ದರ್ಶನ್ ಸ್ಟೈಲ್ ನಲ್ಲಿ ಅಭಿಷೇಕ್ ಡೈಲಾಗ್, ಅಭಿಮಾನಿಗಳು ಫುಲ್ ಖುಷ್

ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಇನ್ನು ಬಂದಿಲ್ಲ. ಈ ನಡುವೆ ಅಂಬರೀಶ್ ಮಗ ಅಭಿಷೇಕ್ ತಮ್ಮ ತಾಯಿಗೆ ಸಾಥ್ ಕೊಡ್ತಿದ್ದಾರೆ.

ಸುಮಲತಾ ಅವರ ಜೊತೆ ಚುನಾವಣಾ ಪ್ರಚಾರ ಮಾಡುತ್ತಿರುವ ಅಭಿಷೇಕ್ ಅಲ್ಲಿನ ಜನರನ್ನ ರಂಜಿಸಲು ದರ್ಶನ್ ಮತ್ತು ಅಂಬರೀಶ್ ಸ್ಟೈಲ್ ನಲ್ಲಿ ಡೈಲಾಗ್ ಹೇಳಿದ್ದಾರೆ. ಈ ಡೈಲಾಗ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Abhisheks Dialogue In Darshan Style

ಶ್ರೀರಂಗಪಟ್ಟಣದ ಹಳ್ಳಿಯೊಂದರಲ್ಲಿ ಪ್ರಚಾರ ಮಾಡಬೇಕಾದರೇ, ಅಲ್ಲಿನ ದರ್ಶನ್ ಅಭಿಮಾನಿಗಳು ಅಭಿಷೇಕ್ ಬಳಿ 'ಡಿ ಬಾಸ್ ಅವರ ಡೈಲಾಗ್ ಹೇಳಿ' ಎಂದು ಒತ್ತಾಯಿಸಿದ್ದಾರೆ. ಅಭಿಮಾನಿಗಳ ಕೋರಿಕೆ ಗೌರವಿಸಿದ ಅಭಿಷೇಕ್, ''ಅಮ್ಮ ನಡೆದಿದ್ದೇ ದಾರಿ, ತಾಕತ್ ಇದ್ರೆ ಕಟ್ಟಾಕಿ'' ಎಂದಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರದ ಬಗ್ಗೆ ಸಂಪೂರ್ಣ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ

'ಆನೆ ನಡೆದಿದ್ದೇ ದಾರಿ, ತಾಕತ್ ಇದ್ರೆ ಕಟ್ಟಾಕಿ' ಎನ್ನುವುದು ಯಜಮಾನ ಚಿತ್ರದ ಅಸಲಿ ಡೈಲಾಗ್. ಇನ್ನು ಅದೇ ರೀತಿ ಅಂಬರೀಶ್ ಅವರ ಸ್ಟೈಲ್ ನಲ್ಲಿ 'ನೋ ವೇ, ಚಾನ್ಸ್ ಇಲ್ಲ' ಎಂಬ ಮಾತುಗಳು ಕೂಡ ಅಭಿಷೇಕ್ ಬಾಯಲ್ಲಿ ಬಂದವು.

ಒಟ್ನಲ್ಲಿ, ಮಂಡ್ಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲ್ತಾರಾ ಅಥವಾ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ತಾರಾ ಎಂಬ ಚರ್ಚೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

More from Filmibeat

English summary
Sumalatha Ambarish son Abhishek's Dialogue In Darshan Style Got Applause From the People in mandya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X