ಕನ್ನಡದ ಚಿತ್ರರಂಗದ ಕ್ರಾಂತಿಕಾರಿ ಸಿನಿಮಾ 'ಔಟ್ ಆಫ್ ಸಿಲಬಸ್'ಗೆ ಮುಹೂರ್ತ ಫಿಕ್ಸ್; ಯಾವಾಗ ರಿಲೀಸ್?
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೊಸ ಪ್ರತಿಭೆಗಳು ವಿಶಿಷ್ಟ ಕಥೆಗಳನ್ನು ಹೊತ್ತು ಬರುತ್ತಿದ್ದಾರೆ. ಇಂತಹದ್ದೇ ಒಂದು ಸಿನಿಮಾ ಕೆಲವು ದಿನಗಳ ಹಿಂದಷ್ಟೇ ಸೆಟ್ಟೇರಿತ್ತು. ಜೋಗಿ ಪ್ರೇಮ್ ಮೆಚ್ಚಿ ಕ್ಲಾಪ್ ಮಾಡಿದ ಸಿನಿಮಾವಿದು. ಅದುವೇ 'ಔಟ್ ಆಫ್ ಸಿಲಬಸ್'.
'ಸಿಲಬಸ್' ಅನ್ನುವ ಪದವನ್ನು ವಿದ್ಯಾರ್ಥಿಗಳು ಕೇಳಿರುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ಇನ್ನೂ ವಿದ್ಯಾಭ್ಯಾಸ ಮಾಡುತ್ತಿರುವವರ ಬಾಯಲ್ಲಿ ಸುಲಭವಾಗಿ ಹರಿದಾಡುತ್ತಿರುವ ಪದವೇ 'ಸಿಲಬಸ್'. ಇದೇ ಟೈಟಲ್ ಅನ್ನು ಇಟ್ಟುಕೊಂಡು ಹೊಸದೊಂದು ಸಿನಿಮಾ ಸೆಟ್ಟೇರಿತ್ತು. ಅದಕ್ಕೆ 'ಔಟ್ ಆಫ್ ಸಿಲಬಸ್' ಅಂತ ಟೈಟಲ್ ಇಟ್ಟು ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿದ್ದರು.

ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರಾದ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಪ್ರದೀಪ್ ದೊಡ್ಡಯ್ಯ ನಾಯಕನಾಗಿ ನಟಿಸಿದ್ದಾರೆ. ಇದೇ ವಿಷಯವನ್ನು ಪ್ರದೀಪ್ ದೊಡ್ಡಯ್ಯ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಸಿನಿಮಾ ಆರಂಭ ಮಾಡುವುದಕ್ಕಿಂತ ಮುನ್ನವೇ ಇದೊಂದು ಕ್ರಾಂತಿಕಾರಿ ಸಿನಿಮಾವೆಂದು ಚಿತ್ರತಂಡ ಹೇಳಿಕೊಂಡಿತ್ತು. ಈ ಕಾರಣಕ್ಕೆ 'ಔಟ್ ಆಫ್ ಸಿಲಬಸ್' ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.
ಇದು ರೆಗ್ಯೂಲರ್ ಸಿನಿಮಾ ಅಲ್ಲ. ಸಾಮಾನ್ಯವಾಗಿ ಬರುವ ಸಿನಿಮಾಗಳ ಸಿದ್ಧ ಸೂತ್ರಗಳನ್ನು ಪಕ್ಕಕ್ಕೆ ಇಟ್ಟು ಹೊಸ ಪ್ರಕಾರದ ಸಿನಿಮಾವನ್ನು ಪ್ರೇಕ್ಷಕರಿಗೆ ಕೊಡುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಪ್ರೇಕ್ಷಕರಿಗೆ ಈ ಸಿನಿಮಾ ಮೂಲಕ ವಿಶಿಷ್ಟ ಅನುಭವವನ್ನು ನೀಡುವುದಕ್ಕೆ ಚಿತ್ರತಂಡ ನಿರ್ಧರಿಸಿತ್ತು. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನ ತಾಕತ್ತು ಏನು ಅಂತ ತೋರಿಸುವುದಕ್ಕೆ ಮುಂದಾಗಿದೆ.
'ಔಟ್ ಆಫ್ ಸಿಲಬಸ್' ಸಿನಿಮಾ ಸದ್ದಿಲ್ಲದೆ ಶೂಟಿಂಗ್ ಅನ್ನು ಮುಗಿಸಿ, ಇದೇ ಡಿಸೆಂಬರ್ 27ರಂದು ಬಿಡುಗಡೆಗೆ ಸಜ್ಜಾಗಿದೆ. ವರ್ಷದ ಕೊನೆಯಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ ಸಿನಿಪ್ರಿಯರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತೆ? ಹೊಸ ಟ್ರೆಂಡ್ ಅನ್ನು ಹುಟ್ಟಾಕುತ್ತಾ? ಪ್ರದೀಪ್ ದೊಡ್ಡಯ್ಯ ಕಲ್ಪನೆ ಪ್ರೇಕ್ಷಕರಿಗೆ ಹಿಡಿಸುತ್ತಾ? ಅನ್ನೋದು ಸಿನಿಮಾ ಬಿಡುಗಡೆ ಬಳಿಕ ತಿಳಿಯಲಿದೆ.
'ಔಟ್ ಆಫ್ ಸಿಲಬಸ್' ಈ ಸಿನಿಮಾದಲ್ಲಿ ಕೇವಲ ಮನರಂಜನೆಯನ್ನಷ್ಟೇ ಇಡಲಾಗಿಲ್ಲ. ಇಂದಿನ ಕಾಲದ ಸಂಬಂಧಗಳನ್ನು ಮುಂದಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಸಿನಿಮಾ ನೋಡಲು ಬರುವ ಮನಸ್ಸಿಗೆ ಮುಟ್ಟುವಂತಹ ಡೈಲಾಗ್‌ಗಳು ಇದರಲ್ಲಿ ಇರಲಿದೆ. 'ಔಟ್ ಆಫ್ ಸಿಲಬಸ್' ಪ್ರೇಕ್ಷಕರು ಇಷ್ಟ ಪಟ್ಟರೇ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟಾಕಲಿದೆ. ಇದೇ ಭರವಸೆಯಲ್ಲಿ ಇಡೀ ಚಿತ್ರತಂಡವಿದೆ.
ಪ್ರದೀಪ್ ದೊಡ್ಡಯ್ಯ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ವಿಜಯಕಲಾ ಸುಧಾಕರ್ ನಿರ್ಮಾಣ ಮಾಡಿದ್ದಾರೆ. ಪ್ರದೀಪ್ ದೊಡ್ಡಯ್ಯ ಅವರಿಗೆ ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ನಟಿಸಿದ್ದಾರೆ. ಇವರಿಬ್ಬರ ಜೊತೆ ಪ್ರಮುಖ ಪಾತ್ರದಲ್ಲಿ ಯೋಗರಾಜ್ ಭಟ್ ಹಾಗೂ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಹೊಸಬರ ಜೊತೆಗೆ ದಿಗ್ಗಜರ ಸಮಾಗಮವಿರುವ ಈ ಸಿನಿಮಾ ಚಿತ್ರಮಂದಿರದಲ್ಲಿ ಸದ್ದು ಮಾಡುವ ಭರವಸೆ ಚಿತ್ರತಂಡಕ್ಕಿದೆ.
ಅಂದ್ಹಾಗೆ 'ಔಟ್ ಆಫ್ ಸಿಲಬಸ್' ಸಿನಿಮಾ ಈ ಕಾಲದ ಸಂಬಂಧಗಳು ಹಾಗೂ ಮದುವೆಯ ಜಟಿಲತೆಯ ಸುತ್ತಾ ಸಾಗುತ್ತೆ. ಈಗಾಗಲೇ ಟೀಸರ್ ಹಾಗೂ ಗ್ಲಿಂಪ್ಸ್‌ನಿಂದ ಪ್ರೇಕ್ಷಕರ ಗಮನವನ್ನು ಸೆಳೆದಿದೆ. 'ಔಟ್ ಆಫ್ ಸಿಲಬಸ್' ಇದೇ ಡಿಸೆಂವರ್ 27ರಂದು ರಿಲೀಸ್ ಆಗುತ್ತಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಸೃಷ್ಟಿಸುವ ಭರವಸೆ ಚಿತ್ರತಂಡಕ್ಕಿದೆ.


Click it and Unblock the Notifications











