ದರ್ಶನ್-ಧ್ರುವ ಸರ್ಜಾ: ಮನಸ್ತಾಪವಿದೆ ಎಂದು ಒಪ್ಪಿಕೊಂಡು, ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದ ನಟ ಧ್ರುವ ಸರ್ಜಾ!
ಕಾವೇರಿ ಹೋರಾಟವನ್ನು ಬೆಂಬಲಿಸಿ ಕನ್ನಡ ಚಿತ್ರರಂಗ ಪ್ರತಿಭಟನೆ ನಡೆಸಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು ನಟರು ಭಾಗವಹಿಸಿದ್ದರು. ಈ ವೇಳೆ ನಡೆದ ಒಮದು ಘಟನೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಮನ ಸೆಳೆದಿತ್ತು. ಅದು ನಟ ದರ್ಶನ್ ತೂಗುದೀಪ ಬರುತ್ತಿದ್ದಂತೆ ನಟ ಧ್ರುವ ಸರ್ಜಾ ವೇದಿಕೆಯಿಂದ ಹೊರಟು ಹೋಗಿದ್ದು.
ಎಸ್....ಇದು ನಟ ದರ್ಶನ್ ತೂಗುದೀಪ ಅವರ ಅಭಿಮಾನಿಗಳಲ್ಲಿ ಭಾರೀ ಕೋಪಕ್ಕೆ ಕಾರಣವಾಗಿತ್ತು. ನಟನಿಗೆ ಅಗೌರವ ತೋರಿಸಲಾಗಿದೆ ಎಂದು ಫ್ಯಾನ್ಸ್ ವಾರ್ ಶುರುವಾಗಿತ್ತು. ಇಬ್ಬರು ನಟರು ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ. ಸದ್ಯ ಈ ವದಂತಿ ನಿಜವಾಗಿದ್ದು, ಇಬ್ಬರ ನಡುವೆ ಮನಸ್ತಾಪ ಇರುವುದು ನಿಜ ಎಂಬುದನ್ನು ಆಕ್ಷನ್ ಪ್ರಿನ್ಸ್ ಒಪ್ಪಿಕೊಂಡಿದ್ದಾರೆ.

ನನ್ನ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದ ಧ್ರುವ ಸರ್ಜಾ!
ಹುಟ್ಟುಹಬ್ಬದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಟ ಧ್ರುವ ಸರ್ಜಾ, "ದರ್ಶನ್ ಸರ್ ಬಗ್ಗೆ ಹೇಳಿವುದಾದರೇ ಅವರು ನಮ್ಮ ಸೀನಿಯರ್. ಅವರಿಗೆ ನಾವು ಗೌರವ ಕೊಟ್ಟೆ ಕೊಡುತ್ತೇವೆ. ಅವರು ಮುಂದೆ ಇದ್ದಾಗ ಮಾತ್ರವಲ್ಲ. ಅವರು ಇಲ್ಲದ ಸಮಯದಲ್ಲೂ ನಾವು ಅಷ್ಟೇ ಮರ್ಯಾದೆ ಕೊಡುತ್ತೇವೆ. ಆದರೆ, ನನಗೆ ಅವರ ಬಳಿ ಒಂದೆರಡು ಪ್ರಶ್ನೆ ಕೇಳಬೇಕಿದೆ. ಅದು ಕೇಳಿದ ಮೇಲೆ ನನಗೆ ಕ್ಲಿಯರ್ ಆಗುತ್ತದೆ. ಅದಕ್ಕೆ ಉತ್ತರ ಸಿಗದೆ ನಾನು ಮನಸಲ್ಲಿ ಒಂದು ಹೊರಗಡೆ ಒಂದು ನಾಟಕ ಮಾಡೋಕೆ ಸಾಧ್ಯವಿಲ್ಲ. ನನ್ನ ಮನಸಲ್ಲಿ ಒಂದು ಇಟ್ಟಿಕೊಂಡು ಎಲ್ಲರನ್ನು ಮೆಚ್ಚಿಸೋಕೆ ನಾಟಕವಾಡುವ ಅವಶ್ಯಕತೆ ನನಗಿಲ್ಲ. ಅಷ್ಟಕ್ಕೂ ನಾವು ಯಾಕೆ ಆರ್ಟಿಫಿಷಿಯಲ್ ಆಗಿ ಇರಬೇಕು. ಫೇಕ್ ಯಾಕೆ ಮಾಡಬೇಕು" ಎಂದು ಪ್ರಶ್ನಿಸಿದ್ದಾರೆ.
ನಮಗೂ ಸೆಲ್ಫ್ ರೆಸ್ಪೆಕ್ ಇರುತ್ತೆ- ಧ್ರುವ ಸರ್ಜಾ
"ನಮಗೂ ಸೆಲ್ಫ್ ರೆಸ್ಪೆಕ್ ಇರುತ್ತೆ. ಅದಲ್ಲದೆ ಅವರು ನಮ್ಮ ಸೀರಿಯರ್. ಅವರು ಇದ್ದಾಗಲೂ, ಇಲ್ಲದಾಗಲೂ ನಾವು ಮರ್ಯಾದೆ ಕೊಡುತ್ತೇವೆ. ಆದರೆ, ನನಗೆ ಮನಸಲ್ಲಿ ಒಂದು ಹೊರಗಡೆ ಒಂದು ರೀತಿ ಇರೋಕೆ ಆಗಲ್ಲ. ಅವರು ನಮ್ಮ ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ್ದಾರೆ. ಅದರ ಬಗ್ಗೆ ಗೌರವವಿದೆ. ನನಗೆ ಇರುವ ಪ್ರಶ್ನೆಗಳಿಗೆ ಅವರ ಬಳಿ ಉತ್ತರ ಕೇಳಿ ಕ್ಲಿಯರ್ ಮಾಡಿಕೊಳ್ತಿನಿ. ಅದು ಆಗಬಹುದು , ಆಗದೇನು ಇರಬಹುದು ಅದು ನಮ್ಮ ವೈಯಕ್ತಿಕ" ಎಂದು ತಿಳಿಸಿದ್ದಾರೆ.

"ಆದರೆ, ಈ ಬೆಳವಣಿಗೆಗಳು ಆರಂಭವಾದ ಮೇಲೆ, ಸಾಕಷ್ಟು ಜನ ನನ್ನ ಹೆಸರಿನಲ್ಲಿ ಫೆಕ್ ಅಕೌಂಟ್‌ಗಳನ್ನು ಕ್ರಿಯೇಟ್ ಮಾಡಿ, ಏನೇನೋ ಮೇಸೆಜ್ ಮಾಡಿಕೊಂಡು ನಮ್ಮ ನಡುವೆ ದ್ವೇಷ ಬೆಳೆಸುತ್ತಿದ್ದಾರೆ. ಇದು ನಿಲ್ಲಿಸಿ. ಇಲ್ಲ ತಗಲಾಕ್ಕೋಬೇಡಿ" ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ನನ್ನ ಪ್ರಶ್ನೆಗಳನ್ನು ಪರ್ಸನಲ್ ಆಗಿ ಕೇಳಿ ಪರಿಹರಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬ
ಶುಕ್ರವಾರ (ಅಕ್ಟೋಬರ್ 06) ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ರಾತ್ರಿಯಿಂದಲೇ ಸೆಲಬ್ರೆಷನ್ ಆರಂಭವಾಗಿದ್ದು, ಮೂರು ವರ್ಷಗಳ ಬಳಿಕ ಬರ್ತ್‌ಡೇ ಆಚರಿಸಿಕೊಳ್ಳುತ್ತಿರುವ ಅವರಿಗೆ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದಾರೆ.ಬ ರ್ತ್‌ಡೇ ಹಿನ್ನೆಲೆ ಅವರ ಸಾಲು ಸಾಲು ಹೊಸ ಸಿನಿಮಾ ಘೋಷಣೆ, ಬಿಡುಗಡೆಯಾಗಲಿರುವ ಸಿನಿಮಾಗಳ ಅಪ್‌ಡೇಟ್ ಸಿಗಲಿದೆ. ಜೊತೆಗೆ ಈ ಹುಟ್ಟುಹಬ್ಬಕ್ಕೆ ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ 'ರಾಜಮಾರ್ತಾಂಡ' ಬಿಡುಗಡೆಯಾಗಿದೆ. ಅಭಿಮಾನಿಗಳ ಜೊತೆಗೆ ರಾಜಮಾರ್ತಾಂಡ ನೋಡುವ ಮೂಲಕ ಧ್ರುವ ಹುಟ್ಟುಹಬ್ಬ ಆಚರಿಸಿದ್ದಾರೆ.


Click it and Unblock the Notifications











