'ಅಮರ್'ಗೆ ನೆಗೆಟಿವ್ ರಿವ್ಯೂ: ಯಂಗ್ ರೆಬಲ್ ಸ್ಟಾರ್ ಪ್ರತಿಕ್ರಿಯೆ
Recommended Video
''ಸಿನಿಮಾ ಎಂದ ಮೇಲೆ ಪಾಸಿಟಿವ್ ನೆಗೆಟಿವ್ ಇದ್ದದ್ದೇ. ಯಾವ ಸಿನಿಮಾ ಕೂಡ ಫರ್ಫೆಕ್ಟ್ ಅಲ್ಲ. ಕೆಲವರಿಗೆ ಕೆಲವು ಚಿತ್ರ ಇಷ್ಟ ಆದರೆ, ಇನ್ನು ಕೆಲವರಿಗೆ ಇಷ್ಟ ಆಗುವುದಿಲ್ಲ.'' ಎಂದು ನಟ ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ.
ಅಭಿಷೇಕ್ ಅಂಬರೀಶ್ ಮೊದಲ ಸಿನಿಮಾ 'ಅಮರ್' ಕಳೆದ ವಾರ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕೆಲವರಿಗೆ ಸಿನಿಮಾ ಸಾಮಾನ್ಯ ಎನಿಸಿದೆ.
'ಅಮರ್' ಚಿತ್ರಕ್ಕೆ ಬಂದ ಕೆಲವು ವಿಮರ್ಶೆಗಳು ನೆಗೆಟಿವ್ ಆಗಿದೆ. ಕೆಲ ಪತ್ರಿಕೆಗಳು ಹೊಗಳಿದರೆ, ಇನ್ನು ಕೆಲವು ಪತ್ರಿಕೆಗಳಿಗೆ ಚಿತ್ರ ಇಷ್ಟ ಆಗಿಲ್ಲ.
ಹೀಗಿರುವಾಗ ಈ ಬಗ್ಗೆ ನಟ ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರಕ್ಕೆ ಬಂದ ನೆಗೆಟಿವ್ ರಿವ್ಯೂ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಮುಂದೆ ಓದಿ..

ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ
''ಹತ್ತು ಜನ ನಮ್ಮ ಬಗ್ಗೆ ಹೊಗಳಿದರೆ ಅದು ನಮ್ಮ ಮಧ್ಯವೇ ಇರುತ್ತದೆ. ನಮ್ಮನ್ನು ಒಬ್ಬ ಬೈದರೇ ನೂರು ಜನರು ಕೇಳಿಸಿಕೊಳ್ಳುತ್ತಾರೆ. ಸಿನಿಮಾಗೆ ನನ್ನ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಒಬ್ಬರು ಇಬ್ಬರಿಗೆ ಸಿನಿಮಾ ಇಷ್ಟ ಆಗಿಲ್ಲ ಎಂದರೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನೂರು ಜನರಲ್ಲಿ ಐದು ಜನರಿಗೆ ಸಿನಿಮಾ ಇಷ್ಟ ಆಗಿಲ್ಲ ಅಂತ, ಉಳಿದವರನ್ನು ಮರೆಯಲು ಆಗುತ್ತದೆಯೇ.'' - ಅಭಿಷೇಕ್ ಅಂಬರೀಶ್, ನಟ

ಐದಾರು ಬಾರಿ ನೋಡಿದವರು ಇದ್ದಾರೆ
''ಸಿನಿಮಾದ ಕಲೆಕ್ಷನ್ ಏನು ಎನ್ನವುದೇ ಚಿತ್ರದ ಫಲಿತಾಂಶ ಹೇಳುತ್ತಿದೆ. ಅದೇ ಪ್ರೇಕ್ಷಕರ ಪ್ರತಿಕ್ರಿಯೆ. ನಿರ್ಮಾಪಕರೇ ಕಲೆಕ್ಷನ್ ಬಗ್ಗೆ ಹೇಳಿದಾಗ ನಾನು ಏಕೆ ತಲೆ ಕೆಡಿಸಿಕೊಳ್ಳ ಬೇಕು. ಸಿನಿಮಾ ಕೆಲವರಿಗೆ ಬಹಳ ಇಷ್ಟ ಆಗಿದೆ. ತುಂಬ ಜನ ಮೇಸಜ್ ಮಾಡಿದ್ದಾರೆ. ಐದಾರು ಬಾರಿ ನೋಡಿದವರು ಇದ್ದಾರೆ.'' - ಅಭಿಷೇಕ್ ಅಂಬರೀಶ್, ನಟ

ಮಂಡ್ಯದ ಜನ ಕೂಡ ಬಹಳ ಮೆಚ್ಚಿದ್ದಾರೆ
''ನಾನು ಮಂಡ್ಯದ ಮರಿ ಮಗು. ಮಂಡ್ಯದ ಜನ ಪ್ರೀತಿಯಿಂದ ಸಿನಿಮಾ ನೋಡಿದ್ದಾರೆ. ಮೂರು ಗಂಟೆ ಚಿತ್ರಮಂದಿರದಲ್ಲಿ ಚಪ್ಪಾಳೆ ತಟ್ಟಿ ಕೂಗು ಹಾಕಿ ಸಂಭ್ರಮಿಸಿದ್ದಾರೆ. ಮಂಡ್ಯದವರು ನಮ್ಮ ಕುಟುಂಬದ ಸದಸ್ಯರಿದ್ದ ಹಾಗೆ. ಮುಂದೆ ಈ ರೀತಿ ಆ ರೀತಿ ಸಿನಿಮಾ ಮಾಡಿ ಅಂತ ಹೇಳುತ್ತಾರೆ. ಈ ಚಿತ್ರದ ಬಗ್ಗೆ ಅವರು ತುಂಬ ಪಾಸಿಟಿವ್ ಆಗಿ ಇದ್ದಾರೆ.'' - ಅಭಿಷೇಕ್ ಅಂಬರೀಶ್, ನಟ

ಯಾವ ಸಿನಿಮಾ ಕೂಡ ಫರ್ಫೆಕ್ಟ್ ಅಲ್ಲ
''ನೂರಕ್ಕೆ ನೂರರಷ್ಟು ಪಾಸಿಟಿವ್ ರಿವ್ಯೂ ಯಾವ ಸಿನಿಮಾಗೂ ಸಿಗಲು ಸಾಧ್ಯ ಇಲ್ಲ. ನೆಗೆಟಿವ್ ರಿವ್ಯೂ ಬಗ್ಗೆ ಯೋಚನೆ ಮಾಡುತ್ತಾ ಕೂರುವುದಿಲ್ಲ. ನನಗೆ ಮುಖ್ಯವಾಗಿ ಬೇಕಾಗಿರುವುದು ಜನರ ರಿವ್ಯೂ. ಯಾವ ಸಿನಿಮಾ ಕೂಡ ಫರ್ಫೆಕ್ಟ್ ಅಲ್ಲ. ನಮ್ಮ ನಿರ್ಮಾಪಕರು, ನಿರ್ದೇಶಕರು ಹಾಗೂ ಜನರು ಖುಷಿಯಾಗಿದ್ದಾರೆ ನನಗೆ ಬೇಕಿರುವುದು ಅಷ್ಟೇ.'' - ಅಭಿಷೇಕ್ ಅಂಬರೀಶ್, ನಟ

'ಕೆಜಿಎಫ್'' ಬಗ್ಗೆ ಕೂಡ ನೆಗೆವಿವ್ ಬರೆದಿದ್ದರು
''ಯಶ್ ಅವರು ಫೋನ್ ಮಾಡಿ ಸಿನಿಮಾಗೆ ಹೇಗೆ ಪ್ರತಿಕ್ರಿಯೆ ಸಿಕ್ಕಿದೆ ಎಂದರು. ಅವರು ಕೂಡ ಎಲ್ಲ ಕಡೆ ವಿಚಾರಿಸಿದ್ದಾರೆ. ನನ್ನ ಸಿನಿಮಾಗೆ ಕೂಡ ನೆಗೆಟಿವ್ ರಿವ್ಯೂ ಬರೆದಿದ್ದರು ಎಂದರು. ಕೆಲೆಕ್ಷನ್ ನಲ್ಲಿ ಕೆಜಿಎಫ್ ಗಿಂತ ಸಿನಿಮಾ ಬೇಕೆ. ಕೆಜಿಎಫ್ ಸಿನಿಮಾಗೆ ಕೂಡ ನೆಗೆಟಿವ್ ಬರೀತಾರೆ ಎಂದರೆ ಅದರ ಮುಂದೆ ನಾವ್ ಯಾರು.'' - ಅಭಿಷೇಕ್ ಅಂಬರೀಶ್, ನಟ


Click it and Unblock the Notifications











