twitter
    For Quick Alerts
    ALLOW NOTIFICATIONS  
    For Daily Alerts

    ಒಬ್ಬ ವ್ಯಕ್ತಿ, ಎರಡು ಸಿನಿಮಾ: ಇತಿಹಾಸ ನೋಡಿದಾಗ ಎಷ್ಟೊಂದು ಉದಾಹರಣೆ

    |

    'ಮದಕರಿ ನಾಯಕ'ನ ಕುರಿತು ದರ್ಶನ್ ಮತ್ತು ಸುದೀಪ್ ಇಬ್ಬರು ಸಿನಿಮಾ ಮಾಡ್ತಾರೆ ಎಂಬ ಸುದ್ದಿಯನ್ನ ಕೇಳಿದ ಗಾಂಧಿನಗರ, ಇದರಿಂದ ಸ್ಟಾರ್ ವಾರ್, ಕಾಂಪಿಟೇಶನ್, ವಿವಾದ ಎಲ್ಲವೂ ಉದ್ಬವಿಸುತ್ತೆ ಎನ್ನುತ್ತಿದ್ದಾರೆ.

    ಒಬ್ಬ ನಾಯಕನ ಬಗ್ಗೆ ಎರಡೆರಡು ಸಿನಿಮಾ ಮಾಡೋದು ಬೇಡ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಅದು ಕನ್ನಡದ ಟಾಪ್ ನಟರಾದ ದರ್ಶನ್ ಮತ್ತು ಸುದೀಪ್ ಆಗಿರುವುದರಿಂದ ಇದು ಮತ್ತಷ್ಟು ದೊಡ್ಡ ಮಟ್ಟದ ವ್ಯತ್ಯಾಸಕ್ಕೆ ಕಾರಣವಾಗಲಿದೆ ಎಂಬ ಲೆಕ್ಕಾಚಾರ ಮಾಡ್ತಿದ್ದಾರೆ.

    'ಮದಕರಿ ನಾಯಕ' ಯಾರಾಗಬೇಕು, ಜನಾಭಿಮತ ಏನು ಹೇಳುತ್ತಿದೆ.? 'ಮದಕರಿ ನಾಯಕ' ಯಾರಾಗಬೇಕು, ಜನಾಭಿಮತ ಏನು ಹೇಳುತ್ತಿದೆ.?

    ಇದೆಲ್ಲದಕ್ಕೂ ತಲೆಕೆಡಿಸಿಕೊಳ್ಳದೆ ಇಬ್ಬರು ನಟರು 'ಮದಕರಿ ನಾಯಕ'ನ ಕುರಿತು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ ಬಿಡಿ. ಸರಿ, ಒಂದೆ ಕಥೆ ಅಥವಾ ಒಬ್ಬ ನಾಯಕನ ಕುರಿತು ಎರಡು ಸಿನಿಮಾಗಳು ಬಂದೇ ಇಲ್ವಾ.? ಎಂಬ ಕುತೂಹಲ ಕಾಡುತ್ತೆ. ಹೌದು ಅಲ್ವಾ ಅಂತ ಹಿಂದೆ ತಿರುಗಿ ನೋಡಿದ್ರೆ, ಸಾಕಷ್ಟು ಚಿತ್ರಗಳು ಉದಾಹರಣೆ ಸಿಗುತ್ತೆ. ಹಾಗಿದ್ರೆ, ಒಂದೇ ಕಥೆಯ ಬಗ್ಗೆ ಎರಡು ಸಿನಿಮಾಗಳು ಬಂದಿರುವುದು ಯಾವುವು.? ಮುಂದೆ ಓದಿ....

    ಎರಡು ಸಲ 'ಕಾಳಿದಾಸ'

    ಎರಡು ಸಲ 'ಕಾಳಿದಾಸ'

    ಕಾಳಿದಾಸ ಅಂದಾಕ್ಷಣ ಡಾ ರಾಜ್ ಕುಮಾರ್ ಅಭಿನಯಿಸಿದ್ದ 'ಕವಿರತ್ನ ಕಾಳಿದಾಸ' ಸಿನಿಮಾ ನೆನಪಾಗುತ್ತೆ. ಆದ್ರೆ, ಅದೇ ಕಾಳಿದಾಸನ ಕುರಿತು ಅದಕ್ಕೂ ಮೊದಲೇ ಇನ್ನೊಂದು ಸಿನಿಮಾ ಬಂದಿತ್ತು ಎನ್ನುವುದು ಅದೇಷ್ಟೋ ಜನಕ್ಕೆ ಗೊತ್ತಿಲ್ಲ. 1955ರಲ್ಲಿ ಹೊನ್ನಪ್ಪ ಭಾಗವತರ್ ನಿರ್ಮಾಣ ಮಾಡಿ, ನಟಿಸಿದ್ದ ಸಿನಿಮಾ 'ಮಹಾಕವಿ ಕಾಳಿದಾಸ'. ಅಲ್ಲಿಗೆ ಕಾಳಿದಾಸನ ಬಗ್ಗೆ ಎರಡು ಸಿನಿಮಾ ಬಂದಿತ್ತು ಅಲ್ವೇ.?

    'ಮದಕರಿ ನಾಯಕ'ನ ನಂತರ ಮತ್ತೊಬ್ಬ ವೀರನ ಬಗ್ಗೆ ಸುದೀಪ್ ಸಿನಿಮಾ.! 'ಮದಕರಿ ನಾಯಕ'ನ ನಂತರ ಮತ್ತೊಬ್ಬ ವೀರನ ಬಗ್ಗೆ ಸುದೀಪ್ ಸಿನಿಮಾ.!

    ಎರಡನೇ ಸಲ 'ಬಸವಣ್ಣ'

    ಎರಡನೇ ಸಲ 'ಬಸವಣ್ಣ'

    ಬಸವೇಶ್ವರರ ಕುರಿತೂ ಕನ್ನಡದಲ್ಲಿ ಎರಡು ಸಿನಿಮಾ ಬಂದಿವೆ. 1959ರಲ್ಲಿ ಬಿಡುಗಡೆಯಾಗಿದ್ದ 'ಜಗಜ್ಯೋತಿ ಬಸವೇಶ್ವರ'. ಆ ಚಿತ್ರದಲ್ಲಿ ಬಸವಣ್ಣನಾಗಿದ್ದವರು ಹೊನ್ನಪ್ಪ ಭಾಗವತರ್ ಮತ್ತು ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇನ್ನೊಂದು 1983ರಲ್ಲಿ ಬಂದ 'ಕ್ರಾಂತಿಯೋಗಿ ಬಸವಣ್ಣ'. ಅಲ್ಲಿ ಅಶೋಕ್ ಬಸವಣ್ಣನಾಗಿದ್ದರು.

    'ಮದಕರಿ ನಾಯಕ' ಚಿತ್ರದ ಬಗ್ಗೆ ಸುದೀಪ್ ಹೇಳಿದ್ದನ್ನೇ ದರ್ಶನ್ ಹೇಳಿದ್ರಂತೆ.! 'ಮದಕರಿ ನಾಯಕ' ಚಿತ್ರದ ಬಗ್ಗೆ ಸುದೀಪ್ ಹೇಳಿದ್ದನ್ನೇ ದರ್ಶನ್ ಹೇಳಿದ್ರಂತೆ.!

    ರಾಘವೇಂದ್ರ ಮಹಿಮೆ

    ರಾಘವೇಂದ್ರ ಮಹಿಮೆ

    ಕನ್ನಡದಲ್ಲಿ ರಾಘವೇಂದ್ರ ಸ್ವಾಮಿಗಳ ಕುರಿತು ಎರಡು ಸಿನಿಮಾ ಬಂದಿವೆ. ಡಾ.ರಾಜ್ ಅಭಿನಯಿಸಿದ್ದ 'ಮಂತ್ರಾಲಯ ಮಹಾತ್ಮೆ'. ಮತ್ತೊಮ್ಮೆ ಅದೇ ಕಥೆಯನ್ನಿಟ್ಟುಕೊಂಡು ಶ್ರೀನಾಥ್ ನಾಯಕನಾಗಿ ಕಾಣಿಸಿಕೊಂಡಿದ್ದ 'ರಾಘವೇಂದ್ರ ವೈಭವ' ಚಿತ್ರ ತೆರೆಕಂಡಿತ್ತು.

    ರಾಕ್ ಲೈನ್ ನಿರ್ಮಾಣದ ಅದ್ದೂರಿ ಐತಿಹಾಸಿಕ ಚಿತ್ರದಲ್ಲಿ ದರ್ಶನ್ರಾಕ್ ಲೈನ್ ನಿರ್ಮಾಣದ ಅದ್ದೂರಿ ಐತಿಹಾಸಿಕ ಚಿತ್ರದಲ್ಲಿ ದರ್ಶನ್

    ಏಕಕಾಲದಲ್ಲಿ ಬಂದಿದ್ದ ಭಗತ್ ಸಿಂಗ್

    ಏಕಕಾಲದಲ್ಲಿ ಬಂದಿದ್ದ ಭಗತ್ ಸಿಂಗ್

    ಇನ್ನು ಬಾಲಿವುಡ್ ಇಂಡಸ್ಟ್ರಿಯಲ್ಲಿ ಭಗತ್ ಸಿಂಗ್ ಕುರಿತಂತೆ 'ಶಹೀದ್ ಭಗತ್ ಸಿಂಗ್' ಹಾಗೂ 'ದಿ ಲೆಜೆಂಡ್ ಆಫ್ ಭಗತ್ ಸಿಂಗ್' ಚಿತ್ರಗಳು ಏಕಕಾಲದಲ್ಲಿ ತೆರೆ ಕಂಡಿದ್ದವು.

    100 ಕೋಟಿ ಬಜೆಟ್ ಚಿತ್ರಕ್ಕೆ ಪ್ರಿಯಾ ಸುದೀಪ್ ನಿರ್ಮಾಪಕಿ! 100 ಕೋಟಿ ಬಜೆಟ್ ಚಿತ್ರಕ್ಕೆ ಪ್ರಿಯಾ ಸುದೀಪ್ ನಿರ್ಮಾಪಕಿ!

    English summary
    About one person two movie. this is not first time in kannada film history. There have been many films in the past
    Monday, October 8, 2018, 17:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X