twitter
    For Quick Alerts
    ALLOW NOTIFICATIONS  
    For Daily Alerts

    ಕೊನೆಗೂ 'ಹೆಬ್ಬುಲಿ' ಒಟ್ಟು ಕಲೆಕ್ಷನ್ ಬಹಿರಂಗ: ಈ ಸಂಸ್ಕೃತಿ ಬಗ್ಗೆ ಸುದೀಪ್ ಬೇಸರ!

    By Bharath Kumar
    |

    ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಆರ್ಭಟಕ್ಕೆ ಬಾಕ್ಸ್ ಆಫೀಸ್ ಉಡೀಸ್....ಹಳೆ ದಾಖಲೆಗಳೆಲ್ಲ ಪೀಸ್ ಪೀಸ್ಎಂ...ಬ ಶೀರ್ಷಿಕೆಗಳನ್ನ ನೋಡಿದವರೆಲ್ಲ 'ಹೆಬ್ಬುಲಿ' ಗಳಿಕೆಯ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ.

    'ಹೆಬ್ಬುಲಿ' ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿತ್ತು? ಮೊದಲ ವಾರಾಂತ್ಯಕ್ಕೆ ಎಷ್ಟು ಹಣ ಬಂದಿತ್ತು? ಒಟ್ಟು ಎಷ್ಟು ಗಳಿಸಬಹುದು ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿತ್ತು. ಇನ್ನು ಈ ಪ್ರಶ್ನೆಗಳು ಇಡೀ ಗಾಂಧಿನಗರದಲ್ಲಿ ಬಿಸಿಬಿಸಿ ಚರ್ಚೆಯಾಗಿದೆ.[ಕಿಚ್ಚನ 'ಹೆಬ್ಬುಲಿ' ಘರ್ಜನೆಗೆ ಬಾಕ್ಸ್ ಆಫೀಸ್ ಛಿದ್ರ ಛಿದ್ರ.!]

    ಆದ್ರೆ, ಇದಕ್ಕೆಲ್ಲಾ 'ಹೆಬ್ಬುಲಿ' ಚಿತ್ರತಂಡ ಬ್ರೇಕ್ ಹಾಕಿದೆ. ಇತ್ತೀಚೆಗಷ್ಟೇ 'ಹೆಬ್ಬುಲಿ' ಚಿತ್ರದ ಸಕ್ಸಸ್ ಪ್ರೆಸ್ ಮೀಟ್ ಅಯೋಜಿಸಿದ್ದ ಚಿತ್ರತಂಡ, ಲೆಕ್ಕಾಚಾರದ ಕುತೂಹಲಕ್ಕೆ ತೆರೆ ಎಳೆದಿದೆ. ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್ ಕಲೆಕ್ಷನ್ ಸಂಸ್ಕ್ರತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

    5 ದಿನಕ್ಕೆ 30 ಕೋಟಿ

    5 ದಿನಕ್ಕೆ 30 ಕೋಟಿ

    'ಹೆಬ್ಬುಲಿ' ಚಿತ್ರವನ್ನ ಮೈಸೂರು ಪ್ರದೇಶಗಳಲ್ಲಿ ವಿತರಿಸಿರುವ ಜಾಕ್ ಮಂಜು ಪ್ರಕಾರ, ಮೊದಲ ದಿನದಿಂದ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿರುವ 'ಹೆಬ್ಬುಲಿ' 5 ದಿನಗಳಲ್ಲಿ ಸುಮಾರು 30 ಕೋಟಿ ಗಳಿಸಿದೆಯಂತೆ.[ಕನ್ನಡದಲ್ಲಿ ಮೊದಲು 100 ಕೋಟಿ ಗಳಿಸುವ ಸಿನಿಮಾ ಯಾವುದು?]

    'ಹೆಬ್ಬುಲಿ' ವಿತರಕರು ಹೇಳುವ ಹಾಗೆ.....

    'ಹೆಬ್ಬುಲಿ' ವಿತರಕರು ಹೇಳುವ ಹಾಗೆ.....

    ''ರಾಜ್ಯದಲ್ಲಿ ವಲಯವಾರು ಗಳಿಕೆಯ ಲೆಕ್ಕಾಚಾರ ಇನ್ನು ಸಿಕ್ಕಿಲ್ಲ. ಆದ್ರೆ, 5 ದಿನದ ಗಳಿಕೆ ಒಟ್ಟು 28-29 ಕೋಟಿ ಆಗಿದೆ. ವಾರದ ಹೊತ್ತಿಗೆ 30 ಕೋಟಿ ಗಡಿದಾಟಲಿದ್ದು, ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆಯೂ ಹೌದು'' ಎನ್ನುತ್ತಾರೆ ವಿತರಕ ಜ್ಯಾಕ್ ಮಂಜು.['ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು]

    ಹೊರ ರಾಜ್ಯಗಳ ಲೆಕ್ಕ ಸಿಕ್ಕಿಲ್ಲ

    ಹೊರ ರಾಜ್ಯಗಳ ಲೆಕ್ಕ ಸಿಕ್ಕಿಲ್ಲ

    ವಿತರಕ ಮಂಜು ಹೇಳುವ ಪ್ರಕಾರ, ಹೊರ ರಾಜ್ಯದಲ್ಲಿ ಸುಮಾರು 26 ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿತ್ತು. ಇದುವರೆಗೂ ಅದರ ಲೆಕ್ಕಾಚಾರ ಸಿಕ್ಕಿಲ್ಲ. ರಾಜ್ಯಾದ್ಯಂತ 4 ಜನ ವಿತರಣೆ ಮಾಡಿರುವುದ್ರಿಂದ, ವಾರ ಕಳೆಯುವ ಹೊತ್ತಿಗೆ ಅದರ ಮಾಹಿತಿಯೂ ಪೂರ್ಣವಾಗಿ ಸಿಗಲಿದೆ.[ಕಿಚ್ಚನ 'ಹೆಬ್ಬುಲಿ' ಮೊದಲ ದಿನ ಗಳಿಸಿದ್ದೆಷ್ಟು?]

    ಮೊದಲ ದಿನದ 10 ಕೋಟಿ

    ಮೊದಲ ದಿನದ 10 ಕೋಟಿ

    ವರದಿಗಳ ಪ್ರಕಾರ 'ಹೆಬ್ಬುಲಿ' ಮೊದಲ ದಿನ 10 ಕೋಟಿ ಗಳಿಸಿದ್ರೆ, ಮೊದಲ ಮೂರು ದಿನಗಳಲ್ಲಿ 20 ಕೋಟಿಯವರೆಗೂ ಕಲೆಕ್ಷನ್ ಮಾಡಿತ್ತಂತೆ.

    ಕಲೆಕ್ಷನ್ ಸಂಸ್ಕೃತಿ ಬೇಡ!

    ಕಲೆಕ್ಷನ್ ಸಂಸ್ಕೃತಿ ಬೇಡ!

    'ಹೆಬ್ಬುಲಿ' ಕಲೆಕ್ಷನ್ ಕನ್ನಡ ಚಿತ್ರರಂಗದಲ್ಲಿ ಬಾರಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಸುದೀಪ್ ಕೂಡ ಪ್ರತಿಕ್ರಿಯಿಸಿದ್ದು, ಕಲೆಕ್ಷನ್ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಲೆಕ್ಷನ್ ಸಂಸ್ಕೃತಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಕಲೆಕ್ಷನ್ ಬಗ್ಗೆ ಸುದೀಪ್ ಹೇಳಿದ್ದೇನು?

    ಕಲೆಕ್ಷನ್ ಬಗ್ಗೆ ಸುದೀಪ್ ಹೇಳಿದ್ದೇನು?

    ''ಕಲೆಕ್ಷನ್ ಯಾಕೆ ಪ್ರಕಟ ಮಾಡ್ತಾರೆ ಅಂದ್ರೆ, ಒಂದು ನಾವು ಬೇರೊಬ್ಬರಿಗಿಂತ ದೊಡ್ಡವರು ಅಂತ ತೋರಿಸಿಕೊಳ್ಳುವುದಕ್ಕೆ. ಎರಡನೇಯದು ಯಾರನ್ನಾದ್ರೂ ನಂಬಿಸೋಕೆ. ಈ ಎರಡು ನಮಗೆ ಬೇಡ. ಈ ವಾರ ನಮ್ಮದು ಜಾಸ್ತಿ ಆಗಿರಬಹುದು. ಮುಂದಿನ ವಾರ ಮತ್ತೊಬ್ಬರದ್ದು ಜಾಸ್ತಿಯಾಗುತ್ತೆ. ಅದು ಬೇಡ. ಸಿನಿಮಾ ಎನ್ನುವುದು ಮನರಂಜನೆ ಮಾತ್ರ'' ಎಂದು ಸುದೀಪ್ ಹೇಳಿದ್ರು.

    English summary
    According to Distributor Jack Manju, Kiccha Sudeep starrer 'Hebbuli' has collected Rs. 30 Crore on First 5 days.
    Thursday, March 2, 2017, 10:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X