ಯಶ್-ದರ್ಶನ್ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ: ಅಂಬಿ ಪುತ್ರ ಅಭಿಷೇಕ್
Recommended Video

ರಾಕಿಂಗ್ ಸ್ಟಾರ್ ಯಶ್ ಕುರಿತು ಮನೆ ಬಾಡಿಗೆ ಕಟ್ಟೋಕೆ ಆಗದವರು ಮಾತನಾಡ್ತಾರೆ ಎಂಬ ನಿಖಿಲ್ ಕುಮಾರ್ ಹೇಳಿಕೆಗೆ ಸುಮಲತಾ ಅಂಬರೀಶ್, ಯಶ್ ವಿರೋಧ ವ್ಯಕ್ತಪಡಿಸಿದ್ದಾರೆ.
ಇದೀಗ, ಅಂಬರೀಶ್ ಪುತ್ರ ಅಭಿಷೇಕ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಯಶ್ ಮತ್ತು ದರ್ಶನ್ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ' ಎಂದಿದ್ದಾರೆ.
'ದರ್ಶನ್ ಆಗಲಿ, ಯಶ್ ಆಗಲಿ ಕಷ್ಟದಿಂದ ಬಂದು ಸಾಧನೆ ಮಾಡಿರುವ ವ್ಯಕ್ತಿ ನಟ ಯಶ್. ನಮಗೆ ಮತ್ತು ನಮ್ಮ ಎದುರಾಳಿ ಅಭ್ಯರ್ಥಿಗೆ ಕೌಟುಂಬಿಕ ಹಿನ್ನೆಲೆ ಚೆನ್ನಾಗಿದೆ. ಆದ್ರೆ, ದರ್ಶನ್, ಯಶ್ ಅವರಿಗೆ ಯಾವುದೇ ಹಿನ್ನೆಲೆ ಇರಲಿಲ್ಲ. ಸ್ವಂತ ದುಡಿಮೆಯಿಂದ ಮೇಲೆ ಬಂದಿರುವುದು. ಅಂತಹ ವ್ಯಕ್ತಿಗಳ ಬಗ್ಗೆ ಮಾತನಾಡುವ ಹಕ್ಕು ಇದ್ಯಾ ಎಂದು ಯೋಚನೆ ಮಾಡ್ಬೇಕು'' ಎಂದಿದ್ದಾರೆ.

ಇನ್ನು ತಮ್ಮ ಬೆಂಬಲಿಗರ ಮೇಲೆ ಮತ್ತು ಕುಟುಂಬದ ಮೇಲೆ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರಿಸಿದ ಅಭಿಷೇಕ್ 'ನಾವು ಏನೂ ಉದ್ದೇಶಪೂರ್ವಕವಾಗಿ ಟೀಕೆ ಮಾಡ್ತಿಲ್ಲ. ಅವರು ಏನಾದರೂ ಹೇಳಿದಾಗ ಅದಕ್ಕೆ ಪ್ರತಿಕ್ರಿಯೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ನಾವು ಅದನ್ನಷ್ಟೇ ಮಾಡ್ತಿದ್ದೀವಿ' ಎಂದು ತಿರುಗೇಟು ನೀಡಿದ್ದಾರೆ.
ನಟ ಯಶ್ ಮಂಡ್ಯದಲ್ಲಿ ಅಬ್ಬರದ ಪ್ರಚಾರ ಮುಂದುವರಿಸಿದ್ದು, ನಾಳೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಅಖಾಡಕ್ಕೆ ಮತ್ತೆ ಧುಮುಕುತ್ತಿದ್ದಾರೆ. ಮತ್ತೊಂದೆಡೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಕೂಡ ಮತಯಾಚನೆ ಮಾಡ್ತಿದ್ದಾರೆ.


Click it and Unblock the Notifications











