'ಆಚಾರ್ & ಕೋ'ನ ಸಿಂಧು ಶ್ರೀನಿವಾಸಮೂರ್ತಿಗೆ ರಾಜ್, ರಕ್ಷಿತ್, ರಿಷಬ್ ಸ್ಪೂರ್ತಿ
ಹೌದು 2023ರಲ್ಲಿ ರಿಲೀಸ್ ಆದ 'ಆಚಾರ್ ಅಂಡ್ ಕೋ ಸಿನಿಮಾ' ಒಂದಷ್ಟು ಸದ್ದು ಮಾಡಿತ್ತು. ಪಿಆರ್ ಕೆ ಪ್ರೊಡಕ್ಷನ್ ಮೂಲಕ ಹೊರಬಂದ ಈ ಸಿನಿಮಾಗೆ ಸಿಂಧು ಶ್ರೀನಿವಾಸ್ ಮೂರ್ತಿಯವರು ಮೊದಲ ಬಾರಿ ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ಫ್ಯಾಮಿಲಿ ಡ್ರಾಮಾ ಆದ ಈ ಸಿನಿಮಾ ಹಲವು ದಶಕದ ಹಿಂದಿನ ಕಥೆಯನ್ನು ಅಚ್ಚುಕಟ್ಟಾಗಿ ಜನರ ಮುಂದೆ ಪ್ರಸಾರ ಪಡಿಸಿತು.
'ಆಚಾರ್ ಆಂಡ್ ಕೋ' ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿರುವ ನಟಿ ನಿರ್ದೇಶಕಿ ಸಿಂಧು ಶ್ರೀನಿವಾಸ್ ಮೂರ್ತಿ ಅವರು ತಮ್ಮ ಮುಂದಿನ ಪ್ಲಾನ್‌ಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ.

"ನಟನೆ ನಿರ್ದೇಶನ ಎರಡು ನನಗೆ ಬಹಳಷ್ಟು ಕಾನ್ಫಿಡೆನ್ಸ್ ನೀಡುತ್ತದೆ. ನಾವು ಯಾವಾಗಲೂ ಮಲ್ಟಿ ಟ್ಯಾಲೆಂಟೆಡ್ ಆಗಿರಬೇಕು. ಕೇವಲ ಒಂದನ್ನೇ ಮಾಡಿಕೊಂಡು ಅವಕಾಶಗಳಿಗೆ ಕಾಯುವ ಬದಲು ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾ ಇರಬಹುದು. ನನಗೆ ನಟನೆ ಇಷ್ಟ, ನಿರ್ದೇಶನವೂ ತುಂಬಾ ಇಷ್ಟ. ತೊಡಗಿಸಿಕೊಂಡು ಹೆಚ್ಚೆಚ್ಚು ವಿಚಾರಗಳನ್ನು ಕಲಿಯಬೇಕೆಂಬ ಹಂಬಲದಲ್ಲಿ ಇದ್ದೇನೆ" ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದಾರೆ ಸಿಂಧು ಶ್ರೀನಿವಾಸಮೂರ್ತಿ.
"ಕನ್ನಡದ ನಿರ್ದೇಶಕರಾದ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ, ಹಾಗೂ ರಕ್ಷಿತ್ ಶೆಟ್ಟಿ ಅವರು ನನಗೆ ಇನ್ಸ್ಪಿರೇಷನ್. ಹೊಸ ಹೊಸ ಸಿನಿಮಾಗಳಲ್ಲಿ ನಟಿಸಬೇಕು. ಆಗ ಮಾತ್ರ ಬೇರೆ ಬೇರೆ ನಿರ್ದೇಶಕರಿಂದ ಅವರ ಅನುಭವಗಳನ್ನು ನೋಡಿ ಕಲಿಯಲು ಸಾಧ್ಯ. ಅದೇ ರೀತಿ ನನಗೆ ನಿರ್ದೇಶಕರು ಇಷ್ಟ ಏಕೆಂದರೆ ನನ್ನ ಕಲ್ಪನೆಗಳನ್ನು ಚಿತ್ರ ರೂಪಕ್ಕೆ ತರುವುದು ಮನಸ್ಸಿಗೆ ಬಹಳ ಸಮಾಧಾನ ನೀಡುತ್ತದೆ" ಎಂದು ತಮ್ಮ ಅಭಿಪ್ರಾಯ ಮತ್ತು ಆಕಾಂಕ್ಷೆಗಳನ್ನು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ ನಟಿ, ನಿರ್ದೇಶಕಿ ಸಿಂಧು ಶ್ರೀನಿವಾಸ್ ಮೂರ್ತಿ.

ಸಿಂಧು ಶ್ರೀನಿವಾಸ್ ಮೂರ್ತಿ ಅವರ ಕ್ರಿಯಾಶೀಲತೆಗೆ ಫ್ಯಾಮಿಲಿ ಡ್ರಾಮಾ ಸಿನಿಮಾನೇ ಸಾಕ್ಷಿ! ಸದ್ಯಕ್ಕೆ "ಫ್ಯಾಮಿಲಿ ಡ್ರಾಮಾ" ಟ್ರೈಲರ್ ರಿಲೀಸ್ ಆಗಿದ್ದು ಬಹಳ ಪಾಸಿಟಿವ್ ಕಮೆಂಟ್ ಗಳು ಬಂದಿದೆ. ಇದು ಸಿಂಧು ಶ್ರೀನಿವಾಸ್ ಮೂರ್ತಿ ಅವರು ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಆಗಿದ್ದು ಟ್ರೈಲರ್ ಬಹಳ ಕುತೂಹಲಕಾರಿಯಾಗಿದೆ. ಕಥೆಯೊಂದಿಗೆ ಕಾಮಿಡಿ ಕೂಡ ತುಂಬಾನೇ ಸಿಗಲಿದೆ ಎಂಬುದು ಸದ್ಯದ ಅಭಿಪ್ರಾಯವಾಗಿದೆ.
ಹಲವಾರು ಜನ ಟ್ರೈಲರ್ ನ ಕಾಮೆಂಟ್ ಸೆಕ್ಷನಲ್ಲಿ 'ಆಚಾರ್ ಅಂಡ್ ಕೋ' ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ ಕೂಡ. ಒಟ್ಟಿನಲ್ಲಿ ಹೇಳುವುದಾದ್ರೆ ಈ ಸಿನಿಮಾ ತುಂಬಾ ವಿಶೇಷವಾಗಿ ಅಂತೂ ಇದೆ. ಟೈಟಲ್ಲೇ ಹೇಳಿದಂತೆ 'ಫ್ಯಾಮಿಲಿ ಡ್ರಾಮಾ' ಇದಾಗಿದ್ದು, ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











