For Quick Alerts
  ALLOW NOTIFICATIONS  
  For Daily Alerts

  'ಅಮರ್' ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶ ಇಲ್ಲಿದೆ

  By Pavithra
  |

  'ಅಮರ್' ರೆಬೆಲ್ ಸ್ಟಾರ್ ಪುತ್ರ ಅಭಿನಯ ಮಾಡುತ್ತಿರುವ ಚೊಚ್ಚಲ ಸಿನಿಮಾ. ಅಭಿಷೇಕ್ ಅಮರ್ ಸಿನಿಮಾದಲ್ಲಿ ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳುತ್ತಿದ್ದು ಈಗಾಗಲೇ ಚಿತ್ರಕ್ಕೆ ಬೇಕಿರುವ ಎಲ್ಲಾ ರೀತಿ ತಯಾರಿಗಳು ನಡೆದಿದ್ದು, ಚಿತ್ರೀಕರಣವೂ ಶುರುವಾಗಿದೆ.

  ಇತ್ತೀಚಿಗಷ್ಟೆ ಸಿನಿಮಾದ ನಾಯಕಿ ತಾನ್ಯ ಹೋಪೆ ಸಿನಿಮಾಗಾಗಿ ಚಿತ್ರೀಕರಣದ ಸೆಟ್ ನಲ್ಲೇ ಬೈಕ್ ರೈಡಿಂಗ್ ಟ್ರೈನಿಂಗ್ ಪಡೆದುಕೊಂಡಿದ್ದರು. ಈಗ ಅಭಿಮಾನಿಗಳಿಗೆ ಅಂಬಿ ಮಗನ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುತ್ತಿದೆ.

  ಕೊಯಂಬತ್ತೂರಿಗೆ ಹೊರಟು ನಿಂತ ರೆಬೆಲ್ ಸ್ಟಾರ್ ಪುತ್ರ

  'ಅಮರ್' ಚಿತ್ರದಲ್ಲಿ ನಟಿಸಲು 50 ಜನ ಸ್ಪೋರ್ಟ್ಸ್ ಬೈಕ್ ರೈಡರ್ಸ್ ಬೇಕಾಗಿದ್ದು, ರೈಡರ್ಸ್ ಗಳು ತಮ್ಮ ಸ್ವಂತ ಬೈಕ್ ಹೊಂದಿರಬೇಕು, ಆಗಸ್ಟ್ ಮೊದಲ ವಾರದಲ್ಲಿ 15 ದಿನ ಶೂಟಿಂಗ್ ಇರುತ್ತದೆ. ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಊಟಿ ಯಲ್ಲಿ ಕೊನೆಗೊಳ್ಳುತ್ತದೆ. ಊಟ, ವಸತಿ, ಪೆಟ್ರೋಲ್ ಚಿತ್ರದ ನಿರ್ಮಾಕರೇ ವ್ಯವಸ್ಥೆ ಮಾಡಿಕೊಡಲಿದ್ದಾರೆ.

  ನೀವು ಸ್ಪೋರ್ಟ್ಸ್ ಬೈಕ್ ರೈಡರ್ಸ್ ಆಗಿದ್ದರೆ, ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದ್ದರೆ 'ಅಮರ್' ಸಿನಿಮಾ ತಂಡ ನೀಡಿರುವ ಈ ನಂಬರ್ ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ. ಪ್ರಸಾದ್ :9886443366. ಇನ್ನು 'ಅಮರ್' ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ.

  English summary
  Kannada actor Abhishekh's 'Amar' movie team needs 50 sports bike riders for the film shooting. riders of their own bike can be part of shooting. Amar cinema is directed by Nagashekhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X