ಅಭಿಮಾನದ ಜಾತ್ರೆ ಕಣ್ತುಂಬಿಕೊಂಡ ದರ್ಶನ್ 'ಸ್ನೇಹಿತರು' ; 'ಡೆವಿಲ್' ಗೆ 'ತರುಣ್ ಸುಧೀರ್ ' ಬಹುಪರಾಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಅವ್ರದ್ದೇ ಆದ ಒಂದು ಸ್ನೇಹಿತರ ಬಳಗ ಇದೆ. ದರ್ಶನ್ ಹೋದಲ್ಲಿ.. ಬಂದಲ್ಲಿ..ನೆರಳಿನಂತೆ ಹಿಂಬಾಲಿಸಿ.. ಕಾಪಾಡುವ.. ಅಪಾರ ಕಾಳಜಿಯನ್ನ ಹೊಂದಿರುವ ಈ ಬಣ ಕೂಡ ನಿನ್ನೆ ದರ್ಶನ್ ಅವರ ಜೊತೆಯಲ್ಲಿ ನಿದ್ದೆ ಗೆಟ್ಟಿತ್ತು. ಅಭಿಮಾನದ ಜಾತ್ರೆಯನ್ನ ಅಭಿಮಾನಿಗಳ ದಾಸ ದರ್ಶನ್ ಅವರ ಬಳಿ ನಿಂತು ಕಣ್ತುಂಬಿಕೊಂಡಿತು.
ಹೌದು, ದರ್ಶನ್ ಅವರ ಹುಟ್ಟುಹಬ್ಬವನ್ನಾಚರಿಸಲು ರಾತ್ರಿ ಅಭಿಷೇಕ್ ಅಂಬರೀಶ್ ಬಂದಿದ್ದರು. ವಿನೋದ್ ಪ್ರಭಾಕರ್ ಹಾಗೂ ಧನ್ವೀರ್ ಕೂಡ ಇದ್ದರು. ಚಿಕ್ಕಣ್ಣ ಹಾಗೂ ಝೈದ್ ಖಾನ್ ಕೂಡ ತೂಗುದೀಪ ನಿಲಯದಲ್ಲಿ ಕಾಣಿಸಿಕೊಂಡರು.

ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುದ್ದಿನ ಮಗ ವಿನೀಶ್ ಕೂಡ, ತಂದೆಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ತನ್ನ ತಂದೆಯ ಮೇಲೆ ಅಭಿಮಾನಿಗಳಿಗೆ ಇರುವ ಅಭಿಮಾನವನ್ನ ಇನ್ನೊಮ್ಮೆ ಹತ್ತಿರದಿಂದ ನೋಡಿದರು. ಕೇವಲ ದರ್ಶನ್ ದರ್ಶನಕ್ಕೆ ಅಷ್ಟೇ ಅಲ್ಲ, ವಿನೀಶ್ ಅವರನ್ನ ನೋಡಲು ಕೂಡ ನೂಕು ನುಗ್ಗಲು ವಾತಾವರಣ ಕಂಡು ಬಂತು
ಡೆವಿಲ್ ಟೀಸರ್ ಗೆ ಫಿದಾ ಆದ ತರುಣ್ ಸುಧೀರ್
ಕಾಟೇರ ಚಿತ್ರದ ಸೂತ್ರಧಾರ ತರುಣ್ ಸುಧೀರ್ ಕೂಡ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನ ಕೋರಲು ಬಂದಿದ್ದರು. ಡೆವಿಲ್ ಚಿತ್ರದ ಫಸ್ಟ್ ಲುಕ್ ಟೀಸರ್ ಗೆ ಫಿದಾ ಆದರು.

ದರ್ಶನ್ ಹಾಗೂ ಡೆವಿಲ್ ತಂಡದ ಜೊತೆ ಕುಳಿತು ಟೀಸರ್ ನೋಡಿದ ತರುಣ್ ಸುಧೀರ್ ತಮ್ಮದೇ ಚಿತ್ರವೆಂಬಂತೆ ಸಂಭ್ರಮವನ್ನೂ ಪಟ್ಟರು. ಸದ್ಯಕ್ಕೆ ತರುಣ್ ಸುಧೀರ್ ಅವರ ಸಂಭ್ರಮದ ನಗು, ರಾಜರಾಜೇಶ್ವರಿ ನಗರದ ಸೀಮಾರೇಖೆಯಾಚೆ ದಾಟಿದೆ. ಸಾಮಾಜಿಕ ಜಾಲತಾಣದಲ್ಲಿ ತರುಣ್ ಮೊಗದಲ್ಲಿನ ನಗು ವೈರಲ್ ಆಗಿದೆ
ಡೆವಿಲ್ ಟೀಸರ್ ಗೆ ಬೆಂಕಿ ರೆಸ್ಫಾನ್ಸ್
ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರಸು ಪಾಪು ಹೆಸರು ಕೇಳಲ್ವ? ಎಂಬ ಡೆವಿಲ್ ಚಿತ್ರದ ಡೈಲಾಗ್ ಆಗಲೇ ಅಭಿಮಾನಿಗಳ ಬಾಯಲ್ಲಿ ನಲಿಯುತ್ತಿದೆ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಡಿ ಕಂಪನಿಗೆ ಕಿಕ್ ಕೊಡ್ತಿದೆ. ಯುಟ್ಯೂಬ್ ನಲ್ಲಿ ಡೆವಿಲ್ ಚಿತ್ರದ ಟೀಸರ್ ಧಗಧಗಿಸುತ್ತಿದೆ.


Click it and Unblock the Notifications











