For Quick Alerts
  ALLOW NOTIFICATIONS  
  For Daily Alerts

  ನನ್ನ ಧ್ವನಿ ಗಾಡ್‌ ಗಿಫ್ಟ್‌ ಜೊತೆಗೆ ಡ್ಯಾಡ್‌ ಗಿಫ್ಟ್‌: ಅಭಿಷೇಕ್‌ ಅಂಬರೀಶ್‌

  |

  ಜೂನಿಯರ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಇಂದು (ಅಕ್ಟೋಬರ್ 3) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಧ್ಯರಾತ್ರಿಯಿಂದಲೇ ಅಭಿಷೇಕ್‌ ಅಂಬರೀಶ್‌ ಮನೆಯ ಬಳಿ ಅಭಿಮಾನಿಗಳು ಜಮಾಯಿಸಿದ್ದು, ಅಭಿಷೇಕ್ ಅಭಿಮಾನಿಗಳು ಹಾಗೂ ಗೆಳೆಯರ ಜೊತೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  ತಮ್ಮ ಹುಟ್ಟುಹಬ್ಬದ ಖುಷಿ ಹಂಚಿಕೊಂಡಿರುವ ಅಭಿಷೇಕ್‌ ಅಂಬರೀಶ್‌ ನನ್ನೆಲ್ಲಾ ಗೆಳೆಯರು ನನಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ತುಂಬಾ ಜನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ. ಚಿತ್ರರಂಗದ ಎಲ್ಲಾ ಸ್ನೇಹಿತರು ವಿಶ್‌ ಮಾಡಿದ್ದಾರೆ. ಇವತ್ತು ನನ್ನ ಜನ್ಮ ನಕ್ಷತ್ರ, ಜನ್ಮ ದಿನ ಒಂದೇ ದಿನ ಬಂದಿದೆಯಂತೆ. ಹೀಗಾಗಿ ತುಂಬಾ ವಿಶೇಷ ಅಂತಾ ಅಮ್ಮ ಪೂಜೆಗಳನ್ನು ಮಾಡಿಸುತ್ತಿದ್ದಾರೆ ಎಂದಿದ್ದರು.

  ರೂಡ್ ಕಾಪ್ ರುದ್ರ.. ಗನ್‌ಗಳನ್ನಿಟ್ಟು ಅಭಿ - ಸೂರಿ ಲಗೋರಿ.. ಕಿಕ್‌ ಕೊಡ್ತಿದೆ 'ಬ್ಯಾಡ್ ಮ್ಯಾನರ್ಸ್' ಟೀಸರ್ರೂಡ್ ಕಾಪ್ ರುದ್ರ.. ಗನ್‌ಗಳನ್ನಿಟ್ಟು ಅಭಿ - ಸೂರಿ ಲಗೋರಿ.. ಕಿಕ್‌ ಕೊಡ್ತಿದೆ 'ಬ್ಯಾಡ್ ಮ್ಯಾನರ್ಸ್' ಟೀಸರ್

  ರಚಿತಾ ರಾಮ್‌ ನಮ್ಮ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದಾರೆ. ಅವರು ನಮ್ಮ ಕನ್ನಡ ಚಿತ್ರರಂಗದ ಅದ್ಭುತ ನಟಿ. ಟಾಪ್‌ ಹಿರೋಯಿನ್‌ ಅಂತಾನೆ ಹೇಳಬಹುದು ಎಂದು ಹೇಳಿರುವ ಅಭಿಷೇಕ್‌ ಅಂಬರೀಶ್‌, ರಚಿತಾ ರಾಮ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ನಿಮ್ಮ ವೃತ್ತಿ ಜೀವನ ಇನ್ನೂ ಉತ್ತುಂಗಕ್ಕೆ ಹೋಗಲಿ ಎಂದು ಹಾರೈಸಿದ್ದಾರೆ.

  ಇನ್ನು ತಮ್ಮ ಹುಟ್ಟುಹಬ್ಬ ಆಚರಣೆ ಬಗ್ಗೆ ಮಾತನಾಡಿದ ಅವರು, ಪ್ರತಿವರ್ಷ ನನ್ನ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷತೆ ಇರುತ್ತದೆ. ಈ ವರ್ಷ ಇನ್ನೂ ವಿಶೇಷವಾಗಿದೆ. ಜನರಿಗೆ ನಮ್ಮ ತಂದೆ ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ ಮೇಲಿರುವ ಪ್ರೀತಿ ಅವರ ಮಗನಾದ ನನ್ನ ಮೇಲೆ ಒಂಚೂರಾದ್ರೂ ಇರಲಿ ಎನ್ನುವ ಆಸೆ ನನಗಿದೆ. ಜನರು ಮತ್ತು ನಮ್ಮ ಸಂಬಂಧ ಮುಂದುವರಿಯಬೇಕು ಎನ್ನುವ ಆಸೆ ಖಂಡಿತವಾಗಿಯೂ ಇರುತ್ತದೆ. ಅದರೆ ಜನ ಈಗಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅದು ನಮ್ಮ ತಂದೆ ಗಳಿಸಿರುವ ಹೆಸರು, ಪ್ರೀತಿ. ಅದೇ ಆಶೀರ್ವಾದ ನಮ್ಮ ಮೇಲೂ ಜನರಿಗೆ ಅದೇ ನನಗೆ ಖುಷಿ ಎಂದು ಸಂತಸ ಹಂಚಿಕೊಂಡರು.

  ಅಭಿಷೇಕ್‌ ಅಂಬರೀಶ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಮುಂದಿನ ಚಿತ್ರ 'ಬ್ಯಾಡ್‌ ಮ್ಯಾನರ್ಸ್' ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಪ್ರೇಕ್ಷಕರು ಅಭಿಷೇಕ್‌ ಅಂಬರೀಶ್‌ ಧ್ವನಿಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಮಾತನಾಡಿದ ಅಭಿಷೇಕ್‌, ನನ್ನ ಧ್ವನಿ ಗಾಡ್‌ ಗಿಫ್ಟ್‌ ಜೊತೆಗೆ ಡ್ಯಾಡ್‌ ಗಿಫ್ಟ್‌, ಅದು ಅಪ್ಪಾಜಿ ಅವರಂತೆಯೇ ಸಿಮಿಲರ್ ಆಗಿ ಬಂದಿದೆ. ಆದರೆ ಮೂಲ ಧ್ವನಿ ಯಾವತ್ತಿದ್ರೂ ಟಾಪ್‌ನಲ್ಲಿರುತ್ತದೆ. ಓಲ್ಡ್‌ ಈಸ್‌ ಗೋಲ್ಡ್‌ , ಅಪ್ಪಾಜಿ ಅವರ ಧ್ವನಿಗೂ ನನ್ನ ಧ್ವನಿಗೂ ಸ್ವಲ್ಪ ಸಾಮ್ಯತೆ ಇದೆ ಒಪ್ಪಿಕೊಳ್ಳುತ್ತೇನೆ. ಡೈರೆಕ್ಟರ್‌ ಅದನ್ನು ಬಳಸಿಕೊಂಡಿದ್ದಾರೆ.ಇನ್ನು ಬ್ಯಾಡ್‌ ಮ್ಯಾನರ್ಸ್ ಸಲ್ವ ಮಟ್ಟಿನ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದೆ. ಚಿತ್ರ ಈ ವರ್ಷದ ಅಂತ್ಯದೊಳಗೆ ಚಿತ್ರಮಂದಿರಗಳಿಗೆ ಬರುತ್ತದೆ ಎನ್ನುವ ಭರವಸೆ ನೀಡಿದರು.

  ಇನ್ನು ದಸರಾ ಸಮಯದಲ್ಲಿ ಬಿಡುಗಡೆಯಾಗಿರುವ ಅಭಿಷೇಕ್‌ ಅಂಬರೀಶ್‌ ಮೂರನೇ ಚಿತ್ರ 'ಕಾಳಿ' ಸಿನಿಮಾದ ಪೋಸ್ಟರ್ ಬಗ್ಗೆ ಮಾತನಾಡಿದ ಅವರು, 'ಕಾಳಿ' ಕೂಡ ಒಂದು ನಿರೀಕ್ಷಿತ ಸಿನಿಮಾ, ಕತೆ ಅಧ್ಬುತವಾಗಿ ಬಂದಿದೆ. ಹಿರಿಯ ಕಲಾವಿದರೇ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಾರೆ. ಸೈಲೆಂಟ್‌ ಆಗಿ ಆ ಸಿನಿಮಾವನ್ನು ಬೇರೆ ರೀತಿ ಪ್ರಚಾರ ಮಾಡಿ ಹೊಸ ರೀತಿಯಾಗಿ ತರುವ ಪ್ಲಾನ್‌ ಇದೆ ಎಂದು ತಮ್ಮ ಮುಂದಿನ ಚಿತ್ರದ ಬಗ್ಗೆ ಅಭಿಷೇಕ್‌ ಹೇಳಿದ್ದಾರೆ.

  English summary
  Sandalwood Abhishek Ambareesh React On Bad Manners Movie Teaser.
  Monday, October 3, 2022, 21:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X