ಸಂಜನಾ ಆನಂದ್‌ಗೆ ಇಬ್ಬರು ಮಕ್ಕಳಿದ್ದಾರಾ ? ನನಗೆ ಮದ್ವೆ ಆಗಿದೆ ಎಂದ ರಾಯಲ್ ಚೆಲುವೆ..!

By ಫಿಲ್ಮಿಬೀಟ್ ಡೆಸ್ಕ್

ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ.

ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಎಲ್ಲರಿಗೂ ಸುದ್ದಿಗಳು ಹರಡಿ ಮತ್ತಾವುದೋ ಪ್ರಮಾದವನ್ನು ಸೃಷ್ಟಿಸಿ ಬಿಟ್ಟಿರುತ್ತದೆ.ಇದಕ್ಕೆ ಸಂಜನಾ ಆನಂದ್ ಅವರಿಗಾದ ಅನುಭವ ಮತ್ತೊಂದು ಉದಾಹರಣೆ.

according-to-wikipedia-i-am-married-and-have-two-kids-says-sanjana-anand

ಹೌದು, ಕೆಲ ದಿನಗಳ ಹಿಂದೆ ಸಂಜನಾ ಆನಂದ್ ಅವರ ಕುರಿತು ಸುಳ್ಳು ಸುದ್ದಿಯೊಂದನ್ನು ಹಬ್ಬಿಸಲಾಗಿತ್ತು. ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ ಜೊತೆ ಸಂಜನಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಅದು. ಈ ಸುದ್ದಿಗೆ ತಕ್ಷಣವೇ ಸಂಜನಾ ಆನಂದ್ ಪ್ರತಿಕ್ರಿಯೆಯನ್ನು ನೀಡಿದ್ದರು. ಚಂದನ್ ಶೆಟ್ಟಿ ಜೊತೆ ನಾನು ಮದುವೆಯಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದರು. ಈ ತರಹದ ಸುಳ್ಳು ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದರು.

ಆದರೂ ಕೂಡ ಸಂಜನಾ ಆನಂದ್ ಅವರ ಕುರಿತ ಈ ಸುಳ್ಳು ಸುದ್ದಿ ಇವತ್ತು ಕೂಡ ಚಾಲ್ತಿಯಲ್ಲಿದೆ. ಸಾಲದಕ್ಕೆ ಸಂಜನಾ ಆನಂದ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನುವ ವದಂತಿಯನ್ನು ಕೂಡ ಕೆಲವರು ಹಬ್ಬಿಸಿದ್ದಾರೆ. ಈ ಸುದ್ದಿ ಎಷ್ಟರ ಮಟ್ಟಿಗೆ ಹರಡಿಕೊಂಡಿದೆ ಅಂದರೆ ಮೊನ್ನೆ ಮೊನ್ನೆವರೆಗೆ ಸಂಜನಾ ಆನಂದ್ ಅವರ ವಿಕ್ಕಿಪೀಡಿಯಾದಲ್ಲಿ ಸಂಜನಾ ಆನಂದ್‌ಗೆ ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ ಎನ್ನುವ ವಿಚಾರವನ್ನು ಉಲ್ಲೇಖಿಸಲಾಗಿತ್ತು. ಸಂಜನಾ ಆನಂದ್ ಅವರ ವಯಸ್ಸು 32 ಎಂದು ನಮೂದಿಸಲಾಗಿತ್ತು. 'ಗ್ಯಾರಂಟಿ ನ್ಯೂಸ್‌'ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರದ ಕುರಿತು ಸಂಜನಾ ಆನಂದ್ ತಮಾಷೆ ಮಾಡಿದ್ದಾರೆ. ವಿಕ್ಕಿಪೀಡಿಯಾದಲ್ಲಿ ಬರೋದನ್ನೆಲ್ಲ ನಂಬೋಕೆ ಆಗಲ್ಲ ಎಂದು ಹೇಳಿದ್ದಾರೆ.

ಹೌದು, ಅಸಲಿಗೆ ಸಂಜನಾ ಆನಂದ್ ಮತ್ತು ವಿರಾಟ್ ಅಭಿನಯದ 'ರಾಯಲ್' ಚಿತ್ರ ಇದೇ ತಿಂಗಳಿನಲ್ಲಿ ತೆರೆಗೆ ಬರಲಿದೆ. ಈ ಹಿನ್ನೆಲೆ ಅನೇಕ ಸಂದರ್ಶನಗಳನ್ನು ಸಂಜನಾ ಆನಂದ್ ನೀಡುತ್ತಿದ್ದಾರೆ. ಆ ಪೈಕಿ 'ಗ್ಯಾರಂಟಿ ನ್ಯೂಸ್' ಜೊತೆ ಮಾತನಾಡುವ ಸಮಯದಲ್ಲಿ ವಿರಾಟ್ ಅವರ ಬರ್ತ್‌ಡೇ ದಿನಾಂಕವನ್ನು ಹೇಳುವಂತೆ ಸಂಜನಾ ಆನಂದ್ ಅವರಿಗೆ ಪ್ರಶ್ನೆಯನ್ನು ಕೇಳಲಾಗಿದೆ.

ಆಗ ಸಂಜನಾ ಆನಂದ್ ಎರಡು ದಿನಾಂಕಗಳನ್ನು ಹೇಳಿದ್ದಾರೆ. ಈ ಎರಡು ದಿನಾಂಕ ತಪ್ಪು ಎನ್ನುವ ವಾದ ಮಾಡುವ ವಿರಾಟ್ ನನ್ನ ಹುಟ್ಟುಹಬ್ಬದ ದಿನಾಂಕವನ್ನು ನಾನು ವಿಕ್ಕಿಪೀಡಿಯಾದಲ್ಲಿ ತೋರಿಸುತ್ತೇನೆ ಎಂದು ಹೇಳಿ ತೋರಿಸಲು ಮುಂದಾಗಿದ್ದಾರೆ. ಈ ಸಮಯದಲ್ಲಿ ವಿಕ್ಕಿಪೀಡಿಯಾದಲ್ಲಿರುವುದನ್ನೆಲ್ಲ ನಂಬಲು ಸಾಧ್ಯ ಇಲ್ಲ. ಅಲ್ಲಿ ನನಗೆ ಈಗಾಗಲೇ ಮದುವೆಯನ್ನು ಮಾಡಿಸಿದ್ದಾರೆ ಎಂದು ಸಂಜನಾ ಆನಂದ್ ಹೇಳಿದ್ದಾರೆ. ಎರಡು ಮಕ್ಕಳಿದ್ದಾರೆ ಎಂದು ಬರೆದಿದ್ದಾರೆ. ಸಾಲದಕ್ಕೆ ನನ್ನ ವಯಸ್ಸು 32 ಎಂದು ಉಲ್ಲೇಖಿಸಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಸದ್ಯಕ್ಕೆ ಸಂಜನಾ ಆನಂದ್ ನೀಡಿರುವ ಸಂದರ್ಶನದ ಈ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನುಳಿದಂತೆ ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಸಿದ್ಧವಾಗಿರುವ 'ರಾಯಲ್' ಚಿತ್ರ ಈ ಜನವರಿ 24ರಂದು ತೆರೆಗೆ ಬರಲಿದೆ. ಜಯಣ್ಣ ಮತ್ತು ಭೋಗೇಂದ್ರ ಜೊತೆಯಾಗಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಸಂಜನಾ ಆನಂದ್ ಮತ್ತು ವಿರಾಟ್ ಜೊತೆ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ್ ರಘು, ಪ್ರಮೋದ್ ಶೆಟ್ಟಿ ಸೇರಿ ಅನೇಕರು ಇದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X