ಪವರ್ ಸ್ಟಾರ್ 'ಚಕ್ರವ್ಯೂಹ' ದಲ್ಲಿ ಖಳನಟನಾಗಿ ಅಭಿಮನ್ಯು ಸಿಂಗ್!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ 2016ನೇ ವರ್ಷದಲ್ಲಿ ಫುಲ್ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ಅದೇನಪ್ಪಾ ಅಂದ್ರೆ ನಿರ್ದೇಶಕ ದುನಿಯಾ ಸೂರಿ ಆಕ್ಷನ್-ಕಟ್ ಹೇಳಿರುವ, ರಾಧಿಕಾ ಪಂಡಿತ್, ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ, ಬಹುನಿರೀಕ್ಷಿತ 'ದೊಡ್ಮನೆ ಹುಡುಗ' ಚಿತ್ರದ ಚಿತ್ರೀಕರಣ ಬಹಳ ಭರದಿಂದ ಸಾಗುತ್ತಿದ್ದು, 2016 ಪವರ್ ಸ್ಟಾರ್ ಹುಟ್ಟುಹಬ್ಬದಂದು ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.['ಚಕ್ರವ್ಯೂಹ' ಭೇದಿಸಲಿರುವ ಪವರ್ ಸ್ಟಾರ್ ಪುನೀತ್]
ಜೊತೆಗೆ ಪುನೀತ್ ಅವರ 25ನೇ ಚಿತ್ರ 'ಚಕ್ರವ್ಯೂಹ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರವನ್ನು 2016ರಲ್ಲಿ ತೆರೆಗೆ ತರಲು ತಮಿಳು ನಿರ್ದೇಶಕ ಎಮ್ ಸರವನನ್ ಅವರು ಪ್ಲಾನ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಪುನೀತ್ ಅವರೊಂದಿಗೆ ಡ್ಯುಯೆಟ್ ಹಾಡಲಿದ್ದು, 'ಎನ್ನೈ ಅರಿಂದಾಲ್' ಖ್ಯಾತಿಯ ತಮಿಳು ನಟ ಅರುಣ್ ವಿಜಯ್ ಅವರು ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದಾರೆ.[ಪ್ರಾಣಾಪಾಯದಿಂದ ಬಚಾವ್ ಆದ 'ಚಕ್ರವ್ಯೂಹ' ಕೇಡಿ ಅರುಣ್ ವಿಜಯ್]

ಇದೀಗ 'ಚಕ್ರವ್ಯೂಹ' ಚಿತ್ರದಿಂದ ಬಂದಿರುವ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಬಾಲಿವುಡ್, ಟಾಲಿವುಡ್, ಕಾಲಿವುಡ್, ನಲ್ಲಿ ಖಳನಟನಾಗಿ ಮಿಂಚಿರುವ ಬಹುಭಾಷಾ ನಟ ಅಭಿಮನ್ಯು ಸಿಂಗ್ ಅವರು ಕೂಡ ಈ ಚಿತ್ರದಲ್ಲಿ ವಿಲನ್ ಪಾತ್ರ ವಹಿಸಲಿದ್ದು, ನಟ ಅರುಣ್ ವಿಜಯ್ ಅವರಿಗೆ ಸಾಥ್ ನೀಡಲಿದ್ದಾರೆ.[ಪುನೀತ್ ರಾಜ್ ಕುಮಾರ್ ಗೆ ಟಕ್ಕರ್ ಕೊಡಲಿರುವ ತಮಿಳು ಕೇಡಿ]
ಅಂದಹಾಗೆ ಬೇರೆ ಭಾಷೆಗಳಲ್ಲಿ ವಿಲನ್ ಪಾತ್ರದ ಮೂಲಕ ತಮ್ಮ ಖದರ್ ತೋರಿರುವ ಈ ಇಬ್ಬರು ನಟರಿಗೂ ಸ್ಯಾಂಡಲ್ ವುಡ್ ಕ್ಷೇತ್ರ ಹೊಸದಾಗಿರುವುದರಿಂದ, ಕನ್ನಡದಲ್ಲಿ ಅವರ ನಟನೆ ಹೇಗಿರುತ್ತದೆ ಅನ್ನೋದು ಚಿತ್ರ ಬಿಡುಗಡೆಯಾದ ನಂತರ ತಿಳಿಯಬೇಕಿದೆ.


Click it and Unblock the Notifications











