅಮ್ಮ ಕೂಡ ಇದ್ದಾರೆ. ಆದರೆ ನನ್ನ ಯಾಕೆ ಬಿಟ್ಟಿದ್ದೀರಿ" ಎಂದು ಕೇಳಿದರು.
ಇನ್ನು ಮಾತು ಮುಂದುವರೆಸಿದ ಅಭಿ "ನನಗೆ ಅವಕಾಶ ಕೊಡುವುದಾದರೆ ದರ್ಶನ್ ಅವರು ಹೀರೋ ಆಗಿರಬೇಕು, ನನ್ನನ್ನು ವಿಲನ್ ಆಗಿ ಮಾಡಿ" ಎಂದು ಕೇಳಿಕೊಂಡರು. ವಿಲನ್ ಪಾತ್ರದಲ್ಲಿಯೆ ಯಾಕೆ ಮಾಡಬೇಕು ಎನ್ನುವುದನ್ನು ಸಹ ಅಭಿ ವಿವರಿಸಿದರು.

"ಚಿಕ್ಕವನಾಗಿದ್ದಾಗಿನಿಂದಲು ಅಪ್ಪ ಬೈಯುತ್ತಿದ್ದರು. ನನ್ನ ಕಂಟ್ರೋಲ್ ಗೆ ನೀನು ಬರುವುದಿಲ್ಲ ನಿನ್ನ ಅಣ್ಣನ ಹತ್ರ ಹೋಗು ಎಂದು ಹೇಳುತ್ತಿದ್ದರು. ದಿನ ಬೈಯಿಸಿಕೊಂಡು ಅಭ್ಯಾಸ ಆಗಿದೆ. ಹಾಗಾಗಿ ಸ್ಕ್ರೀನ್ ನಲ್ಲಿ ಆದರೆ ನನಗೂ ವರ್ಕೌಟ್, ನಿಮಗೂ ಆಗುತ್ತೆ" ಎಂದು ಹೇಳಿ ನಕ್ಕರು.
ಇನ್ನು ದರ್ಶನ್ ಜೊತೆ ಅಭಿಷೇಕ್, ಮುನಿರತ್ನ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮುನಿರತ್ನ ನಿರ್ಮಾಣದ ವಿಂಗ್ ಕಮಾಂಡರ್ ಅಭಿನಂದನ್ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ಕೂಡ ಬಣ್ಣಹಚ್ಚುತ್ತಿದ್ದಾರೆ.


Click it and Unblock the Notifications











