twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ಡೌನ್ ಬಳಿಕ ಮೊದಲ ಗೆಲುವು: 25ನೇ ದಿನ ಪೂರೈಸಿದ 'ಆಕ್ಟ್ 1978'

    |

    ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಚಿತ್ರಮಂದಿರಕ್ಕೆ ಜನರು ಬರ್ತಾರೋ ಇಲ್ವೋ, ಸಿನಿಮಾ ರಿಲೀಸ್ ಮಾಡಬೇಕೋ ಬೇಡವೋ ಎಂಬ ಹಲವು ಗೊಂದಲಗಳ ನಡುವೆ ತೆರೆಕಂಡ ಚಿತ್ರ ಆಕ್ಟ್ 1978.

    ಸಿನಿಮಾ ಚೆನ್ನಾಗಿದ್ದರೆ ಜನ ಥಿಯೇಟರ್‌ಗೆ ಬಂದೇ ಬರ್ತಾರೆ ಎಂಬ ನಂಬಿಕೆಯಿಂದ ರಿಲೀಸ್ ಆದ ಚಿತ್ರಕ್ಕೆ ಈಗ ಗೆಲುವು ಸಿಕ್ಕಿದೆ. ಲಾಕ್‌ಡೌನ್ ಬಳಿಕ ಚಿತ್ರಮಂದಿರಕ್ಕೆ ಬಂದ ಮೊದಲ ಸಿನಿಮಾ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ.

     ACT 1978 ಚಿತ್ರ ವಿಮರ್ಶೆ: ಈ ಸಿನೆಮಾ ತಪ್ಪದೇ ನೋಡಿ ACT 1978 ಚಿತ್ರ ವಿಮರ್ಶೆ: ಈ ಸಿನೆಮಾ ತಪ್ಪದೇ ನೋಡಿ

    ಸ್ಯಾಂಡಲ್‌ವುಡ್‌ಗೆ ಹೊಸ ಭರವಸೆ ಮೂಡಿಸಿದ ಚಿತ್ರ 25 ದಿನ ಪೂರೈಸಿದ ಹಿನ್ನೆಲೆ ನಿರ್ದೇಶಕ ಮಂಸೋರೆ ಟ್ವಿಟ್ಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ''ನಿಮ್ಮೆಲ್ಲರ ಪ್ರೀತಿ, ನಮ್ಮನ್ನು ಈ ಮೈಲಿಗಲ್ಲು ತಲುಪುವಂತೆ ಮಾಡಿದೆ. ಎಲ್ಲಾ ಪ್ರೇಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳು'' ಎಂದು ತಿಳಿಸಿದ್ದಾರೆ.

    ACT 1978 Movie completes 25 days in theaters

    ಅಂದ್ಹಾಗೆ, ನವೆಂಬರ್ 20 ರಂದು ಆಕ್ಟ್ 1978 ಸಿನಿಮಾ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಲಾಕ್‌ಡೌನ್‌ ಆದ್ಮೇಲೆ ಚಿತ್ರಮಂದಿರ ಕಡೆ ಮುಖ ಮಾಡದ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡರು.

    ಪ್ರೇಕ್ಷಕರ ಜೊತೆ ಸೆಲೆಬ್ರಿಟಿಗಳು ಕೊಂಡಾಡಿದರು. ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಯಕ್ತಿಕವಾಗಿ ಚಿತ್ರತಂಡವನ್ನು ಶ್ಲಾಘಿಸಿದರು.

    Act-1978 Review: ಹಲವು ಭಾವಗಳ ಹೋರಾಟದ ಕಥನAct-1978 Review: ಹಲವು ಭಾವಗಳ ಹೋರಾಟದ ಕಥನ

    ಕನ್ನಡ ಚಿತ್ರರಂಗಕ್ಕೆ ಹೊಸ ಪುನಶ್ಚೇತನ ನೀಡುವಲ್ಲಿ ಆಕ್ಟ್ 1978 ಸಿನಿಮಾ ಸಫಲವಾಗಿದೆ. ಈ ಚಿತ್ರದ ಬಳಿಕ ಮತ್ತಷ್ಟು ಹೊಸ ಸಿನಿಮಾಗಳು ಚಿತ್ರಮಂದಿರಲ್ಲಿ ಬಿಡುಗಡೆಯಾಗಿವೆ. ಜನವರಿ ಬಳಿಕ ದೊಡ್ಡ ನಟರ ಚಿತ್ರಗಳು ತೆರೆಗೆ ಬರಲಿದೆ.

    Recommended Video

    #PowerOfYouth ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ ಯುವರತ್ನ ಬೆಡಗಿ | Yuvarathnaa | Filmibeat Kannada

    ಇನ್ನುಳಿದಂತೆ ನಟಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬಿ. ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯಾ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ತಾರಬಳಗದಲ್ಲಿದ್ದಾರೆ. ದೇವರಾಜ್ ಆರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

    English summary
    National Award Winner Mansore Directional movie ACT 1978 completes 25 days in theaters.
    Tuesday, December 15, 2020, 17:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X