ಅಪ್ಪ ಅಂಬಿಯಂತೆ ಮಾನವೀಯತೆ ಮೆರೆದ ಮಗ ಅಭಿಶೇಕ್
ಮೈಸೂರು, ನವೆಂಬರ್ 26 : ಕಳೆದ ಎರಡು ದಿನಗಳಿಂದಲೂ ತಂದೆಯ ಅಂಬರೀಶ್ ಪಾರ್ಥೀವ ಶರೀರದ ಪಕ್ಕದಲ್ಲೇ ಇರುವ ಮಗ ಅಭಿಶೇಕ್ ಭಾವೋದ್ವೇಗ ಹೇಳತೀರದು.
ಇನ್ನು ಇಂದು ಬೆಳಗ್ಗಿನವರೆಗೂ ಮಂಡ್ಯದ ಸರ್.ಎಂ.ವಿ ಮೈದಾನದಲ್ಲೇ ಮೊಕ್ಕಾಂ ಹೂಡಿದ್ದ ಅಭಿಶೇಕ್ ಸರಳ ಜೀವಿಯಂತೆ ಕಂಡರು. ತಂದೆಯಂತೆ ಮಗನೂ ಸಹ ವಿಕಲಾಂಗನೋರ್ವನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.
ಸರ್.ಎಂ.ವಿ ಮೈದಾನದಲ್ಲಿ ಅಂತಿಮ ದರ್ಶನದ ವೇಳೆ, ಅಂಬರೀಶ್ ಪಾರ್ಥೀವ ಶರೀರದ ದರ್ಶನ ಪಡೆಯಲು ವಿಕಲಾಂಗನೋರ್ವ ಆಗಮಿಸಿದ್ದರು. ಆದರೇ ನೂಕುನುಗ್ಗಲು ಉಂಟಾದ ಹಿನ್ನೆಲೆ, ತನಗೆ ಅಂಬರೀಶ್ ಪಾರ್ಥಿವ ಶರೀರದ ದರ್ಶನ ಸಿಗೋದಿಲ್ಲ ಅಂತ ವಾಪಸ್ ಆಗುತ್ತಿದದ್ದರು.

ಇದನ್ನು ಗಮನಿಸಿದ ಅಭಿಶೇಕ್ ಅಂಬರೀಶ್, ವಿಕಲಾಂಗನನ್ನು ಕರೆದು ಪಾರ್ಥೀವ ಶರೀರದ ದರ್ಶನ ಮಾಡಿಸಿದ್ದರು. ಅಂಬರೀಶ್ ಗೆ ವಿಕಲಾಂಗ ಅಂತಿಮ ನಮನ ಸಲ್ಲಿಸಿದರು. ವಿಕಲಾಂಗ ಅಭಿಮಾನಿಯ ಇಚ್ಛೆ ಈಡೇರಿಸಿ ಅಭಿಶೇಕ್ ಮಾನವೀಯತೆ ಮೆರೆದರು.
ಈ ಮಧ್ಯೆ ಭದ್ರತೆಯನ್ನು ಬೇಧಿಸಿ ಹೆಲಿಕಾಪ್ಟರ್ ನತ್ತ ನುಗ್ಗಿ ಓಡಿಬಂದ ಅಭಿಮಾನಿಯೊಬ್ಬನಿಗೆ ಪೊಲೀಸರು ಕಪಾಳಮೋಕ್ಷ ಮಾಡಿದ ಘಟನೆಯೂ ನಡೆಯಿತು.


Click it and Unblock the Notifications











