For Quick Alerts
  ALLOW NOTIFICATIONS  
  For Daily Alerts

  'ಅಮರ್' ಶೀರ್ಷಿಕೆ ಹಿಂದಿದೆ ಸೂಪರ್ ಸೀಕ್ರೆಟ್

  By Pavithra
  |
  Amar Kannada movie : ಸುಂಸುಮ್ನೆ ಮರಿ ರೆಬೆಲ್ ಸಿನೆಮಾಗೆ ಅಮರ್ ಅಂತ ಟೈಟಲ್ ಇಟ್ಟಿಲ್ಲ ಕಣ್ರೀ

  'ಅಮರ್' ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿನಯ ಮಾಡುತ್ತಿರುವ ಚೊಚ್ಚಲ ಸಿನಿಮಾ. ಇದೇ ಚಿತ್ರದ ಮೂಲಕ ಅಂಬರೀಶ್ ಅವರ ಪುತ್ರ ಕನ್ನಡ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ.

  ಈ ಹಿಂದೆ ಅಂಬರೀಶ್ ಅವರ ಪುತ್ರ 'ಜಲಿಲಾ' ಎನ್ನುವ ಚಿತ್ರದಲ್ಲಿ ಅಭಿನಯ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಈಗ ಅಮರ್ ಎಂಬ ಶೀರ್ಷಿಕೆಯ ಚಿತ್ರದಲ್ಲಿ ಅಭಿಷೇಕ್ ನಾಯಕನಾಗಿ ಆಕ್ಟ್ ಮಾಡುತ್ತಿದ್ದಾರೆ.

  ಯಂಗ್ ರೆಬೆಲ್ ಸ್ಟಾರ್ ಗೆ ಸ್ವಾಗತ ಕೋರಿದ ಸ್ಯಾಂಡಲ್ ವುಡ್ಯಂಗ್ ರೆಬೆಲ್ ಸ್ಟಾರ್ ಗೆ ಸ್ವಾಗತ ಕೋರಿದ ಸ್ಯಾಂಡಲ್ ವುಡ್

  ಅಷ್ಟಕ್ಕೂ ಅಪ್ಪನ ಚಿತ್ರದ ಹೆಸರನ್ನೇ ಮಗನ ಚಿತ್ರಕ್ಕೆ ಟೈಟಲ್ ಆಗಿ ಮಾಡಿದ್ದೇಕೆ ಎನ್ನುವುದರ ಹಿಂದೆ ಸೂಪರ್ ಸೀಕ್ರೆಟ್ ಅಡಗಿದೆ. ಹೌದು ಅ ಅಕ್ಷರ ಸಿನಿಮಾರಂಗದಲ್ಲಿ ಅದೃಷ್ಟ ಎನ್ನುವುದು ಸಿನಿಮಾಮಂದಿಯ ಅಭಿಪ್ರಾಯ ಅದಕ್ಕಾಗಿಯೇ ಅಮರ್ ಎನ್ನುವ ಟೈಟಲ್ ಇಟ್ಟಿದ್ದಾರಂತೆ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮೊದಲ ಚಿತ್ರ 'ಆನಂದ್', ಪುನೀತ್ ರಾಜ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ಟೈಟಲ್ 'ಅಪ್ಪು'. ಅಷ್ಟೇ ಅಲ್ಲದೆ ಧ್ರುವ ಸರ್ಜಾ ಅಭಿನಯದ ಫಸ್ಟ್ ಚಿತ್ರದ ಟೈಟಲ್ ಕೂಡ 'ಅದ್ದೂರಿ' ಅವರೆಲ್ಲರೂ ಯಶಸ್ಸು ಕಂಡಂತೆ ಅಭಿಷೇಕ್ ಕೂಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಉಳಿದುಕೊಳ್ಳಲಿ ಎನ್ನುವ ಉದ್ದೇಶ ನಿರ್ದೇಶಕ ನಾಗಶೇಖರ್ ಮತ್ತು ನಿರ್ಮಾಪಕ ಸಂದೇಶ್ ನಾಗರಾಜ್ ಅವರದ್ದು.

  English summary
  Actor Abhishek's Amar cinema Muhurta has taken place today. The producer Sandesh Nagraj reveled secret of the film titled Amar. The film is directed by Nagashekhar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X