»   » ಭರ್ಜರಿ ಯಶಸ್ಸಿನಲ್ಲಿ ಹೊಸ ಚಿತ್ರಗಳನ್ನ ಅನೌನ್ಸ್ ಮಾಡಿದ ಆಕ್ಷನ್ ಪ್ರಿನ್ಸ್

ಭರ್ಜರಿ ಯಶಸ್ಸಿನಲ್ಲಿ ಹೊಸ ಚಿತ್ರಗಳನ್ನ ಅನೌನ್ಸ್ ಮಾಡಿದ ಆಕ್ಷನ್ ಪ್ರಿನ್ಸ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಯಂಗ್ ಸ್ಟಾರ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಶತದಿನೋತ್ಸವ ಪೂರೈಸಿದೆ. 'ಭರ್ಜರಿ' ಚಿತ್ರದ ನಂತರ ಧ್ರುವ ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪೂಗರು ಚಿತ್ರ ಅನೌನ್ಸ್ ಮಾಡಿದ ನಂತರ ಧ್ರುವ ಮೂರ್ನಾಲ್ಕು ನಿರ್ಮಾಪಕರಿಗೆ ಡೇಟ್ ಕೊಟ್ಟಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಿತ್ತು.

ಆದರೆ ಭರ್ಜರಿ ಯಶಸ್ಸಿನಲ್ಲಿರುವ ಧ್ರುವ ಅಭಿನಯದ ಮುಂದಿನ ಸಿನಿಮಾಗಳು ಯಾವುವು ಅನ್ನೋ ಸಣ್ಣದೊಂದು ಸುಳಿವು ನೀಡಿದ್ದಾರೆ ಸ್ಯಾಂಡಲ್ ವುಡ್ ನ ನಿರ್ಮಾಪಕರುಗಳು. 'ಭರ್ಜರಿ' ಚಿತ್ರಕ್ಕೆ ಶುಭಕೋರುವ ಮೂಲಕ ಧ್ರುವ ಮುಂದಿನ ಚಿತ್ರಗಳನ್ನ ನಾವು ನಿರ್ಮಾಣ ಮಾಡುತ್ತೇವೆ ಎನ್ನುತ್ತಿದ್ದಾರೆ.

Action prince dhruva sarja's two movie posters are released today

ಚಮಕ್ ಸಿನಿಮಾ ನಿರ್ಮಾಣ ಮಾಡಿರುವ ಪ್ರೊಡ್ಯುಸರ್ ಟಿ ಆರ್ ಚಂದ್ರಶೇಖರ್ ಧ್ರುವ ಸರ್ಜಾ ಅವರಿಗೆ ಶುಭಕೋರಿ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ದರ್ಶನ್ ಅಭಿನಯದ ಜಗ್ಗುದಾದ ಸಿನಿಮಾ ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದ ರಾಘವೇಂದ್ರ ಹೆಗಡೆ 'ಆರ್ ಹೆಚ್ ಎಂಟರ್ಟೈನ್ಮೆಂಟ್' ನಿಂದ ಪ್ರೊಡಕ್ಷನ್ ನಂ 2 ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

Action prince dhruva sarja's two movie posters are released today

ಭರ್ಜರಿ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಧ್ರುವ ಇನ್ನು ಮುಂದೆ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವುದಾಗಿ ತಿಳಿಸಿದ್ದರು. ಹಾಗಾಗಿ ಇನ್ನು ಮುಂದೆ ವರ್ಷಕ್ಕೆ ಒಂದು ಧ್ರುವ ಆಕ್ಟ್ ಮಾಡಿರುವ ಚಿತ್ರಗಳನ್ನ ನಿರೀಕ್ಷೆ ಮಾಡಬಹುದಾಗಿದೆ.

English summary
Action Prince Dhruva sarja's two movie posters are released today. He is acting in a well-known production company of Kannada industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X