For Quick Alerts
  ALLOW NOTIFICATIONS  
  For Daily Alerts

  ಮಂಸೋರೆ ಹೇಳಿದ ಕತೆ ಮೆಚ್ಚಿದ ಸಾಯಿ ಪಲ್ಲವಿ

  By ಫಿಲ್ಮಿಬೀಟ್ ಡೆಸ್ಕ್
  |

  ಸೂಕ್ಷ್ಮ ವಿಷಯವಾಧರಿತ ಸಿನಿಮಾಗಳ ನಿರೀಕ್ಷೆ ಹುಟ್ಟಿಸಿರುವ ನಿರ್ದೇಶಕ ಮಂಸೋರೆ ತಮ್ಮ ಮಂದಿನ ಸಿನಿಮಾವನ್ನು ದಕ್ಷಿಣ ಭಾರತದ ಸ್ಟಾರ್ ನಟಿಯೊಟ್ಟಿಗೆ ಮಾಡಲಿದ್ದಾರೆ.

  ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ ನಾಯಕಿಯಾಗಿ ಆ ನಂತರ ತಮ್ಮ ಅದ್ಭುತ ನಟನೆ ಹಾಗೂ ನೃತ್ಯದಿಂದ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಸಾಯಿ ಪಲ್ಲವಿ ಜೊತೆಗೆ ಮಂಸೋರೆ ಸಿನಿಮಾ ಮಾಡುವ ಸಕಲ ಸಾಧ್ಯತೆಗಳು ಇವೆ.

  ಸೆಪ್ಟಂಬರ್ 10ಕ್ಕೆ ರಿವೀಲ್ ಆಗ್ತಿದೆ ಸಾಯಿ ಪಲ್ಲವಿ-ನಾಗ ಚೈತನ್ಯ 'ಲವ್ ಸ್ಟೋರಿ' ಸೆಪ್ಟಂಬರ್ 10ಕ್ಕೆ ರಿವೀಲ್ ಆಗ್ತಿದೆ ಸಾಯಿ ಪಲ್ಲವಿ-ನಾಗ ಚೈತನ್ಯ 'ಲವ್ ಸ್ಟೋರಿ'

  'ಆಕ್ಟ್ 1987' ಸಿನಿಮಾದ ಯಶಸ್ಸಿನಿಂದಾಗಿ ಮಂಸೋರೆಯೊಟ್ಟಿಗೆ ಸಿನಿಮಾ ಮಾಡಲು ಹಲವು ನಿರ್ಮಾಪಕರು ಸಂಪರ್ಕಿಸಿದ್ದು, ಅವರಲ್ಲೊಬ್ಬರಿಗಾಗಿ ಮಾಡಲಾಗುತ್ತಿರುವ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ.

  ರಾಜಕೀಯ ಥ್ರಿಲ್ಲರ್ ಕತೆಯನ್ನು ಮಂಸೋರೆ ಹೆಣೆಯುತ್ತಿದ್ದು ಈ ಸಿನಿಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ಒಂದು ಹಂತದ ಮಾತುಕತೆಯನ್ನು ಮಂಸೋರೆ, ಸಾಯಿ ಪಲ್ಲವಿ ಜೊತೆ ಆಡಿದ್ದಾರೆ. ಕತೆ ಇನ್ನಷ್ಟು ಹರಿತವಾದ ಬಳಿಕ ಮತ್ತೊಂದು ಹಂತದ ಮಾತುಕತೆ ನಡೆದು ಸಿನಿಮಾ ಅಂತಿಮಗೊಳ್ಳಲಿದೆ.

  ಫೋನ್ ಮೂಲಕ ಒನಲೈನರ್ ಹೇಳಿದ್ದೇನೆ: ಮಂಸೋರೆ

  ಫೋನ್ ಮೂಲಕ ಒನಲೈನರ್ ಹೇಳಿದ್ದೇನೆ: ಮಂಸೋರೆ

  ಈ ಬಗ್ಗೆ ಮಾತನಾಡಿರುವ ಮಂಸೋರೆ, ''ಸಾಯಿ ಪಲ್ಲವಿ ಜೊತೆಗೆ ಫೋನ್‌ನಲ್ಲಿ ಸಂಭಾಷಣೆ ಆಗಿದೆ. ಕತೆ ಅವರಿಗೆ ಇಷ್ಟವಾಗಿದೆ ಚಿತ್ರಕತೆ ಪೂರ್ಣಗೊಳಿಸಿ ಆಮೇಲೆ ಇನ್ನೊಮ್ಮೆ ಮಾತನಾಡುವ ಎಂದಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ. ಸಿನಿಮಾದ ಕತೆಯು ಕರ್ನಾಟಕದಲ್ಲಿಯೇ ನಡೆದ ಘಟನೆಯೊಂದರಿಂದ ಪ್ರೇರಣೆ ಪಡೆದಿದ್ದು, ಕತೆಯ ಸಾರ ವಿಶಾಲ ವ್ಯಾಪ್ತಿಯದ್ದಾಗಿದೆ. ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೂ ಒಗ್ಗುವಂಥಹಾ ಕತೆ ಇದಾಗಿದೆ'' ಎಂದು ಮಾಹಿತಿ ನೀಡಿದ್ದಾರೆ ಮಂಸೋರೆ.

  ಆಗಸ್ಟ್ 15 ರಂದು ವಿವಾಹವಾಗಿರುವ ಮಂಸೋರೆ

  ಆಗಸ್ಟ್ 15 ರಂದು ವಿವಾಹವಾಗಿರುವ ಮಂಸೋರೆ

  ಮಂಸೋರೆ ಈಗಷ್ಟೆ ವಿವಾಹವಾಗಿದ್ದಾರೆ. ಆಗಸ್ಟ್ 15 ರಂದು ಮಂಸೋರೆ, ಅಖಿಲಾ ಎಂಬುವರನ್ನು ಬೆಂಗಳೂರಿನ ನೈಸ್ ಜಂಕ್ಷನ್ ಬಳಿಯ ಶ್ರೀಬವಿ ಕೋರ್ಟಿಯಾರ್ಡ್‌ನಲ್ಲಿ ವಿವಾಹವಾಗಿದ್ದಾರೆ. ಮದುವೆಯ ಕಾರಣದಿಂದ ಬಿಡುವು ಪಡೆದಿರುವ ಮಂಸೋರೆ, ಸಿನಿಮಾ ಕೆಲಸಗಳಿಂದ ತುಸು ವಿರಾಮ ಪಡೆದಿದ್ದಾರೆ. ಹಾಗಾಗಿ ಮಂಸೋರೆ ಚಿತ್ರಕತೆ ಪೂರ್ಣಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಯಾವ ಭಾಷೆಯಲ್ಲಿ ನಿರ್ಮಾಣವಾಗುತ್ತದೆ. ನಾಯಕ ಯಾರು? ನಾಯಕಿ ಪ್ರಧಾನವೋ ಇನ್ನಿತರೆ ಮಾಹಿತಿಗಳು ಲಭ್ಯವಾಗಬೇಕಿದೆ.

  ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ

  ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ

  ಮಂಸೋರೆ ಈವರೆಗೆ 'ಹರಿವು', 'ನಾತಿಚರಾಮಿ, 'ಆಕ್ಟ್ 1987' ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾಗಿರುವ ಮಂಸೋರೆಯ ಇತ್ತೀಚಿನ ಸಿನಿಮಾ 'ಆಕ್ಟ್-1987'ಗೆ ಉತ್ತಮ ಪ್ರಶಂಸೆ ಕೇಳಿಬಂದಿತ್ತು. ಸಿನಿಮಾದ ತೆಲುಗು ಹಾಗೂ ಹಿಂದಿ ರೀಮೇಕ್ ಹಕ್ಕುಗಳು ಮಾರಾಟವಾಗಿದ್ದು, ಹಿಂದಿಯಲ್ಲಿ ಮಂಸೋರೆಯವರೇ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ರಾಣಿ ಅಬ್ಬಕ್ಕನ ಕುರಿತಾದ ಸಿನಿಮಾವನ್ನು ಮಾಡುವುದಾಗಿಯೂ ಮಂಸೋರೆ ಹೇಳಿದ್ದರು. ಆ ಸಿನಿಮಾ ಇನ್ನೂ ಪ್ರಾರಂಭವಾಗಿಲ್ಲ.

  'ಲವ್‌ ಸ್ಟೋರಿ' ಸಿನಿಮಾ ಸೆಪ್ಟೆಂಬರ್ 10ಕ್ಕೆ ಬಿಡುಗಡೆ

  'ಲವ್‌ ಸ್ಟೋರಿ' ಸಿನಿಮಾ ಸೆಪ್ಟೆಂಬರ್ 10ಕ್ಕೆ ಬಿಡುಗಡೆ

  ಇನ್ನು ನಟಿ ಸಾಯಿ ಪಲ್ಲವಿ ನಟಿಸಿರುವ 'ಲವ್ ಸ್ಟೋರಿ' ಸಿನಿಮಾ ಸೆಪ್ಟೆಂಬರ್ 10ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ನಾಗ ಚೈತನ್ಯ ನಾಯಕ ನಟನಾಗಿ ನಟಿಸಿದ್ದಾರೆ, ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಅದರ ಹೊರತಾಗಿ ಸಾಯಿ ಪಲ್ಲವಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ನಟ ನಾನಿ ಜೊತೆ ಎರಡನೇ ಬಾರಿ 'ಶ್ಯಾಮ ಸಿಂಘ ರಾಯ್' ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಹಿಂದೆ ಈ ಇಬ್ಬರು 'ಮಿಡ್ಲ್ ಕ್ಲಾಸ್ ಅಬ್ಬಾಯಿ' ಸಿನಿಮಾದಲ್ಲಿ ನಟಿಸಿದ್ದರು. ಧನುಷ್‌ ನಟನಯ ಹೊಸ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಖಾತ್ರಿ ದೊರೆತಿಲ್ಲ.

  English summary
  'Act 1978' movie director Mansore in talks with Sai Pallavi for a political thriller movie. Mansore told he told one liner story and Sai Pallavi liked the story now working on script.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X