»   » ಸ್ಯಾಂಡಲ್‌ವುಡ್‌ನಲ್ಲೀಗ ಆ್ಯಕ್ಸಿಡೆಂಟ್‌ಗಳ ಸೀಸನ್‌!

ಸ್ಯಾಂಡಲ್‌ವುಡ್‌ನಲ್ಲೀಗ ಆ್ಯಕ್ಸಿಡೆಂಟ್‌ಗಳ ಸೀಸನ್‌!

Posted By:
Subscribe to Filmibeat Kannada

ಉಪೇಂದ್ರ ಬಿದ್ದು ಕಾಲು ಮುರಿದುಕೊಂಡರು. ಅದರ ಬೆನ್ನಿಗೇ ಸುದೀಪ್‌ ಮೊಣಕಾಲಿನ ಲಿಗ್ಮೆಂಟ್‌ ಕಟ್ಟಾಗಿತ್ತು. ಅವರು ಸುಧಾರಿಸಿಕೊಳ್ಳುತ್ತಿದ್ದಂತೆ ಬಿ.ಸಿ. ಪಾಟೀಲರ ಕಾಲು ಕೈ ಕೊಟ್ಟಿತು. ಅನು ಪ್ರಭಾಕರ್‌, ಜಯಂತಿ ಪುತ್ರನಿಗೆ ಮನಸೋತದ್ದೂ ಆ್ಯಕ್ಸಿಡೆಂಟೇ. ಅದರ ಮುಂದಿನ ಅಧ್ಯಾಯವೇ ಜಯಂತಿ ಪ್ರಯಾಣ ಮಾಡ್ತಿದ್ದ ಕಾರು ಹಳ್ಳಕ್ಕೆ ಬಿದ್ದಿದ್ದು.

ಇವಿಷ್ಟು ಸಣ್ಣಪುಟ್ಟ ಸಂಗತಿಗಳಾದರೆ, ಪ್ರೇಮಕತೆಗಳು ಸೀರಿಯಲ್ಲಿಗೆ ಕೆಲಸ ಮಾಡುತ್ತಿದ್ದ ನೀರ್ನಳ್ಳಿ ರಾಜು ಎಂಬಾತ ಮಲೇರಿಯಾ ಬಂದು ಆಸ್ಪತ್ರೆ ಸೇರಿದ್ದಾನೆ. ಕಳೆದ ಇಪ್ಪತ್ತು ದಿನಗಳಿಂದ ಕೋಮಾದಲ್ಲಿದ್ದಾನೆ.

ಈ ನಡುವೆ, ಟೆಲಿಸೀರಿಯಲ್‌ ಮುಗಿಸಿಕೊಂಡು ಮೈಸೂರಿನಿಂದ ಬೆಂಗಳೂರಿಗೆ ಮರಳುತ್ತಿದ್ದ ನಂದಿತಾ ಅವರ ಕಾರು ಅಪಘಾತಕ್ಕೀಡಾಗಿ ನಂದಿತಾ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಪರಮೇಶಿ ಎಂಬಾತನ ಸ್ಥಿತಿ ಗಂಭೀರವಾಗಿದೆ. ಕಲಾವಿದರೆಲ್ಲ ಹೀಗೆ ಅಪಘಾತಕ್ಕೀಡಾಗಿರುವಾಗ ನಾವೇನು ಕಮ್ಮಿ ಅಂದುಕೊಂಡ ಪತ್ರಕರ್ತರ ವ್ಯಾನೂ ಬಳ್ಳಾರಿಯಿಂದ ಬರುವ ಹಾದಿಯಲ್ಲಿ ಅಪಘಾತಕ್ಕೀಡಾಗಿದೆ.

ಪ್ರಾಣ ಮತ್ತು ಮಾನ ಹಾನಿಯಾದ ಬಗ್ಗೆ ವರದಿಯಾಗಿಲ್ಲ!

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada