ಅಂಬಿ ಮೊಮ್ಮಗನ ನಾಮಕರಣ ಶಾಸ್ತ್ರ; ಮಗನಿಗೆ ಅಭಿಷೇಕ್ ಇಟ್ಟ ಹೆಸರೇನು?

ಕಳೆದ ವರ್ಷ ನವೆಂಬರ್ 13ರಂದು ಸುಮಲತಾ ಅಂಬರೀಶ್ ಅಜ್ಜಿ ಆಗಿದ್ದರು. ನಟ ಅಭಿಷೇಕ್ ಅಂಬರೀಶ್‌ - ಅವಿವಾ ಬಿದಪ್ಪ ದಂಪತಿ ಪೋಷಕರಾಗಿ ಬಡ್ತಿ ಪಡೆದಿದ್ದರು. ಅವಿವಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಅಂಬಿ ಮೊಮ್ಮಗನ ನಾಮಕರಣ ನಡೆದಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಅಭಿಷೇಕ್ ಅಂಬರೀಶ್ ಮಗನ ನಾಮಕರಣ ಶಾಸ್ತ್ರ ನಡೆದಿದೆ. ಮಗನಿಗೆ ತಮ್ಮ ಅಪ್ಪನ ಹೆಸರನ್ನೇ ಅಭಿ ಇಟ್ಟಿದ್ದಾರೆ. ಜೂನಿಯರ್ ಅಂಬಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಕುಟುಂಬ ಸದಸ್ಯರು ಹಾಗೂ ಕೆಲವೇ ಆಪ್ತರು ಹಾಜರಾಗಿದ್ದಾರೆ. ನಟ ದರ್ಶನ್ ಗೈರಾಗಿದ್ದಾರೆ.

Abishek Ambareesh And aviva reveal name of their son

ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಎನ್ನುವುದು ಅಂಬರೀಶ್ ಅವರ ಮೂಲ ಹೆಸರು. ಬಳಿಕ ಅಂಬರೀಶ್ ಎಂದು ಬದಲಿಸಿಕೊಂಡು ಚಿತ್ರರಂಗಕ್ಕೆ ಬಂದಿದ್ದರು. ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಸುಮಲತಾ ಮೊಮ್ಮಗನ ನಾಮಕರಣ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ಇನ್ನು ರಾಣಾ ಎಂದು ರಾಜ, ಯೋಧ ಎನ್ನುವ ಅರ್ಥವಿದೆ.

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದಪ್ಪ ಅವರು 2023ರ ಜೂನ್ 5 ರಂದು ಹಸೆಮಣೆ ಏರಿದ್ದರು. ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆದಿತ್ತು. ಬಳಿಕ ಆರತಕ್ಷತೆ ಕಾರ್ಯಕ್ರಮ ಕಳೆಗಟ್ಟಿತ್ತು. ಬಳಿಕ ಮಂಡ್ಯದಲ್ಲಿ ಸಾವಿರಾರು ಜನರಿಗೆ ಬೀಗರ ಊಟದ ವ್ಯವಸ್ಥೆ ಮಾಡಲಾಗಿತ್ತು. ಆ ನಂತರ ಖಾಸಗಿ ಹೋಟೆಲ್‌ನಲ್ಲಿ ಸಂಗೀತ್ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ದರ್ಶನ್, ಯಶ್ ಇಬ್ಬರೂ ಭಾಗಿ ಆಗಿ ಹೆಜ್ಜೆ ಹಾಕಿದ್ದರು.

ಅಂಬಿ ಮನೆಯ ಯಾವುದೇ ಕಾರ್ಯಕ್ರಮಕ್ಕೆ ದರ್ಶನ್ ಮುಂದೆ ಇರುತ್ತಾರೆ. ಅಭಿ ಪುತ್ರನ ನಾಮಕರಣಕ್ಕೆ ಕೂಡ ದರ್ಶನ್ ಬರ್ತಾರೆ ಎನ್ನಲಾಗಿದೆ. ಆದರೆ ಈವರೆಗೆ ಅವರು ಭಾಗಿ ಆಗಿರುವ ಬಗ್ಗೆ ಮಾಹಿತಿ ಇಲ್ಲ. ಇತ್ತೀಚೆಗೆ ದರ್ಶನ್ ಹಾಗೂ ಸುಮಲತಾ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಆ ರೀತಿ ಏನು ಇಲ್ಲ ಎಂದು ಸ್ವತಃ ಸುಮಲತಾ ಸ್ಪಷ್ಟನೆ ನೀಡಿದ್ದರು.

ಸಂಗೀತ ನಿರ್ದೇಶಕ ಗುರುಕಿರಣ್, ಕಿಚ್ಚ ಸುದೀಪ್- ಪ್ರಿಯಾ ದಂಪತಿ, ರಾಕ್‌ಲೈನ್ ವೆಂಕಟೇಶ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವರು ಅಭಿಷೇಕ್ ಮಗನ ನಾಮಕರಣ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಅಂಬಿ ಮೊಮ್ಮಗನಿಗೆ ಆಶೀರ್ವದಿಸಿದ್ದಾರೆ. ಅಭಿ ಪುತ್ರನಿಗೆ ಸುದೀಪ್ ವಿಶೇಷ ಉಡುಗೊರೆ ತಂದು ಕೊಟ್ಟಿದ್ದಾರೆ.

More from Filmibeat

English summary
Actor Abishek Ambareesh celebrates son's naming ceremony in traditional way
Read more about: ambareesh sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X