twitter
    For Quick Alerts
    ALLOW NOTIFICATIONS  
    For Daily Alerts

    ಕೇಂದ್ರ ಬಜೆಟ್ 2020: ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ನಿರೀಕ್ಷೆ ಏನು?

    |

    2020ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಮಂಡನೆಯಾಗುತ್ತಿದೆ. ಈ ಬಜೆಟ್ ಮೇಲೆ ದೇಶದ ಪ್ರಜೆಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೋದಿ ಸರ್ಕಾರದ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಏನು ಕೊಡುಗೆ ಸಿಗಬಹುದು ಎಂಬುದು ಕುತೂಹಲ ಮೂಡಿಸಿದೆ.

    ಸಹಜವಾಗಿ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ನಲ್ಲಿ ಪ್ರತ್ಯೇಕವಾಗಿ ಚಿತ್ರರಂಗಕ್ಕೆ ಹೊಸ ಯೋಜನೆಗಳು ಘೋಷಣೆಯಾಗುವುದು ಬಹಳ ಕಡಿಮೆ. ಆದರೂ ಸಿನಿಮಾರಂಗ ಬಜೆಟ್ ಮೇಲೆ ಒಂದು ಕಣ್ಣಿಟ್ಟಿರುತ್ತೆ.

    ಫೆಬ್ರವರಿ 01ರಂದು 2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ

    ಕೇಂದ್ರ ಸರ್ಕಾರದ ಬಜೆಟ್ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ''ದೇಶದ ಅಭಿವೃದ್ದಿಯಲ್ಲಿ ಎಲ್ಲ ಕ್ಷೇತ್ರಗಳು ಪ್ರಮುಖವಾಗಿರುತ್ತೆ. ಅದರಲ್ಲಿ ಚಿತ್ರರಂಗದ ಪಾಲು ಇದೆ. ಹಾಗಾಗಿ, ಅದನ್ನ ಗಮನದಲ್ಲಿಟ್ಟುಕೊಂಡು ಚಿತ್ರರಂಗಕ್ಕು ಅನುಕೂಲವಾಗುವ ರೀತಿಯಲ್ಲಿ ಏನಾದರೂ ಹೊಸ ಯೋಜನೆ ಘೋಷಿಸಿದರೆ ಸಂತೋಷ. ಅದನ್ನ ಹೊರತು ಪಡಿಸಿ ಪ್ರತ್ಯೇಕವಾಗಿ ಕನ್ನಡ ಚಿತ್ರರಂಗಕ್ಕೆ ಏನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ರಾಜ್ಯ ಬಜೆಟ್ ಸಂದರ್ಭದಲ್ಲಿ ನಾವು ಹೆಚ್ಚಿನ ನಿರೀಕ್ಷೆ ಇಡಬಹುದು'' ಎಂದು ಅಕಾಡೆಮಿ ಅಧ್ಯಕ್ಷ ತಿಳಿಸಿದ್ದಾರೆ.

    Academy President Reacted On Central Budget

    Interview: ಧಾರವಾಡದ ಸಾಮಾನ್ಯ ಹುಡುಗ ಈಗ ಅಕಾಡೆಮಿಗೆ ಅಧ್ಯಕ್ಷInterview: ಧಾರವಾಡದ ಸಾಮಾನ್ಯ ಹುಡುಗ ಈಗ ಅಕಾಡೆಮಿಗೆ ಅಧ್ಯಕ್ಷ

    ಕಳೆದ ವರ್ಷ ಮಂಡಿಸಿದ್ದ ಮಧ್ಯಂತರ ಕೇಂದ್ರ ಬಜೆಟ್ ನಲ್ಲಿ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪರವಾನಗಿ ಯೋಜನೆ ಘೋಷಣೆಯಾಗಿತ್ತು. ಮೊದಲು ಚಿತ್ರತಂಡವೊಂದು ಶೂಟಿಂಗ್ ಮಾಡುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಿಂದ ಪ್ರತ್ಯೇಕ ಪರವಾನಗಿ ಪಡೆಯಬೇಕಿತ್ತು. ಆದರೆ ಈ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿತ್ತು. ದೇಶದಲ್ಲಿ ಎಲ್ಲೇ ಚಿತ್ರೀಕರಣ ಮಾಡಬೇಕೆಂದರೆ ಒಂದೇ ಕಡೆ ಪರವಾನಗಿ ಪಡೆಯುವ ಸೌಲಭ್ಯ ಮಾಡಿಕೊಟ್ಟಿತ್ತು.

    ಇಂತಹ ಅವಕಾಶ ಮೊದಲು ವಿದೇಶಿ ಸಿನಿಮಾ ಮೇಕರ್ ಗಳಿಗೆ ಮಾತ್ರವಿತ್ತು. ಕೇಂದ್ರ ಬಜೆಟ್ ನಲ್ಲಿ ಘೋಷಣೆಯಾದ ಬಳಿಕ, ಭಾರತೀಯ ಸಿನಿಮಾ ಮೇಕರ್ಸ್ ಗೂ ಈ ನಿಯಮ ಅನ್ವಯವಾಗಿತ್ತು.

    English summary
    Karnataka Chalanachitra academy president Sunil puranik has react about central government budget 2020.
    Thursday, January 30, 2020, 16:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X