Abishek Ambareesh: ಜೋಡೆತ್ತು ಗುಡ್‌ ಮ್ಯಾನರ್ಸ್, ಬ್ಯಾಡ್ ಮ್ಯಾನರ್ಸ್ ಏನೇನು ಅಂತ ಹೇಳಿದ ಅಭಿ

ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅಭಿಷೇಕ್ ಅಂಬರೀಶ್ ಹಾಗೂ ರಚಿತಾ ರಾಮ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಸೂರಿ ಹಾಗೂ ಅಭಿ ಯೂಟ್ಯೂಬ್ ಸಂದರ್ಶನಗಳಲ್ಲಿ ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ಟೀಸರ್, ಸಾಂಗ್ಸ್ ವೈರಲ್ ಆಗ್ತಿದೆ.

ಅಭಿಷೇಕ್ ಅಂಬರೀಶ್ ಸ್ಯಾಂಡಲ್‌ವುಡ್ ಜೋಡೆತ್ತು ದರ್ಶನ್ ಹಾಗೂ ಯಶ್ ಕುರಿತು ಮಾತನಾಡಿದ್ದಾರೆ. ಕನ್ನಡ ಪಿಕ್ಚರ್ ಯೂಟ್ಯೂಬ್ ಸಂದರ್ಶನದಲ್ಲಿ ಇಬ್ಬರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಂಬರೀಶ್ ಕುಟುಂಬಕ್ಕೆ ದರ್ಶನ್ ಹಾಗೂ ಯಶ್ ಇಬ್ಬರು ಬಹಳ ಆಪ್ತರು. ಸುಮಲತಾ ಅಂಬರೀಶ್, ಅಭಿ ಜೊತೆಗೆ ಬಹಳ ಆತ್ಮೀಯ ಒಡನಾಟವಿದೆ. ಸದ್ಯ ಅಭಿ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ನಟಿಸಿದ್ದಾರೆ. ಜೋಡೆತ್ತು ಗುಡ್‌ ಮ್ಯಾನರ್ಸ್, ಬ್ಯಾಡ್ ಮ್ಯಾನರ್ಸ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Abishek Ambareesh About jodetthu Darshan, Yash Good and bad Manners

"ದರ್ಶನ್ ಬಹಳ ಸಾಫ್ಟ್ ಮನುಷ್ಯ. ತುಂಬಾ ಸೆನ್ಸಿಟೀವ್. ಆ ಸೆನ್ಸಿಟೀವ್ ಅನ್ನೋದು ಗುಡ್ ಆಗಿರಬಹುದು. ಬ್ಯಾಡ್ ಆಗಿರಬಹುದು. ತುಂಬಾ ಸೆನ್ಸಿಟೀವ್. ಬಹಳ ಜೆನ್ಯೂನ್. ಯಾವುದೇ ಮುಚ್ಚು ಮರೆ ಇಲ್ಲ. ಅದು ಕೆಲವೊಮ್ಮೆ ಒಳ್ಳೆಯದು ಇರಬಹುದು. ಕೆಟ್ಟದು ಇರಬಹುದು. ಅದನ್ನು ಯಾರು ಹೇಗೆ ಸ್ವೀಕರಿಸುತ್ತಾರೆ ಅನ್ನೋದರ ಮೇಲೆ ಇರುತ್ತದೆ. ನಾವು ಹತ್ತಿರದಿಂದ ನೋಡಿದ್ದೇವೆ. ನಮಗೆ ಅವ್ರು ಮಾಡಿದ್ದೆಲ್ಲಾ ಗುಡ್ ಅನ್ನಿಸುತ್ತೆ"

"ದರ್ಶನ್ ಅವ್ರ ಹಾರ್ಡ್ ಬಹಳ ಜೆನ್ಯೂನ್. ಒರಟಿರಬಹುದು ಮನುಷ್ಯ. ಅಲ್ಲಿ ಇಲ್ಲಿ ಸ್ವಲ್ಪ ರಫ್ ಇರಬಹುದು. ಆದರೆ ಜೆನ್ಯೂನ್ ಹಾರ್ಟ್. ಮಗುವಿನಂತ ಮನಸ್ಸು" ಎಂದು ಹೇಳಿದ್ದಾರೆ.

Abishek Ambareesh About jodetthu Darshan, Yash Good and bad Manners

ಇನ್ನು ಯಶ್ ಬಗ್ಗೆ ಮಾತನಾಡಿರುವ ಅಭಿಷೇಕ್ "ಬಹಳ ಹಾರ್ಡ್‌ ವರ್ಕಿಂಗ್. ಮಹತ್ವಾಕಾಂಕ್ಷಿ. ಯೋಚಿಸುವ ಮಟ್ಟವೇ ದೊಡ್ಡದು. ನಾವು ಸಾಮಾನ್ಯವಾಗಿ ಸಿನಿಮಾ, ಸಕ್ಸಸ್ ಬಗ್ಗೆ ಯೋಚಿಸ್ತೀವಿ. ಅವ್ರು ಲೆಗಸ್ಸಿ ಬಗ್ಗೆ ಯೋಚಿಸ್ತಾರೆ. ಸಿನಿಮಾದಿಂದ ಇಂಡಸ್ಟ್ರಿಗೆ ನನ್ನ ಕೊಡುಗೆ ಏನು? ಎನ್ನುವ ಮಟ್ಟದಲ್ಲಿ ಯೋಚಿಸ್ತಾರೆ. ಇಂಡಸ್ಟ್ರಿಗೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಯೋಚನೆ ಸಾಮಾನ್ಯವಾಗಿ ಯಾರಿಗೂ ಬರಲ್ಲ. ಅದು ಅವರ ಒಳ್ಳೆ ಮ್ಯಾನರ್ಸ್"

"ಬ್ಯಾಡ್ ಮ್ಯಾನರ್ಸ್ ಏನು ಅಂದ್ರೆ ಅವ್ರ ನೆಕ್ಸ್ಟ್ ಸಿನಿಮಾ ಯಾವ್ದು ಅಂತ ನನಗೂ ಹೇಳಿಲ್ಲ. ಅಣ್ಣ ಅಣ್ಣ ಅಂತ ಅಷ್ಟು ಕ್ಲೋಸ್ ಆಗಿದ್ರು, ಅಷ್ಟು ಹೇಳಿಲ್ಲ ಅನ್ನೋ ಬ್ಯಾಡ್ ಮ್ಯಾನರ್ಸ್ ಇದೆ" ಎಂದು ಅಭಿಷೇಕ್ ತಮಾಷೆಯಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ತಮ್ಮ ಬ್ಯಾಡ್ ಬ್ಯಾನರ್ಸ್, ಗುಡ್ ಮ್ಯಾನರ್ಸ್ ಬಗ್ಗೆ ಎದುರಾದ ಪ್ರಶ್ನೆಗೆ "ನನ್ನದು ಯಾವುದೇ ಬ್ಯಾಡ್ ಮ್ಯಾನರ್ಸ್ ಇಲ್ಲ. ನಾನು ಬಹಳ ಅಮಾಯಕ, ನನ್ನ ಪಾಡಿಗೆ ನಾನು ಇರ್ತೀನಿ. ಅದೇ ನನ್ನ ಬ್ಯಾಡ್‌ ಮ್ಯಾನರ್ಸ್" ಎಂದು ಅಭಿ ಹೇಳಿದ್ದಾರೆ. ಸೂರಿ ಅವರ ಬ್ಯಾಡ್ ಮ್ಯಾನರ್ಸ್ ಹೇಳೋಕೆ ಸಾಧ್ಯವಿಲ್ಲ. ಅವ್ರು ನಮ್ಮ ಗುರುಗಳು. ಸಿನಿಮಾ ಬಗ್ಗೆ ಇರುವ ಪ್ರಾಮಾಣಿಕತೆ.. ಕೆಲಸದ ಮೇಲಿನ ಶ್ರದ್ಧೆ. ನೇರವಾಗಿ ಮಾತನಾಡುವುದು ಅವರ ಗುಡ್ ಮ್ಯಾನರ್ಸ್" ಎಂದಿದ್ದಾರೆ.

ನಮ್ಮ ತಂದೆಯವರ ಪ್ರಾಮಾಣಿಕತೆ, ಅವರಲ್ಲಿ ಯಾವುದೇ ಮುಚ್ಚುಮರೆ ಇರಲಿಲ್ಲ. ಡವ್ ಮಾಡಲಿಲ್ಲ. ಬಕೆಟ್ ಹಿಡಿಯಲಿಲ್ಲ. ಯಾರಿಗೂ ಹೆದರಲಿಲ್ಲ. ಅದು ಅವರ ಗುಡ್ ಮ್ಯಾನರ್ಸ್.. ಅಮ್ಮನ ಬಹಳ ಹಾರ್ಡ್‌ ವರ್ಕಿಂಗ್. ಯಾವುದೇ ಕೆಲಸ ಆದರೂ ಶ್ರದ್ಧೆಯಿಂದ ಮಾಡ್ತಾರೆ. ಯಾರನ್ನಾದರೂ ಹಚ್ಚಿಕೊಂಡು ಅವರನ್ನು ಬಿಡಲ್ಲ ಅದು ಅವರ ಗುಡ್‌ ಮ್ಯಾನರ್ಸ್.. ಕೆಲಸ, ಜೀವನ ಎಲ್ಲದರ ಬಗ್ಗೆಯೂ ಬಹಳ ಒತ್ತಡ ತೆಗೆದುಕೊಳ್ಳುತ್ತಾರೆ. ಅದೇ ಅವರ ಬ್ಯಾಡ್ ಮ್ಯಾನರ್ಸ್" ಎಂದು ಅಭಿ ಹೇಳಿದ್ದಾರೆ.

ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ. ರುದ್ರ ಎನ್ನುವ ರುತ್‌ಲೆಸ್ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಪಕ್ಕಾ ಸೂರಿ ಸ್ಟೈಲ್ ರಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ನವೆಂಬರ್ 24ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಸುಧೀರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

More from Filmibeat

English summary
Abishek Ambareesh interesting comments on jodethu Darshan, Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X