ಕನ್ನಡದ ಚಿತ್ರರಂಗದ ಕ್ರಾಂತಿಕಾರಿ ಸಿನಿಮಾ 'ಔಟ್ ಆಫ್ ಸಿಲಬಸ್'; ರಿಲೀಸ್ ಯಾವಾಗ?
'ಸಿಲಬಸ್' ಅನ್ನುವ ಪದವನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಈಗಂತೂ ಒಂದನೇ ತರಗತಿಯಿಂದಲೇ ಸಿಲಬಸ್ ಬಗ್ಗೆ ಮಾತುಗಳು ಕೇಳಿ ಬರುವುದಕ್ಕೆ ಶುರುವಾಗುತ್ತವೆ. ಈಗ ಅದೇ ಹೆಸರು ಇಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾವೊಂದನ್ನು ನಿರ್ಮಾಣ ಮಾಡಲಾಗಿದೆ. ಅದುವೇ 'ಔಟ್ ಆಫ್ ಸಿಲಬಸ್'.
'ಔಟ್ ಆಫ್ ಸಿಲಬಸ್' ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಪ್ರದೀಪ್ ದೊಡ್ಡಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರದೀಪ್ ದೊಡ್ಡಯ್ಯ ಅವರೇ ಈ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿರುವುದು ವಿಶೇಷ. ಸಿನಿಮಾ ತಂಡ ಈಗಾಗಲೇ 'ಔಟ್ ಆಫ್ ಸಿಲಬಸ್' ಒಂದು ಕ್ರಾಂತಿಕಾರಿ ಸಿನಿಮಾವೆಂದು ಹೇಳಿಕೊಂಡಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಈಗಾಗಲೇ 'ಔಟ್ ಆಫ್ ಸಿಲಬಸ್' ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಚಿತ್ರರಂಗಕ್ಕೆ ಹೊಸ ಆಯಾಮ ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸಿನಿಮಾದ ಹೆಸರೇ ಹೇಳುವಂತೆ ಇಲ್ಲಿವರೆಗೂ ಬಂದಿರುವ ರೆಗ್ಯೂಲರ್ ಜಾನರ್ ಅನ್ನು ಕೈ ಬಿಟ್ಟು ಹೊಸ ಪ್ರಕಾರದ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸುವುದಕ್ಕೆ ಮುಂದಾಗಿದೆ. ಹಾಗಂತ ಈ ಸಿನಿಮಾ ಕೇವಲ ಕ್ರಿಯೆಟಿವಿಟಿಯನ್ನಷ್ಟೇ ಅಲ್ಲ, ಸ್ಯಾಂಡಲ್‌ವುಡ್ ತಾಕತ್ತು ಏನು? ಅನ್ನೋದನ್ನು ತೋರಿಸುವುದಕ್ಕೆ ಹೊರಟಿದೆ.
'ಔಟ್ ಆಫ್ ಸಿಲಬಸ್' ಸಿನಿಮಾದಲ್ಲಿ ಕೇವಲ ಮನರಂಜನೆಯಷ್ಟೇ ಇಲ್ಲ. ಇದು ಇಂದಿನ ಮಾಡರ್ನ್ ಸಂಬಂಧಗಳ ಕುರಿತಾಗಿ ಹೇಳಿರುವ ಸಿನಿಮಾ. ಮನಸ್ಸಿಗೆ ತಟ್ಟುವ ಡೈಲಾಗ್‌ಗಳು ಖಂಡಿತಾ ಪ್ರೇಕ್ಷಕರಿಗೆ ತಟ್ಟುತ್ತವೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಸ್ಯಾಂಡಲ್‌ವುಡ್ ಹೊಸ ಹೈಟ್‌ಗೆ ಕೊಂಡೊಯ್ಯುವ ಸಿನಿಮಾ ಇದಾಗಿದ್ದು, ದೇಶಾದ್ಯಂತ ಕನ್ನಡ ಚಿತ್ರರಂಗದ ತಾಕತ್ತು ಏನು ಅನ್ನೋದನ್ನು ತೋರಿಸುತ್ತದೆ ಎಂದು ಚಿತ್ರತಂಡ ಭರವಸೆಯ ಮಾತುಗಳನ್ನು ಆಡಿದೆ.
ಪ್ರದೀಪ್ ದೊಡ್ಡಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾವನ್ನು ವಿಜಯಕಲಾ ಸುಧಾಕರ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರದೀಪ್ ದೊಡ್ಡಯ್ಯ ಜೊತೆಗೆ ನಾಯಕಿಯಾಗಿ ಹೃತಿಕಾ ಶ್ರೀನಿವಾಸ್, ಯೋಗರಾಜ್ ಭಟ್ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ಸ್ಟಾರ್ ಕಾಸ್ಟ್ ಅನ್ನು ಹೊಂದಿರುವ ಸಿನಿಮಾ ತಂಡದಿಂದ ಅದ್ಭುತ ಸಿನಿಮಾವನ್ನು ನಿರೀಕ್ಷೆ ಮಾಡಬಹುದು ಎಂದು ಸಿನಿಮಾ ತಂಡ ಹೇಳಿಕೊಂಡಿದೆ.
'ಔಟ್ ಆಫ್ ಸಿಲಬಸ್' ಸಿನಿಮಾ ಸಂಬಂಧಗಳು ಹಾಗೂ ಮದುವೆಯ ಜಟಿಲತೆಯನ್ನು ಹೇಳುವುದಕ್ಕೆ ಹೊರಟಿದೆ. ಈ ಕತೆಯು ಪ್ರೇಕ್ಷಕರನ್ನು ಸೆಳೆಯುತ್ತವೆ ಎಂದು ಕಾನ್ಫಿಡೆಂಟ್ ಆಗಿ ಹೇಳಿಕೊಂಡಿದ್ದಾರೆ. ಸದ್ಯ ಟೀಸರ್ ಹಾಗೂ ಗ್ಲಿಂಪ್ಸ್‌ನಿಂದ ಗಮನ ಸೆಳೆದಿರುವ 'ಔಟ್ ಆಫ್ ಸಿಲಬಸ್' ಶೀಘ್ರದಲ್ಲಿಯೇ ಬಿಡುಗಡೆಗೆ ಸಿದ್ಧವಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಸೃಷ್ಟಿಸುತ್ತೆ ಎಂದು ಚಿತ್ರತಂಡ ಬಲವಾಗಿ ನಂಬಿದೆ.


Click it and Unblock the Notifications











