'ಕೆಜಿಎಫ್'ನಿಂದ ವೈರಲ್ ಆದ ಈ ಯುವಕ ಯಾರು?

Recommended Video

KGF Kannada Movie : ಕೆಜಿಎಫ್ ನಿಂದ ಈ ಯುವಕನ ವಿಡಿಯೋ ವೈರಲ್ | FILMIBEAT KANNADA

ಸೋಷಿಯಲ್ ಮೀಡಿಯಾ ಬಂದ ಮೇಲೆ ಯಾರು ಯಾವಾಗ ಹೇಗೆ ಫೇಮಸ್ ಆಗುತ್ತಾರೆ ಅಂತ ಗೊತ್ತಾಗುವುದಿಲ್ಲ. ಒಂದು ವಿಡಿಯೋ, ಒಂದು ಸಣ್ಣ ಡೈಲಾಗ್, ಡ್ಯಾನ್ಸ್ ತುಣುಕು ಹೀಗೆ ಒಂದು ಸಣ್ಣ ಪ್ರಯತ್ನಗಳು ದೊಡ್ಡ ಮಟ್ಟಿಗೆ ಫೇಮಸ್ ಆಗುವಂತೆ ಮಾಡುತ್ತದೆ.

ಆಗಾಗ, ಸಾಕಷ್ಟು ಜನರು ಸೋಷಿಯಲ್ ಮೀಡಿಯಾ ಮೂಲಕ ಸ್ಟಾರ್ ಆಗುತ್ತಾರೆ. ಈಗ ಅದೇ ರೀತಿ ಒಬ್ಬ ಹುಡುಗ ಎಲ್ಲರ ಗಮನ ಸೆಳೆದಿದ್ದಾನೆ. ಆತನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಫೇಸ್ ಬುಕ್, ಟ್ವಿಟ್ಟರ್, ಇನ್ಟಾಗ್ರಾಮ್ ಎಲ್ಲಿ ನೋಡಿದರು ಆ ವಿಡಿಯೋ ಕಾಣುತ್ತಿದೆ. ಟ್ರೋಲ್ ಪೇಜ್ ಗಳಲ್ಲಿಯೂ ಆ ವಿಡಿಯೋ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ವಿಶೇಷ ಅಂದರೆ, ಆ ಹುಡುಗ ಈಗ ಸಖತ್ ಫೇಮಸ್ ಆಗಿರುವುದು 'ಕೆಜಿಎಫ್' ಸಿನಿಮಾದ ಮೂಲಕ. 'ಕೆಜಿಎಫ್' ಸಿನಿಮಾ ನೋಡಿ ಬಂದ ಈ ಹುಡುಗ ಸಿಕ್ಕಾಪಟ್ಟೆ ಜೋಶ್ ಆಗಿ ಅದನ್ನ ಹೇಳಿದ್ದಾನೆ ಆತನ ಮಾತು ಹೇಳಿ ಎಲ್ಲರೂ ಶಾಕ್ ಆಗಿ ಬಿಟ್ಟಿದ್ದಾರೆ. ಮುಂದೆ ಓದಿ..

ಅಬ್ರದೀಪ್ ಎಂಬ ಯುವಕ

'ಕೆಜಿಎಫ್' ಸಿನಿಮಾದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಆ ಬಗ್ಗೆ ಮಾತನಾಡಿದ್ದ ಒಬ್ಬ ಯುವಕನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗಿದೆ. ಯಾರು ಈ ಹುಡುಗ? ಎಂದು ಅನೇಕರು ಕೇಳಿತ್ತಿದ್ದಾರೆ. ಅಂದಹಾಗೆ, ಈ ಹುಡುಗನ ಹೆಸರು ಅಬ್ರದೀಪ್. ಮೂಲತಃ ಕೊಲ್ಕತ್ತಾದ ಈ ಹುಡುಗ ಸದ್ಯ ಇರುವುದು ಬೆಂಗಳೂರಿನಲ್ಲಿಯೇ.

ಯುವಕನ ಜೋಶ್ ಮಾತು

ಯುವಕನ ಜೋಶ್ ಮಾತು

''ಕೆಜಿಎಫ್' ಬಾಂಬ್ ಬ್ಲಾಸ್ಟಡ್. ಈ ವರ್ಷದ ಬೆಸ್ಟ್ ಸಿನಿಮಾ ಇದು. ನಾನು ಒಬ್ಬ ಭಾರತೀಯನಾಗಿ ಹೆಮ್ಮೆ ಪಡುತ್ತಿದ್ದೇನೆ. ಸಲಾಮ್ ರಾಕಿ ಭಾಯ್. ಯಶ್ ಎಂತಹ ನಟನೆ ಮಾಡಿದ್ದಾರೆ. ಬಾಲಿವುಡ್ ನವರು ಕನ್ನಡಕ್ಕೆ ಬಂದು ಸಿನಿಮಾ ಮಾಡುವುದನ್ನು ಕಲಿಯಿರಿ. ಕನ್ನಡ ಇಂಡಸ್ಟ್ರಿ ಇಸ್ ದಿ ಬೆಸ್ಟ್'' ಎಂದು ಆ ಯುವಕ ಹೇಳಿದ್ದ. ಆತನ ಹೇಳಿದ್ದ ಸ್ಟೈಲ್ ಗೆ ಎಲ್ಲರೂ ಫಿದಾ ಆಗಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್

ಅಬ್ರದೀಪ್ 'ಕೆಜಿಎಫ್' ಬಗ್ಗೆ ಮಾತನಾಡುವುದಕ್ಕಿಂತ ಮುಂಚೆಯೂ ಫೇಮಸ್ ಆಗಿದ್ದರು. ಅವರದ್ದೆ ಆದ ಯೂ ಟ್ಯೂಬ್ ಚಾನಲ್ ಹೊಂದಿದ್ದು, 20 ಸಾವಿರಕ್ಕೂ ಹೆಚ್ಚು ಸಬ್ಸ್ಕ್ರೈಬರ್ಸ್ ಹೊಂದಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್, ಇನ್ಟಾಗ್ರಾಮ್ ಖಾತೆಗಳಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ.

Angry Rantman

Angry Rantman

Angry Rantman ಎಂಬ ಹೆಸರಿನಲ್ಲಿ ಅಬ್ರದೀಪ್ ಅನೇಕ ವಿಡಿಯೋ ಗಳನ್ನ ಮಾಡಿದ್ದಾರೆ. ಇದೇ ರೀತಿ ಆಕ್ರೋಶದಿಂದ ಮಾತನಾಡುವ ಅಬ್ರದೀಪ್ ಅದೇ ಕಾರಣಕ್ಕೆ ಜನಪ್ರಿಯತೆ ಪಡೆದಿದ್ದಾರೆ. ಕ್ರೀಡೆ ಮತ್ತು ಸಿನಿಮಾಗಳ ಬಗ್ಗೆ ವಿಡಿಯೋಗಳನ್ನ ಮಾಡುವುದು ಎಂದರೆ ಅಬ್ರದೀಪ್ ಗೆ ಬಹಳ ಇಷ್ಟವಂತೆ.

More from Filmibeat

English summary
Abhradeep Saha's 'KGF' movie review video going viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X