twitter
    For Quick Alerts
    ALLOW NOTIFICATIONS  
    For Daily Alerts

    ಆಕ್ಟ್ 1978: ಕೇವಲ ಮನರಂಜನೆಯಲ್ಲ, ಕಾನೂನಿನ ತಿಳುವಳಿಕೆ

    |

    ಲಾಕ್‌ಡೌನ್‌ ಬಳಿಕ ಚಿತ್ರಮಂದಿರ ತೆರೆಕಾಣುತ್ತಿರುವ ಮೊದಲ ಕನ್ನಡ ಸಿನಿಮಾ 'ಆಕ್ಟ್ 1978'. ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ಡೈರೆಕ್ಟ್ ಮಾಡಿರುವ 'ಆಕ್ಟ್ 1978' ನವೆಂಬರ್ 20 ರಂದು ಥಿಯೇಟರ್‌ಗೆ ಬರ್ತಿದೆ. ಹರಿವು, ನಾತಿಚರಾಮಿ ಸಿನಿಮಾಗಳ ಬಳಿಕ ಮಂಸೋರೆ ಮಾಡಿರುವ ಚಿತ್ರ ಇದಾಗಿದ್ದು, ಸಹಜವಾಗಿ ಕುತೂಹಲ ಕೆರಳಿಸಿದೆ.

    1978ರಲ್ಲಿ ಬಂದ ಕಾಯಿದೆ ಕುರಿತು ಈ ಸಿನಿಮಾ ತಯಾರಾಗಿದ್ದು, ನೇರವಾಗಿ ಈ ಕಾಯಿದೆ ಬಗ್ಗೆ ಹೇಳದ ನಿರ್ದೇಶಕರು ಅದರ ಸುತ್ತ ನಡೆಯುವ ಘಟನೆಗಳ ಮೂಲಕ ತೋರಿಸುವ ಪ್ರಯತ್ನ ಎಂದು ಹೇಳಿಕೊಂಡಿದ್ದಾರೆ. ಚಿತ್ರದ ಪೋಸ್ಟರ್‌ನಲ್ಲಿ ನಟಿ ಯಜ್ಞಾ ಶೆಟ್ಟಿ ಸೊಂಟದಲ್ಲಿ ಬಾಂಬ್ ಇದೆ. ಗರ್ಭಿಣಿ ಮಹಿಳೆ ಕೈಯಲ್ಲಿ ಪಿಸ್ತೂಲ್ ಸಹ ಇದೆ. ಆಕೆ ಆತ್ಮಾಹುತಿ ಬಾಂಬರ್ ಇರಬೇಕು ಎನಿಸುತ್ತಿದೆ.

    ಆಕ್ಟ್ 1978 ಕಥೆ....
    ಸರ್ಕಾರಿ ಕಚೇರಿಯನ್ನು ಹೈಜಾಕ್ ಮಾಡುವ ಮಹಿಳೆ, ನಂತರ ಅದರಿಂದ ಸರ್ಕಾರ ಮಟ್ಟದಲ್ಲಿ ಸೃಷ್ಟಿಯಾಗುವ ಅಲ್ಲೋಲ-ಕಲ್ಲೋಲ. ಪರ-ವಿರೋಧ ಚರ್ಚೆಗಳು, ಕಾನೂನು ತೊಡಕುಗಳು, ಪೊಲೀಸ್ ಭೇಟೆ ಹೀಗೆ ಒಂದು ಹೈಜಾಕ್ ಸುತ್ತ ಮಂಸೋರೆ ಕತೆ ಹೆಣೆದಿದ್ದಾರೆ. ಆಡಳಿತ ಯಂತ್ರದಲ್ಲಿರುವ ಕೊರತೆಗಳು, ಸಾಮಾನ್ಯರ ಪಡಿಪಾಟಲುಗಳು, ಸಾಮಾನ್ಯರೆಡೆಗೆ ಉನ್ನತ ಅಧಿಕಾರಿಗಳ ಧೋರಣೆ, ಸರ್ಕಾರಗಳು, ಅದನ್ನು ನಡೆಸುವವರ ಧೋರಣೆಗಳು ಇನ್ನೂ ಹಲವಾರು ವಿಷಯಗಳ ಬಗ್ಗೆ ಈ ಸಿನಿಮಾ ಚರ್ಚಿಸಲಿದೆ.

    act-1978-kannada-movie-releasing-on-november-20th

    ಮನರಂಜನೆ ದೃಷ್ಟಿಯಿಂದ ಇದೊಂದು ಒಳ್ಳೆಯ ಸಸ್ಪೆನ್ಸ್ ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಮನರಂಜನೆಯ ಜೊತೆ ಈ ಚಿತ್ರವೂ ಕಾನೂನಿನ ಬಗ್ಗೆ ತಿಳುವಳಿಕೆ ನೀಡುತ್ತದೆ ಎಂಬ ಅಚಲವಾದ ನಂಬಿಕೆ ಹುಟ್ಟಿಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ಬಿಡುಗಡೆಗೂ ಮುಂಚೆ ಚಿತ್ರತಂಡ ಮಾಡುತ್ತಿರುವ ಪ್ರಚಾರದ ವಿಧಾನ.

    ಭಾರತ ಸಂವಿಧಾನದಲ್ಲಿ ಸಾರ್ವಜನಿಕರು ಬಳಸಿಕೊಳ್ಳದ ಅಥವಾ ತಿಳಿಯದ ಅನೇಕ ಕಾನೂನುಗಳಿವೆ. ದಿನನಿತ್ಯದ ಬದುಕಿಗೆ ಅಗತ್ಯವೆನಿಸುವ ಸೆಕ್ಷನ್‌ಗಳ ನಮಗೆ ಅರಿವೆ ಇಲ್ಲದೇ ಸಾಗುತ್ತಿದ್ದೇವೆ. ಇಂತಹ ಕಾನೂನಿಗೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನದ ಪ್ರತಿರೂಪ ಈ ಆಕ್ಟ್ 1978 ಸಿನಿಮಾ.

    ಮಂಸೋರೆ ಸಿನಿಮಾಗಳು ಅಂದ್ರೆ ಅಲ್ಲೊಂದು ವಿಶೇಷತೆ ಇದೆ. ಸಮಾಜದಲ್ಲಿ ಕ್ರಾಂತಿ ಸೃಷ್ಟಿಸುವಂತಹ ಅಂಶಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಅವರ ಸಿನಿಮಾಗಳಲ್ಲಿರುತ್ತದೆ. ಈ ಹಿಂದಿನ ಹರಿವು ಮತ್ತು ನಾತಿಚರಾಮಿ ಸಿನಿಮಾ ಸಹ ಅಂತಹ ವಿಭಾಗಕ್ಕೆ ಸೇರಿದ ಚಿತ್ರಗಳೇ.

    Recommended Video

    ಜೇಮ್ಸ್ ಚಿತ್ರದಲ್ಲಿ ಪುನೀತ್ ಎದುರು ಅಬ್ಬರಿಸಲಿದ್ದಾರೆ ಬಾಲಿವುಡ್ ನಟ | James | Puneeth Rajkumar

    ನಟಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ. ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯಾ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ತಾರಬಳಗದಲ್ಲಿದ್ದಾರೆ. ದೇವರಾಜ್ ಆರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

    English summary
    Kannada Movie 'ACT 1978' releasing on November 20th. It is the first Kannada movie to release in theaters after the lockdown.
    Saturday, November 14, 2020, 20:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X