twitter
    For Quick Alerts
    ALLOW NOTIFICATIONS  
    For Daily Alerts

    ಮೃತ ವಿವೇಕ್‌ಗೆ ನ್ಯಾಯ ಸಿಗುವವರೆಗೆ ಚಿತ್ರೀಕರಣಕ್ಕೆ ಹೋಗಲ್ಲ: ಅಜಯ್ ರಾವ್

    |

    ಕನ್ನಡ ಚಿತ್ರರಂಗದಲ್ಲಿ ಅಹಿತಕರ ಘಟನೆಯೊಂದು ಇಂದು ನಡೆದಿದೆ. ತಾವು ಹೊಡೆತ ತಿಂದು ನಾಯಕ ನಟರು ತೆರೆಯ ಮೇಲೆ ವಿಜೃಂಭಿಸುವಂತೆ ಮಾಡುವ ಸಾಹಸ ಕಲಾವಿದರು ಅದರಲ್ಲಿಯೂ ಕೇವಲ ಹೊಡೆತ ತಿನ್ನಲಷ್ಟೆ ಇರುವ ಪಾಪದ ಸಹ ಸಾಹಸ ಕಲಾವಿದನೊಬ್ಬ ಇಂದು ಚಿತ್ರೀಕರಣದ ಸಂದರ್ಭದಲ್ಲಿಯೇ ಅಸುನೀಗಿದ್ದಾನೆ.

    Recommended Video

    ಚಿತ್ರತಂಡದ ಬೇಜವಾಬ್ದಾರಿಯನ್ನು ಒಪ್ಪಿಕೊಂಡ ಅಜಯ್ ರಾವ್

    ಅಜಯ್ ರಾವ್, ರಚಿತಾ ರಾಮ್ ನಟಿಸಿರುವ 'ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ದುರ್ಘಟನೆಯಲ್ಲಿ ಸಹ ಸಾಹಸ ಕಲಾವಿದ ವಿವೇಕ್ ಮೃತಪಟ್ಟಿದ್ದು, ಚಿತ್ರತಂಡಕ್ಕೆ ಸೇರಿದ ಮತ್ತೊಬ್ಬ ವ್ಯಕ್ತಿ ಜೀವನ್ಮರಣ ಹೊರಾಟದ ನಡುವೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾದ ನಾಯಕ ನಟ ಅಜಯ್ ರಾವ್ ಸಹ ಈ ದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ದುರ್ಘಟನೆ ನಡೆದ ದೃಶ್ಯದಲ್ಲಿ ಅಜಯ್ ರಾವ್ ಇರಲಿಲ್ಲವಾದರೂ ಘಟನೆ ನಡೆದ ಸ್ಥಳದಿಂದ ಕೆಲವೇ ನೂರು ಅಡಿಗಳ ಅಂತರದಲ್ಲಿ ಇದ್ದರು. ತಮ್ಮದೇ ಸಿನಿಮಾದ ಸೆಟ್‌ನಲ್ಲಿ ನಡೆದ ದುರ್ಘಟನೆ ಬಗ್ಗೆ ನಟ ಅಜಯ್ ರಾವ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಇದು ಬೇಜವಾಬ್ದಾರಿಯಿಂದಲೇ ಆಗಿರುವ ಘಟನೆ ಎಂದು ಒತ್ತಿ ಹೇಳಿದ್ದಾರೆ.

    ''ಮೆಟಲ್ ರೋಪ್ ಬಳಿಸಿದ್ದಕ್ಕೆ ಅವಘಡ ಸಂಭವಿಸಿದೆ''

    ''ಮೆಟಲ್ ರೋಪ್ ಬಳಿಸಿದ್ದಕ್ಕೆ ಅವಘಡ ಸಂಭವಿಸಿದೆ''

    ''ದೃಶ್ಯದ ಚಿತ್ರೀಕರಣದ ವೇಳೆ ನಾನು ಅಲ್ಲಿರಲಿಲ್ಲ. ಮೆಟಲ್ ರೋಪ್ ಬಳಸಿ ಸಾಹಸ ದೃಶ್ಯ ಕೈಗೊಂಡ ಕಾರಣ ಈ ಘಟನೆ ನಡೆದಿದೆ. ಚಿತ್ರೀಕರಣ ಸಮಯದಲ್ಲಿ ನಾನು ಅಲ್ಲಿದ್ದಿದ್ದರೆ ಖಂಡಿತ ಪ್ರಶ್ನೆ ಮಾಡುತ್ತಿದ್ದೆ. ಈ ಹಿಂದೆ ಸಹ ನಾನು ಮೆಟಲ್ ರೋಪ್ ಬಳಸಿದ ಬಗ್ಗೆ ಪ್ರಶ್ನೆ ಮಾಡಿದ್ದೆ. ವಿವೇಕ್ ರೋಪ್ ಎಳೆಯುತ್ತಿದ್ದ ಅವನಿಗೆ ತೀವ್ರವಾಗಿ ಶಾಕ್ ತಗುಲಿದೆ. ರೋಪ್ ಜಾಕೆಟ್ ಹಾಕಿದ್ದ ರಂಜಿತ್ ಎಂಬ ಕಲಾವಿದನಿಗೂ ಶಾಕ್ ತಗುಲಿದೆ'' ಎಂದಿದ್ದಾರೆ ಅಜಯ್ ರಾವ್.

    200 ಮೀಟರ್ ದೂರದಲ್ಲಿ ಕೂತಿದ್ದೆ: ಅಜಯ್ ರಾವ್

    200 ಮೀಟರ್ ದೂರದಲ್ಲಿ ಕೂತಿದ್ದೆ: ಅಜಯ್ ರಾವ್

    ''ದೃಶ್ಯದ ಚಿತ್ರೀಕರಣದಲ್ಲಿ ನಾನು ಇರಲಿಲ್ಲ. ಆದರೆ ಘಟನೆ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಇದ್ದೆ. ಜೋರಾಗಿ ಸದ್ದು ಬಂತು ಕೂಡಲೇ ಓಡಿ ಬಂದೆವು ನೋಡಿದರೆ ಅವಘಡ ಸಂಭವಿಸಿ ಆಗಿತ್ತು. ನಾನು ಸದಾ ಸುರಕ್ಷತೆಗೆ ಮಹತ್ವ ನೀಡುತ್ತೇನೆ. ಇತ್ತೀಚೆಗಷ್ಟೆ ಮೆಟಲ್ ರೋಪ್‌ ಬಗ್ಗೆ ಪ್ರಶ್ನೆ ಮಾಡಿದ್ದೆ. ಆದರೆ ಹಾಗೆ ಪ್ರಶ್ನೆ ಮಾಡಿದ್ದರಿಂದ ನಾನು ಕೆಟ್ಟವನಾಗಿದ್ದೆ. ಹೀಗೆ ಪ್ರಶ್ನೆಗಳನ್ನು ಮಾಡಿದರೆ ಕೆಲಸದಲ್ಲಿ ಮೂಗು ತೂರಿಸುತ್ತಾರೆ ಎಂಬ ನಿಂದನೆ ಅನುಭವಿಸಬೇಕಾಗುತ್ತದೆ'' ಎಂದು ಒಳಗಿನ ವಿಷಯ ಬಿಚ್ಚಿಟ್ಟಿದ್ದಾರೆ ನಟ ಅಜಯ್ ರಾವ್.

    ನ್ಯಾಯ ಸಿಗುವವರೆಗೆ ಚಿತ್ರೀಕರಣಕ್ಕೆ ಹೋಗಲ್ಲ: ಅಜಯ್ ರಾವ್

    ನ್ಯಾಯ ಸಿಗುವವರೆಗೆ ಚಿತ್ರೀಕರಣಕ್ಕೆ ಹೋಗಲ್ಲ: ಅಜಯ್ ರಾವ್

    ''ಸಾಹಸ ನಿರ್ದೇಶಕ ವಿನೋದ್‌ ಜೊತೆ ಮಾತನಾಡುವ ಅವಕಾಶವೇ ನನಗೆ ಸಿಕ್ಕಿಲ್ಲ. ನಾನು ಬಹಳ ಮುಂಜಾಗೃತೆ ಇರುವ ವ್ಯಕ್ತಿ. ಸುರಕ್ಷತೆ ಸಂಬಂಧ ಸಾಕಷ್ಟು ಪ್ರಶ್ನೆಗಳನ್ನು ಚಿತ್ರೀಕರಣ ಸೆಟ್‌ನಲ್ಲಿ ಕೇಳುತ್ತಲೇ ಇದ್ದೆ. ಆದರೆ ನಾನು ನಟಿಸುತ್ತಿರುವ ಸಿನಿಮಾದಲ್ಲಿಯೇ ಅವಘಡ ನಡೆದಿದೆ. ವಿವೇಕ್‌ಗೆ ನ್ಯಾಯ ಸಿಗುವ ವರೆಗೆ ನಾನು ಚಿತ್ರೀಕರಣಕ್ಕೆ ಹೋಗುವುದಿಲ್ಲ'' ಎಂದು ಶಪತ ಮಾಡಿದ್ದಾರೆ ನಟ ಅಜಯ್ ರಾವ್. ಸಿನಿಮಾದ ನಿರ್ದೇಶಕ ಶಂಕರ್ ರಾಜ್, ಸಾಹಸ ನಿರ್ದೇಶಕ ವಿನೋದ್, ನಿರ್ಮಾಪಕ ಗುರು ದೇಶ್‌ಪಾಂಡೆ ಮತ್ತು ಕ್ರೇನ್ ಡ್ರೈವರ್ ಮುನಿಯಪ್ಪ ಅವರುಗಳನ್ನು ಬಿಡದಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪೊಲೀಸರು ಹೇಳಿದ್ದು ಹೀಗೆ?

    ಪೊಲೀಸರು ಹೇಳಿದ್ದು ಹೀಗೆ?

    ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮನಗರ ಪೊಲೀಸ್‌ ಎಸ್‌ಪಿ ''ಚಿತ್ರೀಕರಣ ಮಾಡುತ್ತಿರುವ ಬಗ್ಗೆ ಚಿತ್ರತಂಡವು ಬಿಡದಿ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಹಾಗೂ ಪೊಲೀಸರಿಂದ ಅನುಮತಿಯನ್ನು ಸಹ ಪಡೆದುಕೊಂಡಿರಲಿಲ್ಲ. ಇದೀಗ ಬಿಡದಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ನಾಲ್ಕು ಮಂದಿಯನ್ನು ಬಂದಿಸಿದ್ದಾರೆ ಎಂದಿದ್ದಾರೆ. ಜೊತೆಗೆ ಘಟನೆ ಸಂಬಂಧ ವಶಕ್ಕೆ ಪಡೆದಿರುವವರ ಮೇಳೆ ಐಪಿಸಿ ಸೆಕ್ಷನ್ 304, 308 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    English summary
    Accident happen in Love You Rachu movie set one assistant fighter died. Movie's hero Ajay Rao said its negligence.
    Monday, August 9, 2021, 18:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X