Dhruva Sarja Birthday: ಹುಟ್ಟುಹಬ್ಬದಂದು ಅಭಿಮಾನಿಗಳು ಧ್ರುವ ಸರ್ಜಾ ಆಸೆ ಈಡೇರಿಸುತ್ತಾರಾ?

ಸ್ಯಾಂಡಲ್‌ವುಡ್ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶುಕ್ರವಾರ (ಅಕ್ಟೋಬರ್ 06) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾತ್ರಿಯಿಂದಲೇ ಅಭಿಮಾನಿಗಳು ನಟನ ಮನೆ ಮುಂದೆ ಜಮಾಯಿಸಿದ್ದು, ಕೇಕ್ ಕತ್ತರಿಸಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟ ಧ್ರುವ ಸರ್ಜಾ ನಾನಾ ಕಾರಣಗಳಿಂದಾಗಿ ಮೂರು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.

ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಬೆಂಗಳೂರಿನ ಬಸವನಗುಡಿಯ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾಜ್ಯದ ಹಲವೆಡೆಯಿಂದ ನಟನ ಅಭಿಮಾನಿಗಳು ರಾಜಧಾನಿಗೆ ಬಂದು ನೆಚ್ಚಿನ ನಟನ ಬರ್ತ್‌ಡೇ ಸೆಲಬ್ರೆಟ್ ಮಾಡಿದ್ದಾರೆ. ಬರ್ತ್‌ಡೇ ಹಿನ್ನೆಲೆ ಅವರ ಸಾಲು ಸಾಲು ಹೊಸ ಸಿನಿಮಾ ಘೋಷಣೆ, ಬಿಡುಗಡೆಯಾಗಲಿರುವ ಸಿನಿಮಾಗಳ ಅಪ್‌ಡೇಟ್‌ಗಳಿಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

Action prince Dhruva Sarja birthday celebration

ಈ ವರ್ಷ ತುಂಬಾ ವಿಶೇಷ ಧ್ರುವ ಸರ್ಜಾ ಹುಟ್ಟುಹಬ್ಬ!

ಈ ವರ್ಷದ ಹುಟ್ಟುಹಬ್ಬ ಧ್ರುವ ಪಾಲಿಗೆ ತುಂಬಾ ವಿಶೇಷ. ಏಕೆಂದರೆ ತನ್ನ ಬರ್ತ್‌ಡೇ ದಿನವೇ ಅಣ್ಣನ ಸಿನಿಮಾ ಬಿಡುಗಡೆಯಾಗುತ್ತಿದೆ. ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ 'ರಾಜಮಾರ್ತಾಂಡ' ಇಂದು ಸಿನಿ ಪರದೆಗಳಿಗೆ ಅಪ್ಪಳಿಸಲಿದೆ. 2020 ರಲ್ಲಿ ನಟ ಚಿರಂಜೀವಿ ಸರ್ಜಾ ತಮ್ಮ 39 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದರು. ಇದು ಚಿತ್ರರಂಗಕ್ಕೆ ಹೊಡೆದ ದೊಡ್ಡ ಆಘಾತವಾಗಿತ್ತು.

ಚಿರಂಜೀವಿ ಸರ್ಜಾ ಅಭಿನಯದ 'ರಾಜಮಾರ್ತಾಂಡ' ಚಿತ್ರವನ್ನು ಅವರ ಸಹೋದರ ಧ್ರುವ ಸರ್ಜಾ ಅವರ ಜನ್ಮದಿನವಾದ ಅಕ್ಟೋಬರ್ 6 ರಂದು ನಿಗದಿಪಡಿಸಲಾಗಿದೆ. ಗಮನಿಸಬೇಕಾದ ವಿಷಯವೆಂದರೇ ತಮ್ಮ ಸಹೋದರನ ಚಿತ್ರದ ಬಾಕಿ ಉಳಿದಿದ್ದ ಡಬ್ಬಿಂಗ್ ಕೆಲಸವನ್ನು ಧ್ರುವ ಪೂರ್ಣಗೊಳಿಸಿದ್ದರು.

Action prince Dhruva Sarja birthday celebration

ಹುಟ್ಟುಹಬ್ಬಕ್ಕೆ ವಿಶೇಷ ಮನವಿ ಮಾಡಿದ ಧ್ರುವ ಸರ್ಜಾ

ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬವನ್ನು ವುಶೇಷವಾಗಿ ಆಚರಿಸುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಬರೀ ಕೇಕ್ ಕಟ್ ಮಾಡುವುದಲ್ಲ ಜೊತೆಗೆ ರಾಜಮಾರ್ತಾಂಡ ಸಿನಿಮಾ ನೋಡುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ ಒಂದು ಉಡುಗೊರೆಯನ್ನು ನೀಡಬೇಕು ಎಂದು ಫ್ಯಾನ್ಸ್‌ ಬಳಿ ಕೇಳಿಕೊಂಡಿದ್ದಾರೆ.

ತಮ್ಮ ಅಣ್ಣನ ಸಿನಿಮಾವನ್ನು ಮೊದಲ ದಿನ, ಮೊದಲ ಶೋನಲ್ಲಿ ಅಭಿಮಾನಿಗಳೊಂದಿಗೆ ನೋಡುವ ಮೂಲಕ ವಿಶೇಷ ದಿನವನ್ನು ಆಚರಿಸುವುದಾಗಿ ಧ್ರುವ ಹೇಳಿದ್ದರು. "ನನ್ನ ಜೊತೆ ಅಣ್ಣನ 'ರಾಜಮಾರ್ತಾಂಡ' ಸಿನಿಮಾ ನೋಡಿ, ಅದೇ ನೀವು ನನಗೆ ಕೊಡುವ ದೊಡ್ಡ ಉಡುಗೊರೆ" ಎಂದೂ ಧ್ರುವ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ತಮ್ಮ ಸಹೋದರನ ಕೊನೆಯ ಸಿನಿಮಾವನ್ನು ಸೆಲಬ್ರೆಟ್ ಮಾಡಲು ತಮ್ಮ ಅಭಿಮಾನಿಗಳೆಲ್ಲಾ ಥಿಯೇಟರ್‌ಗಳಿಗೆ ಬರಬೇಕು. ಈ ಸಿನಿಮಾವನ್ನು ಹೆಚ್ಚು ಪ್ರೀತಿಯಿಂದ ನೋಡಬೇಕು ಎಂದು ವಿನಂತಿಸಿದ್ದಾರೆ. ಅಣ್ಣನ ಕೊನೆಯ ಸಿನಿಮಾವನ್ನು ಗೆಲ್ಲಿಸುವ ಉತ್ಸಾಹದಲ್ಲಿರುವ ಧ್ರುವ ಸರ್ಜಾ ರಾಜಮಾರ್ತಾಂಡ ಚಿತ್ರದ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ರಾಜಮಾರ್ತಾಂಡ

ರಾಜಮಾರ್ತಾಂಡ ಚಿತ್ರವನ್ನು ನಿರ್ದೇಶಕ ಕೆ ರಾಮನಾರಾಯಣ್ ಅವರು ನಿರ್ದೇಶಿಸಿದ್ದಾರೆ. ನಟ ಚಿರಂಜೀವಿ ಸರ್ಜಾ ಅವರಿಲ್ಲದೆ ಸಿನಿಮಾ ಪ್ರಚಾರ ಮತ್ತು ಬಿಡುಗಡೆ ಮಾಡಲು ತಮಗಾದ ಕಷ್ಟವನ್ನು ವಿವರಿಸಿದ್ದರಯ. ಜೊತೆಗೆ ಜನರಿಗೆ ಚಿರಂಜೀವಿ ಸರ್ಜಾ ಅವರ ಮೇಲಿರುವ ಪ್ರೀತಿ ತಮಗೆ ಅರ್ಥವಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ವರದಿಯ ಪ್ರಕಾರ, ರಾಜಮಾರ್ತಾಂಡ ಚಿತ್ರದ ಚಿತ್ರೀಕರಣವು 2016 ರ ಕೊನೆಯಲ್ಲಿ ಪ್ರಾರಂಭವಾಗಿತ್ತು. ಆದರೆ ಚಿರಂಜೀವಿ ಒಂದು ವರ್ಷದ ನಂತರ ಚಿತ್ರತಂಡಕ್ಕೆ ಸೇರಿಕೊಂಡಿದ್ದರು. ಸಿನಿಮಾದಲ್ಲಿ ಹಳೆಗನ್ನಡವನ್ನು ಹೆಚ್ಚಾಗಿ ಬಳಸಲಾಗಿದೆ. ಒಂದು ದೃಶ್ಯದಲ್ಲಿ ನಟನ ಮೂಲ ಧ್ವನಿಯನ್ನು ಉಳಿಸಿಕೊಳ್ಳಲಾಗಿದೆ. ಉಳಿದದ್ದಕ್ಕೆ ಧ್ರುವ ಸರ್ಜಾ ದನಿಯಾಗಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಚಿರಂಜೀವಿ ಅವರ ಮಗ ರಾಯನ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Action prince Dhruva Sarja birthday celebration at home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X