"ಫ್ಯಾನ್ಸ್‌ಗೋಸ್ಕರ ಬದುಕ್ತಾರೆ ಅವ್ರು": ದರ್ಶನ್ ಟ್ಯಾಟೂ ಬಗ್ಗೆ ಸ್ಯಾಂಡಲ್‌ವುಡ್ ತಾರೆಯರ ಪ್ರತಿಕ್ರಿಯೆ

ನಟ ದರ್ಶನ್ ತಮ್ಮ ಎದೆ ಮೇಲೆ "ನನ್ನ ಪ್ರೀತಿಯ ಸೆಲೆಬ್ರೆಟೀಸ್" ಎಂದು ಟ್ಯಾಟೂ ಹಾಕಿಸಿಕೊಂಡಿರುವ ವಿಚಾರ ಭಾರೀ ಚರ್ಚೆ ಆಗ್ತಿದೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಇದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಚಕ್ಕರ್ ಹೊಡೀತಿದೆ. ಈ ಬಗ್ಗೆ ಇದೀಗ ಕನ್ನಡ ಚಿತ್ರರಂಗದ ತಾರೆಯರು ಕೂಡ ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ.

ಸಾಮಾನ್ಯವಾಗಿ ಅಭಿಮಾನಿಗಳು ನೆಚ್ಚಿನ ನಟನ ಹೆಸರನ್ನು ತಮ್ಮ ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ದರ್ಶನ್ ಅವರ ನೂರಾರು ಅಭಿಮಾನಿಗಳು ಈ ರೀತಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ದರ್ಶನ್ ವೀರಾಭಿಮಾನಿಯೊಬ್ಬರು ದರ್ಶನ್ ಭಾವಚಿತ್ರವನ್ನು ತಮ್ಮ ಬೆನ್ನಿನ ಮೇಲೆ ದೊಡ್ಡದಾಗಿ ಹಚ್ಚೆ ಹಾಕಿಸಿಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಸ್ಟಾರ್ ನಟರೊಬ್ಬರು ಎದೆ ಮೇಲೆ ತಮ್ಮ ಅಭಿಮಾನಿಗಳ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.

ಅಭಿಮಾನಿಗಳ ಮೇಲಿನ ಪ್ರೀತಿಯನ್ನು ದರ್ಶನ್ ವ್ಯಕ್ತಪಡಿಸಿರುವ ರೀತಿಯ ಬಗ್ಗೆ ನಿಧಾನವಾಗಿ ಸ್ಯಾಂಡಲ್‌ವುಡ್ ತಾರೆಯರು ಮಾತನಾಡಲು ಆರಂಭಿಸಿದ್ದಾರೆ. ನಟ ಅಭಿಷೇಕ್ ಅಂಬರೀಶ್ ಹಾಗೂ ನಟಿ ಆಶಿಕಾ ರಂಗನಾಥ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಫ್ಯಾನ್ಸ್‌ಗೋಸ್ಕರ ಬದುಕ್ತಾರೆ ಅವ್ರು

ಫ್ಯಾನ್ಸ್‌ಗೋಸ್ಕರ ಬದುಕ್ತಾರೆ ಅವ್ರು

ನಟ ದರ್ಶನ್ ಬಗ್ಗೆ ಅಭಿಷೇಕ್ ಅಂಬರೀಶ್ ಯೂಟ್ಯೂಬ್ ಮಾಧ್ಯಮಗಳ ಜೊತೆ ಮಾತನಾಡುತ್ತಾ "ನಾನು ಯಾವತ್ತು ಇದನ್ನು ಪ್ರಸ್ತಾಪ ಮಾಡಿಲ್ಲ. ಜನ ಹೆಂಗೆ ತಗೋತಾರೀ ಏನೋ ಗೊತ್ತಿಲ್ಲ. ಕೆಲ ವರ್ಷಗಳ ಹಿಂದೆ ಒಮ್ಮೆ ದರ್ಶನ್ ಅವ್ರನ್ನು ಭೇಟಿ ಆದಾಗ ತುಂಬಾ ಸುಸ್ತಾದಂತೆ ಕಾಣುತ್ತಿದ್ದರು. ಅವರು ಜಿಮ್ ಅದು ಇದು ಅಂತ ಬರೀ ಎರಡೆರಡು ಗಂಟೆ ಮಾತ್ರ ನಿದ್ದೆ ಮಾಡುತ್ತಿದ್ದರು ಎಂದು ಗೊತ್ತಾಯಿತು. ನಾನು ಹೇಳ್ದೆ ಸ್ವಲ್ಪ ರೆಸ್ಟ್ ಮಾಡಿ. ಜಿಮ್‌ ವರ್ಕೌಟ್ ಬಿಟ್ಟು ಆರಾಮಾಗಿರಿ ಎಂದು ಹೇಳಿದ್ದೆ. ಇಷ್ಟು ಕಷ್ಟ ಯಾಕೆ ಎಂದೆ ಆಗ, ನಾನು ಏನೇ ಮಾಡಿದರೂ ನಮ್ಮ ಅಭಿಮಾನಿಗಳಿಗೆ ಮೋಸ ಮಾಡಲ್ಲ, ಅವ್ರು ನನ್ನಿಂದ ಅಪೇಕ್ಷೆ ಪಡ್ತಾರೆ. ನಾನು ಹೀಗೆ ಕಾಣಿಸ್ಬೇಕು ಅಂತ. ಅದಕ್ಕೆ ನಿದ್ದೆ ಕೆಟ್ಟರೂ ಪರವಾಗಿಲ್ಲ. ಆರೋಗ್ಯ ಕೆಟ್ಟರೂ ಪರವಾಗಿಲ್ಲ. ನಾನು ಜಿಮ್‌ಗೆ ಹೋಗ್ತೀನಿ ಎಂದಿದ್ದರು. ಅದರಲ್ಲಿ ಅವರ ವ್ಯಕ್ತಿತ್ವ ಗೊತ್ತಾಗುತ್ತೆ. ಫ್ಯಾನ್ಸ್‌ಗೋಸ್ಕರ ಬದುಕ್ತಾರೆ ಅವ್ರು"

ಎದೆ ಬಗೆದ್ರೆ ಫ್ಯಾನ್ಸ್ ಇದ್ದಾರೆ

ಎದೆ ಬಗೆದ್ರೆ ಫ್ಯಾನ್ಸ್ ಇದ್ದಾರೆ

"ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ನನ್ನ ಅಭಿಮಾನಿಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಯೋಚಿಸ್ತಾರೆ. ನನ್ನ ಪ್ರಕಾರ ಬರೀ ಭಾರತೀಯ ಚಿತ್ರರಂಗ ಅಲ್ಲ, ಪ್ರಪಂಚದ ಚಿತ್ರರಂಗದಲ್ಲೇ ಅಭಿಮಾನಿಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿರೋದು ಇವರು ಒಬ್ಬರೇ. ಎಲ್ಲರೂ ಭಾವುಕರಾದರು. ನಾನು ಭಾವುಕನಾದೆ. ನಾನು ಫೋನ್ ಮಾಡಿದ್ದಾಗ ಹೇಳ್ದೆ, ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ ಅಂತ. ಆಗ ಅವ್ರು ನಾನು ಬಾಯಿ ಮಾತಿಗೆ ಹೇಳಲ್ಲ ಎದೆಬಗೆದರೇ ಅವರೇ ಇರೋದು ಅಂತ, ಎಲ್ಲರ ಹೆಸರು ಹಾಕಿಕೊಳ್ಳೊಕೆ ಆಗಲ್ಲ, ನನ್ನ ಸೆಲೆಬ್ರೆಟೀಸ್ ಅಂತ ಒಂದೇ ಸಾಲಿನಲ್ಲಿ ಹಾಕಿದ್ದೀನಿ ಅಂದ್ರು. ಇನ್ನು ಮುಂದೆ ಯಾರೇ ದರ್ಶನ್ ಅವ್ರ ಬಗ್ಗೆ ಮಾತನಾಡ್ಬೇಕು ಅಂದ್ರೆ, ಇದು ಅವ್ರ ವ್ಯಕ್ತಿತ್ವ ಅಂತ ತಿಳ್ಕೊಂಡು ಮಾತಾಡ್ಲಿ" ಎಂದು ಅಭಿಷೇಕ್ ಹೇಳಿದ್ದಾರೆ.

ದರ್ಶನ್‌ ಸರ್‌ಗೆ ಹ್ಯಾಟ್ಸಾಪ್

ದರ್ಶನ್‌ ಸರ್‌ಗೆ ಹ್ಯಾಟ್ಸಾಪ್

ಇನ್ನು ನಟಿ ಆಶಿಕಾ ರಂಗನಾಥ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದರು. ಈ ವೇಳೆ ದರ್ಶನ್ ಅಭಿಮಾನಿಯೊಬ್ಬರು ಡಿಬಾಸ್ ಎಂದು ಕಾಮೆಂಟ್ ಮಾಡಿದ್ದರು. ಅದಕ್ಕೆ ಆಶಿಕಾ "ಡಿ ಬಾಸ್ ಸೂಪರ್, ಇತ್ತೀಚೆಗೆ ಅವ್ರು ಟ್ಯಾಟೂ ಮಾಡಿಸಿಕೊಂಡ್ರು, ಸೆಲೆಬ್ರೆಟೀಸ್ ಅಂತ. ಅವರಿಗೆ ಹ್ಯಾಟ್ಯಾಪ್. ಯಾಕಂದರೆ ಅವ್ರು ಅಭಿಮಾನಿಗಳನ್ನು ಅಷ್ಟು ಪ್ರೀತಿಸುತ್ತಾರೆ. ನಮ್ಮ ಅಭಿಮಾನಿಗಳನ್ನು ನಾವು ಅದೇ ರೀತಿ ಪ್ರೀತಿಸುವ ಅವಕಾಶ ಸಿಗುತ್ತೆ ಎನಿಸುತ್ತೆ. ಅವರದ್ದು ಅಷ್ಟು ದೊಡ್ಡ ಜರ್ನಿ" ಎಂದಿದ್ದಾರೆ.

More from Filmibeat

English summary
Abishek Ambareesh and ashika ranganath React to Darshan tattoo. Darshan given a huge tribute to fans by having tattoo. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X