For Quick Alerts
  ALLOW NOTIFICATIONS  
  For Daily Alerts

  ಅಮ್ಮನ ಜೊತೆಗೆ ಅಭಿ ಹುಟ್ಟುಹಬ್ಬ : ದರ್ಶನ್ ಶುಭಾಶಯ

  |
  Darshan and Nikhil wish Abhishek Ambarish on his special day | FILMIBEAT KANNADA

  ನಟ ಅಭಿಷೇಕ್ ಅಂಬರೀಶ್ ನಿನ್ನೆ (ಅಕ್ಟೋಬರ್ 3) ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ತಾಯಿ ಸುಮಲತಾ ಜೊತೆಗೆ ಬರ್ತ್ ಡೇ ಆಚರಿಸಿ ಸಂಭ್ರಮಿಸಿದ್ದಾರೆ.

  ದೊಡ್ಡ ಮಟ್ಟದ ಆಚರಣೆಗೆ ಬ್ರೇಕ್ ಹಾಕಿದ್ದ ಅಭಿಷೇಕ್ ತಾಯಿ ಜೊತೆಗೆ ಸಿಂಪಲ್ ಆಗಿ ಒಂದು ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬದ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ತಾಯಿಯಿಂದ ಪ್ರೀತಿಯ ಮುತ್ತು ಅಭಿಗೆ ಸಿಕ್ತು. ಮಗನ ಹುಟ್ಟುಹಬ್ಬದ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಸುಮಲತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಅಭಿಷೇಕ್ ಹುಟ್ಟುಹಬ್ಬಕ್ಕೆ ನಟ ದರ್ಶನ್ ಸಹ ಶುಭಾಶಯ ತಿಳಿಸಿದ್ದಾರೆ. ''ನನ್ನ ಪ್ರೀತಿಯ ಅಭಿಷೇಕ್ ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಲಿ'' ಎಂದು ಬರೆಯುವುದರ ಜೊತೆಗೆ 'ಅಮರ್' ಸಿನಿಮಾದ ತಮ್ಮ ಹಾಗೂ ಅಭಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

  ನಟ ನಿಖಿಲ್ ಕುಮಾರ್ ಕೂಡ ಸೋಷಿಯಲ್ ಮೀಡಿಯಾ ಮೂಲಕ ಅಭಿಷೇಕ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಅಭಿಮಾನಿಗಳ ವಿಶ್ ಕೂಡ ಅಭಿಗೆ ತಲುಪಿದೆ.

  'ಅಮರ್' ಸಿನಿಮಾದ ಮೂಲಕ ಲಾಂಚ್ ಆದ ಅಭಿಷೇಕ್ ಅಂಬರೀಶ್ ಈಗ ತಮ್ಮ ಎರಡನೇ ಸಿನಿಮಾ ತಯಾರಿಯಲ್ಲಿ ಇದ್ದಾರೆ. ಈ ಸಿನಿಮಾವನ್ನು 'ಸಂತು ಸ್ಟೈಟ್ ಫಾರ್ವರ್ಡ್' ನಿರ್ದೇಶಕ ಮಹೇಶ್ ರಾವ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ.

  English summary
  Abhishek Ambarish celebrated his birthday with his mother Sumalatha Ambarish.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X