ಹಿಂದಿಗೆ ರೀಮೇಕ್ ಆಗಲಿದೆ ಕನ್ನಡದ 'ಆಕ್ಟ್-1978'

ಕನ್ನಡ ಸಿನಿಮಾ 'ಆಕ್ಟ್-1978' ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದೆ. ಯಜ್ಞಾ ಶೆಟ್ಟಿ ನಟಿಸಿ, ಮಂಸೋರೆ ನಿರ್ದೇಶನ ಮಾಡಿದ್ದ ಈ ಸಿನಿಮಾ ತನ್ನ ಭಿನ್ನ ಕತೆ, ವಿಷಯ ವಸ್ತು, ಕಲಾವಿದರ ಉತ್ತಮ ಅಭಿನಯದ ಕಾರಣದಿಂದ ಗಮನ ಸೆಳೆದಿತ್ತು.

ಕೊರೊನಾ ಅನ್‌ಲಾಕ್‌ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಆ ಸಂಕಷ್ಟದ ಕಾಲದಲ್ಲೂ ಜನರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು. ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಬ್ಬರಿಂದಲೂ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು.

ಮಹಿಳೆಯೊಬ್ಬಳು ಭ್ರಷ್ಟ ಅಧಿಕಾರಿಗಳಿಗೆ ಬುದ್ಧಿ ಕಲಿಸಲು ಹಿಂಸೆಯ ದಾರಿ ಹಿಡಿದು ತನಗೆ ಸಲ್ಲಬೇಕಾದ ಹಕ್ಕನ್ನು ಪಡೆದುಕೊಳ್ಳುವ ಭಿನ್ನ ಹಾಗೂ ಕುತೂಹಲಕಾರಿ ಕತೆಯನ್ನು 'ಆಕ್ಟ್-1978' ಹೊಂದಿತ್ತು.

> Act 1978 Movie Remake Rights Sold Will Be Remade In Hindi Soon

ಇದೀಗ ಸಿನಿಮಾದ ರೀಮೇಕ್‌ ಹಕ್ಕು ಮಾರಾಟವಾಗಿದ್ದು, ಹಿಂದಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಹಿಂದಿಯ ಜನಪ್ರಿಯ ನಟಿಯೊಬ್ಬರು ಕನ್ನಡದಲ್ಲಿ ಯಜ್ಞಾಶೆಟ್ಟಿ ನಿರ್ವಹಿಸಿದ್ದ ಪಾತ್ರದಲ್ಲಿ ನಟಿಸಲಿದ್ದಾರೆ ಎಂದಿದ್ದಾರೆ ಸಿನಿಮಾದ ನಿರ್ದೇಶಕ ಮಂಸೋರೆ.

ಯಾವ ಬಾಲಿವುಡ್‌ ನಟಿ ನಟಿಸಲಿದ್ದಾರೆ ಎಂಬುದು ಖಾತ್ರಿಯಾಗಿಲ್ಲ. ಹಿಂದಿಯಲ್ಲಿ ಯಾವ ನಿರ್ದೇಶಕ ನಿರ್ದೇಶನ ಮಾಡಲಿದ್ದಾರೆ ಎಂಬುದು ಸಹ ಖಾತ್ರಿಯಾಗಿಲ್ಲ. ಆದರೆ ಅವಕಾಶ ಸಿಕ್ಕರೆ ಹಿಂದಿಯಲ್ಲಿಯೂ ತಾವೇ ನಿರ್ದೇಶಿಸುವುದಾಗಿ ಉತ್ಸುಕತೆ ಪ್ರದರ್ಶಿಸಿದ್ದಾರೆ ಮಂಸೋರೆ.

Recommended Video

Roberrt ಚಿತ್ರದ ಅವಧಿಯಿಂದ ಥಿಯೇಟರ್ ಮಾಲೀಕರಿಗೆ ಶುರುವಾಯ್ತು ತಲೆನೋವು | Filmibeat Kannada

'ಆಕ್ಟ್-1978' ಸಿನಿಮಾವು ಕೆಲವು ದಿನಗಳ ಹಿಂದಷ್ಟೆ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಬೇರೆ ರಾಜ್ಯಗಳ, ದೇಶಗಳ ವೀಕ್ಷಕರಿಂದಲೂ ಪ್ರಶಂಸೆ ದೊರೆಯುತ್ತಿದೆ.

More from Filmibeat

English summary
Act 1978 movie remake rights sold movie will be remade in Hindi soon said director Mansore. He also said that famous actress will play lead role in Hindi remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X