Act-1978 ಟ್ರೇಲರ್: ಸಾಮಾನ್ಯ ಜನರ ಅಸಾಮಾನ್ಯ ಕತೆ! ನಿರೀಕ್ಷೆ ದ್ವಿಗುಣ

ಮಂಸೋರೆ ನಿರ್ದೇಶನದ Act-1978 ಸಿನಿಮಾದ ಪೋಸ್ಟರ್ ಬಿಡುಗಡೆ ಆದಾಗಿನಿಂದಲೂ ಸಿನಿಮಾ ಕುತೂಹಲ ಕೆರಳಿಸಿತ್ತು. ಇದೀಗ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

Act-1978 ಸಿನಿಮಾದ ಟ್ರೇಲರ್ ಅನ್ನು ಇಂದು ನಟ ಪುನೀತ್ ರಾಜ್‌ಕುಮಾರ್ ಬಿಡುಗಡೆ ಗೊಳಿಸಿದ್ದಾರೆ. ಸಿನಿಮಾದ ಟ್ರೈಲರ್ ಸಾಕಷ್ಟು ಕುತೂಹಲ ಕೆರಳಿಸಿದೆ. ಸಾಮಾನ್ಯರು ಅಸಾಮಾನ್ಯಕ್ಕೆ ಕಾರ್ಯಕ್ಕೆ ಮುಂದಾಗುವ ಕತೆ ಸಿನಿಮಾ ಹೊಂದಿರುವುದು ಟ್ರೇಲರ್‌ನಿಂದ ತಿಳಿದುಬರುತ್ತಿದೆ.

ತಮ್ಮ ಹಕ್ಕಾದ ಸರ್ಕಾರದ ಸವಲತ್ತುಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಇಬ್ಬರು ಸಾಮಾನ್ಯರು ಕೊನೆಗೆ ಸರ್ಕಾರದ ವಿರುದ್ಧವೇ ತಿರುಗಿ ಬೀಳುವ ಕತೆಯನ್ನು Act-1978 ಸಿನಿಮಾ ಹೊಂದಿದೆ.

ಹೊಟ್ಟೆಗೆ ಬಾಂಬ್ ಕಟ್ಟಿಕೊಂಡ ಯಜ್ಞಾ ಶೆಟ್ಟಿ

ಹೊಟ್ಟೆಗೆ ಬಾಂಬ್ ಕಟ್ಟಿಕೊಂಡ ಯಜ್ಞಾ ಶೆಟ್ಟಿ

ಸಿನಿಮಾದ ಮುಖ್ಯ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಅಭಿನಯಿಸಿದ್ದಾರೆ. ಗರ್ಭಿಣಿ ಮಹಿಳೆಯಾಗಿ ಹೊಟ್ಟೆಗೆ ಬಾಂಬ್ ಕಟ್ಟಿ, ಬಿ.ಸುರೇಶ್ ಜೊತೆ ಸೇರಿ ಸರ್ಕಾರಿ ಕಚೇರಿಯನ್ನು ಹೈಜಾಕ್ ಮಾಡುತ್ತಾರೆ ಯಜ್ಞಾ ಶೆಟ್ಟಿ. ಅರ ಬೇಡಿಕೆ ಏನು, ಕೊನೆಗೆ ಅವರಿಗೆ ಏನಾಗುತ್ತದೆ ಎಂಬುದು ಸಿನಿಮಾದಲ್ಲಿಯೇ ನೋಡಬೇಕು.

ಹೈಜಾಕ್ ಸುತ್ತಾ ಮಂಸೋರೆ ಕತೆ

ಹೈಜಾಕ್ ಸುತ್ತಾ ಮಂಸೋರೆ ಕತೆ

ಯಜ್ಞಾ ಶೆಟ್ಟಿ ಸರ್ಕಾರಿ ಕಚೇರಿಯನ್ನು ಹೈಜಾಕ್ ಮಾಡುವುದು ಸರ್ಕಾರದ ಮಟ್ಟದಲ್ಲಿ ದೊಡ್ಡ ಅಲ್ಲೋಲ-ಕಲ್ಲೋಲ ಸೃಷ್ಟಿಸುತ್ತದೆ. ಆಗ ನಡೆಯುತ್ತದೆ ಮಂಥನ. ಪರ-ವಿರೋಧ ಚರ್ಚೆಗಳು, ಕಾನೂನು ತೊಡಕುಗಳು, ಪೊಲೀಸ್ ಭೇಟೆ ಹೀಗೆ ಒಂದು ಹೈಜಾಕ್ ಸುತ್ತ ಮಂಸೋರೆ ಕತೆ ಹೆಣೆದಿದ್ದಾರೆ.

ಹಲವು ವಿಷಯಗಳ ಬಗ್ಗೆ ಸಿನಿಮಾ ಚರ್ಚಿಸಲಿದೆ

ಹಲವು ವಿಷಯಗಳ ಬಗ್ಗೆ ಸಿನಿಮಾ ಚರ್ಚಿಸಲಿದೆ

ಆಡಳಿತ ಯಂತ್ರದಲ್ಲಿರುವ ಕೊರತೆಗಳು, ಸಾಮಾನ್ಯರ ಪಡಿಪಾಟಲುಗಳು, ಸಾಮಾನ್ಯರೆಡೆಗೆ ಉನ್ನತ ಅಧಿಕಾರಿಗಳ ಧೋರಣೆ, ಸರ್ಕಾರಗಳು, ಅದನ್ನು ನಡೆಸುವವರ ಧೋರಣೆಗಳು ಇನ್ನೂ ಹಲವಾರು ವಿಷಯಗಳ ಬಗ್ಗೆ ಈ ಸಿನಿಮಾ ಚರ್ಚಿಸಲಿದೆ ಎಂಬುದು ಟ್ರೇಲರ್‌ನಲ್ಲಿಯೇ ತಿಳಿದು ಬರುತ್ತಿದೆ.

Recommended Video

ಅಣ್ಣನನ್ನು ನೆನೆದು ವೇದಿಕೆ ಮೇಲೆ ಕಣ್ಣೀರಿಟ್ಟ Jote Joteyali ಅನು | Filmibeat Kannada
ಬಹುತಾರಾಗಣದ ಸಿನಿಮಾ

ಬಹುತಾರಾಗಣದ ಸಿನಿಮಾ

ಹರಿವು, ನಾತಿಚರಾಮಿ ಅಂಥಹಾ ಸಿನಿಮಾಗಳನ್ನು ನಿರ್ದೇಶಿಸಿದ್ದ ಮಂಸೋರೆ, ಈ ಬಾರಿ ತಮ್ಮ ಮಾದರಿಗಿಂತಲೂ ಭಿನ್ನವಾದ ಕತೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಯಜ್ಞಾ ಶೆಟ್ಟಿ, ಬಿ.ಸುರೇಶ್, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಪ್ರಮೋದ್ ಶೆಟ್ಟಿ, ಹೆಬ್ಬಾಳೆ ಕೃಷ್ಣ, ಸುಧಾ ಬೆಳವಾಡಿ ಇನ್ನೂ ಹಲವು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Mansore directed third movie act 1978's trailer released by Puneeth Rajkumar. Yagna Shetty is in lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X