For Quick Alerts
  ALLOW NOTIFICATIONS  
  For Daily Alerts

  ವೈದ್ಯರ ಮಾತು ಕೇಳದೆ ಗಾಲ್ಫ್ ಆಡಿದ ಮಣಿ ಆಸ್ಪತ್ರೆಗೆ!

  By ಜೇಮ್ಸ್ ಮಾರ್ಟಿನ್
  |

  ಭಾರತೀಯ ಚಿತ್ರರಂಗದ ಪ್ರಬುದ್ಧ ನಿರ್ದೇಶಕ, ನಟಿ ಸುಹಾಸಿನಿ ಅವರ ಪತಿ ಮಣಿರತ್ನಂ ಅವರಿಗೆ ಮತ್ತೊಮ್ಮೆ ಹೃದಯಾಘಾತವಾಗಿದೆ. ಕಾಶ್ಮೀರಕ್ಕೆ ತೆರಳಿದ್ದ ಮಣಿರತ್ನಂ ಅವರು ವೈದ್ಯರ ಸಲಹೆಯನ್ನು ಮೀರಿದ್ದು ಮತ್ತೊಮ್ಮೆ ಹೃದಯಕ್ಕೆ ಘಾಸಿ ತಂದಿದೆ.

  ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ಮಣಿ ಅವರು ಗಾಲ್ಫ್ ಆಡುತ್ತಿದ್ದ ಮಣಿ ಎದೆ ಹಿಡಿದುಕೊಂಡು ಕುಸಿದಿದ್ದಾರೆ. ತಕ್ಷಣವೇ ಶ್ರೀನಗರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಅಲ್ಲಿಂದ ನವದೆಹಲಿಗೆ ಮಣಿರತ್ನಂ ಅವರನ್ನು ಶಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆ ನೀಡಿದ್ದರಿಂದ ಅವರ ಸ್ಥಿತಿ ಸುಧಾರಿಸಿದೆ.

  ಗಾಲ್ಫ್ ಆಡಲು ಹೋಗಿದ್ದೇಕೆ?: ಓಕೆ ಕಣ್ಮಣಿ ಯಶಸ್ಸಿನ ನಂತರ ಕೆಲ ಕಾಲ ಬ್ರೇಕ್ ತೆಗೆದುಕೊಂಡು ನಂತರ ಧನುಷ್ ಜೊತೆ ಹಿಂದಿ ಚಿತ್ರದ ಮಾತುಕತೆ ನಡೆಸಲು ನಿರ್ಧರಿಸಿದ ಮಣಿರತ್ನಂ ಅವರು ಶ್ರೀನಗರಾ ಟುಲಿಪ್ ಉದ್ಯಾನದಲ್ಲಿ ವಿಹರಿಸಲು ಇಚ್ಛಿಸಿದ್ದರು.

  ಪ್ರಕೃತಿ ಪ್ರಿಯ ಮಣಿರತ್ನಂ ಅವರು ಪ್ರವಾಸ ಕೈಗೊಳ್ಳುವುದು ಮಾಮೂಲಿ. ಅದರೆ, ವೈದ್ಯರ ಸಲಹೆ ಮೀರಿ ಗಾಲ್ಫ್ ಆಡಲು ಹೋಗಿದ್ದು ಅವರಿಗೆ ಮುಳುವಾಗಿದೆ.

  ಶ್ರೀನಗರದ ಷೇರ್-ಇ-ಕಾಶ್ಮೀರ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಲಘು ಹೃದಯಾಘಾತವಾಗಿದ್ದು, ಗಾಬರಿ ಪಡಬೇಕಾದ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ವಿಶ್ರಾಂತಿ ಪಡೆಯುವಂತೆ ಮಣಿರತ್ನಂಗೆ ವೈದ್ಯರು ಸಲಹೆ ಮಾಡಿದ್ದಾರೆ. ಸುಹಾಸಿನಿ ಅವರು ಕಾಣದ ದೇವರಿಗೆ ಕೈ ಮುಗಿದಿದ್ದಾರೆ.

  ಮಣಿರತ್ನಂ ಈಗಾಗಲೇ ಮೂರು ಬಾರಿ ಹೃದಯಾಘಾತವಾಗಿದೆ, 2004ರಿಂದ ಹೃದಯ ಸಂಬಂಧಿ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

  English summary
  Renowned filmmaker Mani Ratnam on Tuesday night admitted in Delhi's Apollo hospital. Reportedly, the director was hospitalised after complaining of chest pain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X