ಚೊಚ್ಚಲ ದೃಶ್ಯಕ್ಕಾಗಿ ಅಭಿಷೇಕ್ ಅಂಬರೀಶ್ 52 ಟೇಕ್ ತೆಗೆದುಕೊಂಡಿದ್ದರಂತೆ.!
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ತೆರೆಕಂಡು ಉತ್ತಮ ಆರಂಭ ಪಡೆದುಕೊಂಡಿತ್ತು. ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಲವರ್ ಬಾಯ್ ಕ್ಯಾರೆಕ್ಟರ್ ಮಾಡಿದ್ದರು.
ಮೊದಲ ಸಿನಿಮಾದಲ್ಲಿ ಅಭಿಷೇಕ್ ಗಮನ ಸೆಳೆದರು. ಪ್ರೇಕ್ಷಕರಿಂದ ಒಳ್ಳೆಯ ಪ್ರಯತ್ನ ಎಂದು ಮೆಚ್ಚುಗೆ ಗಳಿಸಿಕೊಂಡರು. ಮಾಸ್ ಮತ್ತು ಕ್ಲಾಸ್ ಗೆ ತಕ್ಕ ಹೀರೋ ಆಗಬಹುದು ಎಂಬುದನ್ನ ಅಮರ್ ಸಿನಿಮಾದಲ್ಲಿ ಸಾಬೀತು ಮಾಡಿದ್ದರು.
ಹೇಳಿ ಕೇಳಿ ಅಭಿಷೇಕ್ ಕನ್ನಡ ಚಿತ್ರರಂಗದ ದಿಗ್ಗಜ ನಟ ಅಂಬರೀಶ್ ಅವರ ಮಗ. ಹಾಗಾಗಿ, ಅಭಿಷೇಕ್ ಅವರ ಅಭಿನಯ ಹೇಗಿರುತ್ತೆ, ಅವರಪ್ಪನ ರೀತಿಯಲ್ಲೇ ಮಾಡ್ತಾರಾ, ಇಂಡಸ್ಟ್ರಿಯಲ್ಲಿ ನೆಲೆ ನಿಲ್ತಾರಾ ಎಂಬ ಕುತೂಹಲ ಇತ್ತು. ಅದಕ್ಕೆಲ್ಲಾ ಮೊದಲ ಸಿನಿಮಾ ಉತ್ತರ ಕೊಟ್ಟಿದೆ. ಈಗ ವಿಷ್ಯ ಏನಪ್ಪಾ ಅಂದ್ರೆ ಅಭಿಷೇಕ್ ಮೊದಲ ದೃಶ್ಯಕ್ಕಾಗಿ ಎಷ್ಟು ಟೇಕ್ ತೆಗೆದುಕೊಂಡಿದ್ದರು ಎನ್ನುವುದು. ಮುಂದೆ ಓದಿ....

52 ಟೇಕ್ ತೆಗೆದುಕೊಂಡಿದ್ದ ಅಭಿ
ಅಮರ್ ಸಿನಿಮಾದ ಮೊದಲ ದೃಶ್ಯಕ್ಕಾಗಿ ಅಭಿಷೇಕ್ ಅಂಬರೀಶ್ ಬರೋಬ್ಬರಿ 52 ಟೇಕ್ ತೆಗೆದುಕೊಂಡಿದ್ದರಂತೆ. ನಿರೂಪಕಿ ಅನುಶ್ರೀ ಅವರ ಸಂದರ್ಶನದಲ್ಲಿ ಈ ವಿಷ್ಯವನ್ನ ಅಭಿಷೇಕ್ ಹಂಚಿಕೊಂಡಿದ್ದಾರೆ. ಕರೆಕ್ಟ್ ಆಗಿ 52 ಅನ್ನುವುದಕ್ಕಿಂತ ಅಂದಾಜು 52 ಟೇಕ್ ಆಗಿದೆಯಂತೆ.

ಯಾವುದು ಆ ದೃಶ್ಯ?
ಅಭಿಷೇಕ್ ಮೊದಲ ದೃಶ್ಯಕ್ಕೆ ಸುಮಾರು 52 ಟೇಕ್ ಪಡೆದುಕೊಂಡಿದ್ದರಂತೆ. ಆ ದೃಶ್ಯ ಯಾವುದು ಎಂದು ನೋಡಿದ್ರೆ, ಅಪ್ಪನ ಜೊತೆ ಮಗ ಮಾತನಾಡುವ ದೃಶ್ಯವಂತೆ. ಈ ದೃಶ್ಯದಲ್ಲಿ ಅಪ್ಪನ ಎದುರು ಮಗ ಸ್ವಲ್ಪ ಜೋರಾಗಿ ಮಾತನಾಡುವ ದೃಶ್ಯವಂತೆ. ಹಾಗಾಗಿ, ಈ ಸೀನ್ ಗಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರಂತೆ.

ಅಪ್ಪನ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ
ಅಂದ್ಹಾಗೆ, ಅಮರ್ ಸಿನಿಮಾದಲ್ಲಿ ಅಭಿಷೇಕ್ ಗೆ ಅಪ್ಪನ ಪಾತ್ರ ಮಾಡಿದ್ದು ರಾಜ್ ದೀಪಕ್ ಶೆಟ್ಟಿ. ತಂದೆ ಪಾತ್ರ ಮಾಡುವಷ್ಟು ವಯಸ್ಸು ದೀಪಕ್ ಶೆಟ್ಟಿ ಅವರಿಗೆ ವಯಸ್ಸು ಆಗಿರಲಿಲ್ಲ. 'ಅವರನ್ನ ನಮ್ಮ ತಂದೆ ಎಂದು ನಾನು ಫೀಲ್ ಮಾಡಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡೆ. ತುಂಬಾ ಫಿಟ್ ಆಗಿದ್ದರು. ಯಂಗ್ ಆಗಿದ್ದರು. ಇವರು ನನಗೆ ತಂದೆನಾ ಎಂದು ಸ್ವಲ್ಪ ಸರ್ಪ್ರೈಸ್ ಆಗಿತ್ತು'' ಎಂದು ಅಭಿಷೇಕ್ ಹೇಳಿಕೊಂಡರು.

ಎರಡನೇ ಸಿನಿಮಾ ಯಾವುದು?
ಈಗಷ್ಟೇ ಮೊದಲ ಸಿನಿಮಾ ಮುಗಿಸಿದ್ದ ಅಭಿಷೇಕ್ ಬಳಿಕ ಮಂಡ್ಯ ರಾಜಕೀಯದಲ್ಲಿ ಅಮ್ಮನ ಜೊತೆ ಪ್ರಚಾರಕ್ಕೆ ನಿಂತರು. ಇಷ್ಟು ದಿನ ರಾಜಕೀಯವಾಗಿ ಸ್ವಲ್ಪ ಬ್ಯುಸಿ ಇದ್ದ ಅಭಿಷೇಕ್ ಎರಡನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಅಭಿಷೇಕ್ ಮುಂದಿನ ಚಿತ್ರಕ್ಕೆ ಮಹೇಶ್ ರಾವ್, ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದ್ರೆ, ಖಚಿತವಾದ ಮಾಹಿತಿ ಹೊರಬಿದ್ದಿಲ್ಲ.


Click it and Unblock the Notifications











